ಆಲೂರು: ಮಳೆ ಉತ್ತಮವಾದ ಹಿನ್ನೆಲೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಭರದಿಂದಸಾಗಿದೆ. ಆದರೆ, ರೈತರಿಗೆ ಸಮಯಕ್ಕೆ ಸರಿಯಾಗಿಯೂರಿಯಾ ಸಿಗದೇ ಪರದಾಡುವಂತಾಗಿದೆ.ತಾಲೂಕಿನ ಸುತ್ತಮುತ್ತಲ ಗ್ರಾಮದ ರೈತರುಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿಯೂರಿಯಾಗೆ ಸರತಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ.
ಆಲೂರು ಪಟ್ಟಣದ ಟಿಎಪಿಸಿ ಎಂಎಸ್‌ಗೆ ಶನಿವಾರ ಯೂರಿಯ ಬಂದಿದೆ ಎಂಬ ಸುದ್ದಿ ತಿಳಿದು ರೈತರು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಗೊಬ್ಬರ ಖರೀದಿಸಲು ಮುಂದಾದರು. ಆದರೆ ಕೆಲ ರೈತರು ನಮಗೆ ಹೆಚ್ಚು ಗೊಬ್ಬರ ನೀಡಬೇಕು ಎಂದು ಒತ್ತಾಯಿಸಿ ಗೊಂದಲ ಎಬ್ಬಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕಬ್ಬಿನಹಳ್ಳಿ ಜಗದೀಶ್ ಟಿಎಪಿಸಿಎಂಎಸ್ ಆವರಣಕ್ಕೆ ಆಗಮಿಸಿ ಶನಿವಾರ ಕೇವಲ 480 ಚೀಲ ಮಾತ್ರ ದಾಸ್ತಾನು ಬಂದಿದೆ.ಒಬ್ಬರಿಗೆ ಎರಡು ಚೀಲ ಗೊಬ್ಬರ ನೀಡಲಾಗುತ್ತಿದೆ.ನಾಳೆ ಪುನಃ ಯೂರಿಯಾ ಬರುವ ನಿರೀಕ್ಷೆಯಿದೆ ಎಂದು ರೈತರನ್ನು ಸಮಾಧಾನ ಪಡಿಸಿದರು.
ಸಮರ್ಪಕವಾಗಿ ಗೊಬ್ಬರ ವಿತರಿಸಿ: ರೈತ ವೆಂಕಟೇಗೌಡ ಮಾತನಾಡಿ, ನಮಗೆ ಹದಿನೈದು ಚೀಲ ಗೊಬ್ಬರದ ಅವಶ್ಯಕತೆಯಿದೆ. ಆದರೆ ಕೇವಲ ಎರಡು ಚೀಲ ಗೊಬ್ಬರ ನೀಡಿದರೆ ಸಾಲದು. ಹೆಚ್ಚು ಗೊಬ್ಬರ ನೀಡಬೇಕು ಎಂದು ಸಂಬಂಧಪಟ್ಟ ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದರು. ಯೂರಿಯಹಾಕದಿದ್ದರೇ ಮೆಕ್ಕೆಜೋಳ ಭೂಮಿಯಿಂದ ಮೇಲಕ್ಕೆ ಬರುವುದಿಲ್ಲ. ಯೂರಿಯಾ ಗೊಬ್ಬರದಅವಶ್ಯಕತೆ ಬಹಳಯಿದೆ. ಹಾಗಾಗಿಸಮಪರ್ಕವಾಗಿ ಗೊಬ್ಬರ ಪೂರೈಸುವಂತೆಕದಾಳು ಗ್ರಾಮದ ರೈತ ಬಸವರಾಜ್ ಮನವಿ ಮಾಡಿದರು.