ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೋವಿಡ್-19 ಪರಿಣಾಮ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಸಿಬ್ಬಂದಿ ಕೊರತೆ ಉಂಟಾಗಿದೆ. ಚಾಲಕ-ನಿರ್ವಾಹಕ ಹುದ್ದೆಗಳ ಜತೆಗೆ ಇತರೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಪ್ರಮಾಣ ಕೂಡ ಕಡಿಮೆಯಾಗಿದೆ.
ಅನುಕಂಪದ ಆಧಾರ ಮೇಲೆ ನೇಮಕಾತಿ ಹೊರತುಪಡಿಸಿ 2014-16ರಲ್ಲಿ ನೇಮಕಾತಿಯಿಂದ ಸುಮಾರು 4,000 ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗಿತ್ತು. ಆದರೆ ಸದ್ಯವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 4,600ಕ್ಕೂ ಹೆಚ್ಚು ಅನುಸೂಚಿಗಳಿದ್ದು, ಇದಕ್ಕೆ ಪ್ರತಿಯಾಗಿ 24,748 ಸಿಬ್ಬಂದಿ ಹಾಗೂ ಅ ಧಿಕಾರಿಗಳ ಅಗತ್ಯವಿದೆ. 22,406 ನೌಕರರು ಕಾರ್ಯನಿರ್ವಹಿಸುತ್ತಿದ್ದು, 2,342 ಸಿಬ್ಬಂದಿ ಕೊರತೆಯಿದೆ. ಇದರೊಂದಿಗೆ ಪ್ರತಿತಿಂಗಳು ನಿವೃತ್ತಿ, ಗೈರು ಹಾಜರಿ, ರಜೆ,ವೃಂದ ಬದಲಾವಣೆ ಸೇರಿದಂತೆ ಇನ್ನಿತರೆಕಾರಣಗಳಿಂದ ಚಾಲನಾ ಹುದ್ದೆಗಳ ಕೊರತೆ ಎದುರಾಗುತ್ತಿದೆ.
ಚಾಲಕ/ನಿರ್ವಾಹಕರೇ ಆಧಾರ: ಸಂಸ್ಥೆಯಲ್ಲಿ 8,533 ಚಾಲಕರ ಪೈಕಿಇರುವುದು 4,518 ಇದ್ದು, 4,015 ಖಾಲಿಯಿವೆ. 8,366 ನಿರ್ವಾಹಕರು ಬೇಕಾಗಿದ್ದು, 3,199 ಮಾತ್ರ ಇದ್ದಾರೆ. 5,167 ಹುದ್ದೆಗಳು ಖಾಲಿಯಿವೆ. ಆದರೆ ಸಂಸ್ಥೆಯಲ್ಲಿರುವ 8,255 ಚಾಲಕ/ನಿರ್ವಾಹಕರಿಂದ ಆದ್ಯತೆ ಆಧಾರದಮೇಲೆ ಚಾಲಕ ಅಥವಾ ನಿರ್ವಾಹಕ ಕಾರ್ಯ ತೆಗೆದುಕೊಳ್ಳಲಾಗುತ್ತಿದೆ. ಕೋವಿಡ್-19 ನಂತರದಲ್ಲಿ ಸಂಸ್ಥೆಯ ಎಲ್ಲಾ ಅನುಸೂಚಿಗಳು ಕಾರ್ಯಾಚರಣೆಗೊಳ್ಳುತ್ತಿದ್ದು, ಸಿಬ್ಬಂದಿ ಕೊರತೆಪರಿಣಾಮ ಕೆಲ ವಿಭಾಗಗಳಲ್ಲಿ ಬಸ್‌ಗಳಕಾರ್ಯಾಚರಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.
ಅಧಿಕಾರಿಗಳ ಕೊರತೆ: ವಾಯವ್ಯ ಸಾರಿಗೆ ಸಂಸ್ಥೆಗೆ ಬರಲು ಬಹುತೇಕ ಅಧಿ ಕಾರಿಗಳು ಹಿಂದೇಟು ಹಾಕುತ್ತಾರೆ.ಇನ್ನೂ ವಾಯವ್ಯ ಸಾರಿಗೆ ಕೋಟಾದಲ್ಲಿನೇಮಕವಾದವರು ಶಿಫಾರಸಿನ ಮೂಲಕಬೆಂಗಳೂರಿಗೆ ಜಿಗಿಯುವ ಕೆಲಸಆಗುತ್ತಿದೆ. ಸಂಚಾರಿ ಶಾಖೆಗೆ ಬೇಕಾದಎಟಿಎಂ, ಎಟಿಎಸ್ ಹುದ್ದೆಗಳುಖಾಲಿಯಿವೆ. ಇನ್ನೂ ನಾಲ್ಕು ಕಾನೂನು ಅಧಿಕಾರಿಗಳು ಕನಿಷ್ಟ ಮೂರು ಕಡೆಗಳಲ್ಲಿ ಪ್ರಭಾರ ಕಾರ್ಯ ಮಾಡುತ್ತಿದ್ದಾರೆ. ಧಾರವಾಡ, ಶಿರಸಿ ವಿಭಾಗದಲ್ಲಿ ಡಿಟಿಒ ಇಲ್ಲದೆ ತಿಂಗಳುಗಳೇ ಗತಿಸಿವೆ. ಕಾರ್ಮಿಕರಿಗೆ ಶಿಕ್ಷಾದೇಶ ಕೊಡಿಸುವ ಶಾಖೆಯ ಅಧಿ ಕಾರಿ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆ ನಿಭಾಯಿಸುವಂತಾಗಿದೆ. ಚಾಲನಾ ಸೇರಿ ಇನ್ನಿತರೆ ಸಿಬ್ಬಂದಿ ಸೇರಿದ ಪ್ರತಿ ವಿಭಾಗದಲ್ಲಿ 250-300 ಹುದ್ದೆಗಳು ಖಾಲಿಯಿವೆ.
ಸದ್ಯಕ್ಕಿಲ್ಲ ನೇಮಕಾತಿ!: ಸಂಸ್ಥೆಯಲ್ಲಿ ಖಾಲಿಯಿರುವ ಹಾಗೂ ಮುಂದಿನವರ್ಷಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಪರಿಗಣಿಸಿ ಐದಾರು ವರ್ಷಕ್ಕೊಮ್ಮೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ 2019 ಡಿಸೆಂಬರ್ ತಿಂಗಳಲ್ಲಿ 2814 ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಹರಿಂದ ಅರ್ಜಿಗಳನ್ನು ಕೂಡ ಸ್ವೀಕರಿಸಲಾಗಿತ್ತು. ಇದಕ್ಕಾಗಿ ವ್ಯವಸ್ಥಿತಿಟ್ರ್ಯಾಕ್ ನಿರ್ಮಾಣ ಕಾರ್ಯಕ್ಕೂ ಸಂಸ್ಥೆ ಮುಂದಾಗಿತ್ತು. ಆದರೆ ಕೋವಿಡ್-19ಹಿನ್ನೆಲೆಯಲ್ಲಿ ಈ ನೇಮಕಾತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವುದುಸಿಬ್ಬಂದಿ ಕೊರತೆ ಹೆಚ್ಚಾಗಲು ಪ್ರಮುಖ ಕಾರಣವಾಗಿದ್ದು, ತಾತ್ಕಾಲಿಕವಾಗಿ ಬಿಎಂಟಿಸಿಯಿಂದ ಚಾಲನಾ ಸಿಬ್ಬಂದಿಯನ್ನು ತಾತ್ಕಾಲಿಕ ನಿಯೋಜನೆಆಧಾರದ ಮೇಲೆಕರೆಯಿಸಿಕೊಳ್ಳಲಾಗುತ್ತಿದೆ. ಹೀಗಾಗಿ ನೇಮಕಾತಿ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ.
ಸಿಬ್ಬಂದಿಗೆ ತಕ್ಕಂತೆ ಅನುಸೂಚಿಗಳು : ಸಂಸ್ಥೆಯ ಸದ್ಯದ ಆರ್ಥಿಕಪರಿಸ್ಥಿತಿ ಹಾಗೂ ವೇತನಪರಿಷ್ಕರಣೆ ಪರಿಗಣಿಸಿ ಸದ್ಯಕ್ಕೆನೇಮಕಾತಿ ಸೂಕ್ತವಲ್ಲ ಎನ್ನುವಅಭಿಪ್ರಾಯಗಳು ವ್ಯಕ್ತವಾಗಿದೆ. ಹೀಗಾಗಿ ಅನುಸೂಚಿಗಳಪ್ರಮಾಣ ತಗ್ಗಿಸಿ ಅದಕ್ಕೆ ತಕ್ಕಂತೆಇರುವ ಸಿಬ್ಬಂದಿ ಬಳಸಲುಚಿಂತನೆಗಳು ನಡೆದಿವೆ.ಪ್ರತಿವರ್ಷ ಶೇ.10 ಕಿಮೀ ಇದಕ್ಕೆತಕ್ಕಂತೆ ಸಾರಿಗೆ ಆದಾಯಹೆಚ್ಚಾಗಬೇಕು ಎನ್ನುವುದು ಸಂಸ್ಥೆಯ ಗುರಿಯಾಗಿರುತ್ತದೆ. ಆದರೆ ಕೋವಿಡ್-19 ಈವ್ಯವಸ್ಥೆಯನ್ನು ಬುಡಮೇಲುಮಾಡಿದ್ದು, ಸಿಬ್ಬಂದಿಗೆ ತಕ್ಕಂತೆಅನುಸೂಚಿಗಳನ್ನು ಕಡಿಮೆಮಾಡಿ, ಕಿಮೀ ಕಡಿಮೆಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ.
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿಚಾಲನಾ ಸಿಬ್ಬಂದಿ ಸೇರಿದಂತೆ ಇತರೆ ಹುದ್ದೆಗಳ ಕೊರತೆಯಾಗುತ್ತಿದೆ.ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥಿತಿಯಿಂದ ನೇಮಕಾತಿಕಷ್ಟವಾಗಿದೆ. ಜನರಿಗೆ ಉತ್ತಮ ಸಾರಿಗೆ ನೀಡುವುದು ನಮ್ಮ ಆದ್ಯಕ ರ್ತವ್ಯವಾಗಿದೆ. ಹೀಗಾಗಿಬಿಎಂಟಿಸಿಯಲ್ಲಿ ಹೆಚ್ಚುವರಿ ಇರುವುದರಿಂದ ಅಲ್ಲಿಂದ ಸದ್ಯಕ್ಕೆ 150 ಚಾಲನಾ ಸಿಬ್ಬಂದಿಯನ್ನು ತಾತ್ಕಾಲಿಕ ನಿಯೋಜನೆ ಮೇಲೆ ಕರೆಯಿಸಿಕೊಳ್ಳುವಪ್ರಯತ್ನ ನಡೆದಿದೆ. –
ವಿ.ಎಸ್.ಪಾಟೀಲ, ಅಧ್ಯಕ್ಷರು, ವಾಕರಸಾ ಸಂಸ್ಥೆ
-ಹೇಮರಡ್ಡಿ ಸೈದಾಪುರ