Advertisement

ಶೌಚಾಲಯ ನಿರ್ವಹಣೆ ಕೊರತೆ:ಗುತ್ತಿಗಾರು ಶಾಲೆಗೆ ಶಿಕ್ಷಣ ಸಂಯೋಜಕರ ಭೇಟಿ

11:57 AM Feb 08, 2018 | |

ಸುಬ್ರಮಣ್ಯ : ಶೌಚಾಲಯದ ನಿರ್ವಹಣೆ ಕೊರತೆ ಎದುರಿಸುತ್ತಿರುವ ಗುತ್ತಿಗಾರು ಸ.ಮಾ.ಹಿ. ಪ್ರಾಥಮಿಕ
ಶಾಲೆಗೆ ಮಂಗಳವಾರ ಸುಳ್ಯ ತಾ| ಶಿಕ್ಷಣ ಸಂಯೋಜಕ ಸುಂದರ್‌ ಕೇನಾಜೆ ಹಾಗೂ ಗುತ್ತಿಗಾರು ಕ್ಲಸ್ಟರ್‌ ಮಟ್ಟದ ಸಮೂಹ ಸಂಪನ್ಮೂಲ ವ್ಯಕ್ತಿ ರೇಖಾ ಸಿ. ಸೇಟ್‌ ಭೇಟಿ ನೀಡಿ ಶೌಚಾಲಯದ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

Advertisement

ಇಲ್ಲಿನ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಮಕ್ಕಳ ಬಳಕೆಯ ಶೌಚಾಲಯ ಶುಚಿತ್ವವಿಲ್ಲದೆ ಬಳಕೆಗೆ ಅಯೋಗ್ಯವಾಗಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಿಯ ಗ್ರಾ. ಪಂಚಾಯತ್‌ಗೆ ಮಾಹಿತಿ ನೀಡಿದರು.

ಶೌಚಾಲಯದ ಶುಚಿತ್ವ ಕೊರತೆಯಿಂದಾಗಿ ರೋಗರುಜಿನಗಳು ಸೃಷ್ಟಿಯಾಗಿ ರೋಗ ಗಳು ಹರಡಿ ಶಾಲಾ
ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ದುರಸ್ತಿಗೆ ಕ್ರಮವಹಿಸಬೇಕು, ಹಾಗೂ ಗುಣಮಟ್ಟದ ನೂತನ ಶೌಚಾಲಯ ಹೊಂದುವ ಕುರಿತು ಅಧಿಕಾರಿಗಳು ಸ್ಥಳೀಯಾಡಳಿತದ ಗಮನ ಸೆಳೆದಿದ್ದಾರೆ. ಶಿಕ್ಷಕರು ಹಾಗೂ ಎಸ್‌.ಡಿ.ಎಂ. ಸಿ. ಜತೆಗೆ ಚರ್ಚೆ ನಡೆಸಿ ಶಾಲಾ ಹಂತದಲ್ಲಿ ಕೂಡ ಲಭ್ಯ ಅನುದಾನ ಬಳಸಿಕೊಳ್ಳಲು ಸಲಹೆ ನೀಡಿದ್ದಾರೆ. 

ಶಾಲೆಯ ಶೌಚಾಲಯ ಶುಚಿತ್ವ ಕೊರತೆ ಎದುರಿಸುತ್ತಿರುವ ಕುರಿತು ಉದಯವಾಣಿ ಸುದಿನ ಜ. 30ರಂದು ವರದಿ ಪ್ರಕಟಿಸಿತ್ತು. ಶೌಚಾಲಯದ ಸ್ಥಿತಿಗತಿ ಹಾಗೂ ಇದರಿಂದ ಹರಡಬಹುದಾದ ರೋಗರುಜಿನಗಳ ಕುರಿತು ಜಾಗೃತಿಗೊಳಿಸಿತ್ತು. ಇದರ ಫ‌ಲವೋ ಎಂಬಂತೆ ಇದೀಗ ಶಿಕ್ಷಣ ಸಂಯೋಜಕರು, ಸಿ.ಆರ್‌.ಪಿ. ಅವರು ಶಾಲೆಗೆ ಭೇಟಿ ನೀಡಿ ಪರಿಹಾರಕ್ಕೆ ಮುಂದಾಗಿದ್ದಾರೆ.

ಭರವಸೆ
ಸಮಸ್ಯೆಗೆ ಸಕರಾತ್ಮಕವಾಗಿ ಗುತ್ತಿಗಾರು ಗ್ರಾ.ಪಂ. ಸ್ಪಂದಿಸಿದೆ. ಶೀಘ್ರದಲ್ಲಿ ಉಪಕರಣ ತರಿಸಿ ಈ ಶೌಚಾಲಯದ
ದುರಸ್ತಿಯನ್ನು ತಾತ್ಕಾಲಿಕವಾಗಿ ಮಾಡಲಾಗುವುದು. ಮುಂದಿನ ಕೆಲ ಅವಧಿಯಲ್ಲಿ ನೂತನ ಶೌಚಾಲಯ
ನಿರ್ಮಿಸುವ ಕುರಿತು ಶಿಕ್ಷಣ ಸಂಯೋಜಕರಿಗೆ ಭರವಸೆಯನ್ನು ಪಂಚಾಯತ್‌ನವರು ನೀಡಿದ್ದಾರೆ. ಇದನ್ನು ಶಿಕ್ಷಣ ಸಂಯೋಜಕ ಸುಂದರ್‌ ಕೇನಾಜೆ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಕ್ರಮಕ್ಕೆ ಮುಂದಾಗಿದ್ದೇವೆ
ಶುಚಿತ್ವ ಕೊರತೆ ಇರುವ ಶಾಲೆಯ ಶೌಚಾಲಯ ದುರಸ್ತಿಗೆ ಕ್ರಮವಹಿಸಲಾಗಿದೆ. ತಾ.ಪಂ. ನಿಂದ ಶುಚಿಗೊಳಿಸುವ ಮೆಷಿನ್‌ ಕೇಳಲಾಗಿದೆ. ಫೆ. 8ಕ್ಕೆ ಮೆಷಿನ್‌ ತಂದು ಶುಚಿತ್ವಗೊಳಿಸಿ ಮಕ್ಕಳಿಗೆ ಬಳಕೆ ಯೋಗ್ಯವನ್ನಾಗಿಸಲಾಗುವುದು.
-ಅಚ್ಯುತ ಗುತ್ತಿಗಾರು, ಗ್ರಾ.ಪಂ.
ಅಧ್ಯಕ್ಷ. ಗುತ್ತಿಗಾರು

Advertisement

Udayavani is now on Telegram. Click here to join our channel and stay updated with the latest news.

Next