Advertisement

ಸಾರಿಗೆ ಬಸ್‌ಗಳಲ್ಲಿ ಪ್ರಾಣ ಪಣಕ್ಕಿಟ್ಟು ಸಂಚರಿಸುವ ವಿದ್ಯಾರ್ಥಿಗಳು

11:58 AM Feb 28, 2022 | Team Udayavani |

ಗುಡಿಬಂಡೆ: ತಾಲೂಕಿನ ವಿವಿಧ ಹಳ್ಳಿಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ವಿದ್ಯಾಭ್ಯಾಸ ಮಾಡಲು ಸಂಚರಿಸುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಇರುವುದರಿಂದ ಒಂದೇ ಬಸ್‌ನಲ್ಲಿ ಬಾಗಿಲು ಬಳಿ ನಿಂತು ಪ್ರಾಣ ಪಣಕ್ಕಿಟ್ಟು ಸಂಚರಿಸುವಂತಹ ಪರಿಸ್ಥಿತಿ ಉಂಟಾಗಿದ್ದು, ಸಾರಿಗೆ ಅಧಿಕಾರಿಗಳು ಮಾತ್ರ ವಿದ್ಯಾರ್ಥಿಗಳ ಜೀವಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.

Advertisement

ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೭ ರ ಸುತ್ತಮುತ್ತಲಿನ ಹಳ್ಳಿಗಳಾದ ವರ್ಲಕೊಂಡ, ಬೀಚಗಾನಹಳ್ಳಿ, ಸೋಮೇನಹಳ್ಳಿ, ಇನ್ನಿತರೇ ಹಳ್ಳಿಗಳಿಂದ ವಿದ್ಯಾಭ್ಯಾಸ ಮಾಡಲು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಪ್ರತಿ ಹೋಗಿ ಬರಲು ವಿದ್ಯಾರ್ಥಿಗಳು ಸರಿಯಾದ ಸರ್ಕಾರಿ ಸಾರಿಗೆ ಇಲ್ಲದೆ, ಬಸ್ ವ್ಯವಸ್ಥೆಗಳು ಇದ್ದರು ಸಹ ಗ್ರಾಮಗಳ ಬಳಿ ಬಸ್‌ಗಳು ನಿಲ್ಲಸದೇ ಹೋಗುವುದರಿಂದ, ಯಾವುದೋ ಒಂದು ಬಸ್‌ನಲ್ಲಿ ನೂಕು ನುಗ್ಗುಲು ಮಾಡಿಕೊಂಡು, ಬಾಗಿಲು ಬಳಿಯೇ ನಿಂತು ಪ್ರಾಣ ಪಣಕ್ಕಿಟ್ಟು ಸಂಚರಿಸುವಂತಹ ಪರಿಸ್ಥಿತಿ ಗುಡಿಬಂಡೆ ತಾಲೂಕಿನ ವಿದ್ಯಾರ್ಥಿಗಳಿಗೆ ಬಂದೊದಗಿದೆ.

ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ಬಸ್‌ಗಳು ಬೀಚಗಾನಹಳ್ಳಿ ಕ್ರಾಸ್, ಚೆಂಡೂರು ಕ್ರಾಸ್, ವರ್ಲಕೊಂಡ ಇನ್ನಿತರೇ ಗ್ರಾಮಗಳ ಬಳಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ನಿಲ್ಲಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಪೋಷಕರು ಹಾಗೂ ಜನಪ್ರತಿನಿಧಿಗಳು ತಿಳಿಸಿದರು, ಸಾರಿಗೆ ಅಧಿಕಾರಿಗಳು ಮಾತ್ರ ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಲೇ ಬರುತ್ತಿದ್ದಾರೆ.

ಅದ್ದರಿಂದ ಈಗಲಾದರೂ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲಕರ ವಾಗುವಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಸಂಚರಿಸುವಂತೆ ಸೂಕ್ತ ಕ್ರಮ ತೆಗೆದುಕೊಂಡು, ವಿದ್ಯಾರ್ಥಿಗಳ ಜೀವದ ಜೊತೆ ಆಟ ಆಡುವುದನ್ನು ನಿಲ್ಲಿಸುತ್ತಾರೆಯೇ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next