Advertisement
ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗೂ ತಾಲೂಕು ಮಟ್ಟದ ಸಭೆಯಲ್ಲೂ ಶಿಕ್ಷಕರ ಕೊರತೆ ಬಗ್ಗೆ ದೊಡ್ಡಮಟ್ಟದ ಚರ್ಚೆಯಾಗಿದೆ. ಆದರೆ, ಸರ್ಕಾರದಿಂದ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ನೇಮಕಾತಿ ಮಾಡದಿರುವುದು ಕೊರತೆಗೆ ಕಾರಣವಾಗಿದೆ. ಒಂದು ಶಾಲೆಗೆ ಒಬ್ಬರೇ ಶಿಕ್ಷಕರಿದ್ದರೆ, ಕೆಲವು ಕಡೆ ಇಬ್ಬರು, ಮೂವರಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
Related Articles
Advertisement
219 ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕ: ಪ್ರೌಢಶಾಲಾ ವಿಭಾಗದಲ್ಲಿ ಒಟ್ಟು 326 ಅತಿಥಿ ಶಿಕ್ಷಕರ ಅಗತ್ಯವಿದೆ. ಆದರೆ, ಅದರಲ್ಲಿ ಈಗಾಗಲೇ 219 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕೆ.ಆರ್.ಪೇಟೆ 77 ಪೈಕಿ 51, ಮದ್ದೂರು 63 ಪೈಕಿ 42, ಮಳವಳ್ಳಿ 66 ಪೈಕಿ 44, ಮಂಡ್ಯ ಉತ್ತರ 21 ಪೈಕಿ 14, ಮಂಡ್ಯ ದಕ್ಷಿಣ 19 ಪೈಕಿ 14, ನಾಗಮಂಗಲ 29 ಪೈಕಿ 19, ಪಾಂಡವಪುರ 37 ಪೈಕಿ 25 ಹಾಗೂ ಶ್ರೀರಂಗಪಟ್ಟಣದ 14 ಅತಿಥಿ ಶಿಕ್ಷಕರ ಪೈಕಿ 10 ಮಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ.
456 ಶಿಕ್ಷಕರ ನೇಮಕಾತಿಗೆ ಮಂಜೂರು: ಪ್ರಸ್ತುತ ಸಾಲಿನಲ್ಲಿ ಜಿಲ್ಲೆಗೆ 456 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮಂಜೂರು ಮಾಡಿದೆ. ಈಗಾಗಲೇ ಇದರಲ್ಲಿ 444 ಮಂದಿ ದಾಖಲಾತಿ ಪರಿಶೀಲನೆ ನಡೆ ಸಿದ್ದು, ಪೊಲೀಸ್ ಪರಿಶೀಲನೆಗೆ ಕಳುಹಿಸಲಾಗಿದೆ. ಇದರಲ್ಲಿ 382 ಗಣಿತ ಹಾಗೂ ವಿಜ್ಞಾನ, 26 ಸಮಾಜ, 35 ಇಂಗ್ಲಿಷ್ ಹಾಗೂ ಸಿಬಿಝೆಡ್ ಇಬ್ಬರನ್ನು ನೇಮಕಾತಿ ಮಾಡಿಕೊಳ್ಳಲು ದಾಖಲಾತಿ ಪರಿಶೀಲನೆ ನಡೆಸಲಾಗಿದೆ.
ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಾಲಿನಲ್ಲಿ 456 ಶಿಕ್ಷಕರ ನೇಮಕಾತಿಗೆ ಮಂಜೂರು ಮಾಡಲಾಗಿದ್ದು, ಅಗತ್ಯ ದಾಖಲಾತಿ ಗಳ ಪರಿಶೀಲನೆ ನಡೆಯುತ್ತಿದೆ. ಅಲ್ಲದೆ, ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡು ಶಾಲೆಗಳಿಗೆ ನಿಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಕ್ರಮ ವಹಿಸಲಾಗಿದೆ. ● ಎಸ್.ಟಿ.ಜವರೇಗೌಡ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಡ್ಯ
-ಎಚ್.ಶಿವರಾಜು