ಮಂಡ್ಯ: ಮೈಸೂರು ಸಕ್ಕರೆ ಕಂಪನಿ ಆರಂಭದ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರಲ್ಲಿ ಒಗ್ಗಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ದೂರಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಖಾಸಗೀಕರಣ ಮಾಡಿ, ಕಬ್ಬು ಅರೆಯಲು ಯೋಜನೆ ರೂಪಿಸಿತ್ತು. ಅದಕ್ಕೆ ಜನಪ್ರತಿನಿಧಿಗಳಾದಿಯಾಗಿ ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ನಂತರದಲ್ಲಿ ನಿರ್ವಹಣೆ ಮತ್ತು ಕಾರ್ಯಾಚರ ಣೆಯನ್ನಷ್ಟೇ ಖಾಸಗೀಯವರಿಗೆ ವಹಿಸುವ ನಿರ್ಧಾರ ಮಾಡಿತು. ಅದಕ್ಕೆ ಕೆಲವರು ಒಪ್ಪಿಗೆ ಸೂಚಿಸಿದರೆ ಮತ್ತೆ ಕೆಲವರು ಅಪಸ್ವರ ಎತ್ತಿ ದರು. ಜಿಲ್ಲೆಯ ರೈತ ಮುಖಂಡರು, ಶಾಸಕರಲ್ಲೇ ಸಹಮತವಿಲ್ಲದಿದ್ದಾಗ ಸರ್ಕಾರ ಏನು ತಾನೇ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಪ್ರಸಕ್ತ ವರ್ಷದಿಂದ ಕಬ್ಬು ಅರೆಯುವಿಕೆ ಆರಂಭಿಸುವುದಕ್ಕೆ ಸಿಎಂ ಸಿದತೆ ಮಾಡಿಕೊಂಡು ರೈತ ಮುಖಂಡರ ಸಭೆಯನ್ನು ವಾರದ ಹಿಂದಷ್ಟೇ ಬೆಂಗಳೂರಿನಲ್ಲಿ ಕರೆದಿದ್ದರು.
ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರು ಗಲಾಟೆ ಮಾಡಿದರು. ಒಮ್ಮತದ ನಿರ್ಧಾರಕ್ಕೆ ಯಾರೂ ಬರಲಿಲ್ಲ. ರೈತರ ಪರವಾಗಿ ಸಭೆಗೆ ಬಂದವರು ಕಬ್ಬು ಬೆಳೆಗಾರರ ಹಿತವನ್ನು ಕಡೆಗ ಣಿಸಿ ಪ್ರತಿಷ್ಠೆಯನ್ನು ಮುಂದು ಮಾಡಿಕೊಂಡಿದ್ದ ರಿಂದ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾ ಗಲಿಲ್ಲ ಎಂದರು.
ತಜ್ಞರ ತಂಡದಿಂದ ಪರಿಶೀಲನೆ: ಸಿಎಂ ಮೈಷು ಗರ್ ಪುನಶ್ಚೇತನಕ್ಕೆ ಉತ್ಸುಕರಾಗಿದ್ದಾರೆ. ತಜ್ಞರ ತಂಡವೊಂದನ್ನು ಕಾರ್ಖಾನೆಗೆ ಕಳುಹಿಸಿ ಯಂತ್ರೋಪಕರಣಗಳ ಪ್ರಸ್ತುತ ಸ್ಥಿತಿ-ಗತಿಗಳ ಕುರಿತು ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ. ತಜ್ಞರ ವರದಿ ಆಧರಿಸಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆಯನ್ನು ನಡೆಸುವುದಕ್ಕೆ ಅಗತ್ಯ ಅನು ದಾನದ ಬಗ್ಗೆ ಸಮೀಕ್ಷೆ ನಡೆಸಿ ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಕಬ್ಬು ಅರೆಯುವಿಕೆ ಅನುಮಾನ: ಪ್ರಸ್ತುತ ಪರಿಸಿ §ತಿಯಲ್ಲಿ ಈ ವರ್ಷ ಮೈಷುಗರ್ ಕಾರ್ಖಾನೆ ಯಲ್ಲಿ ಕಬ್ಬು ಅರೆಯುವುದು ಅನುಮಾನವಿದೆ. ಈ ಕಾರಣದಿಂದ ಕಟಾವಿಗೆ ಬಂದಿರುವ ಕಬ್ಬನ್ನು ಶೀಘ್ರ ಕಟಾವು ಮಾಡಿಸಿ, ಜಿಲ್ಲೆಯ ಇತರೆ ಕಾರ್ಖಾನೆಗಳು, ನೆರೆ ರಾಜ್ಯಗಳ ಸಕ್ಕರೆ ಕಾರ್ಖಾ ನೆಗಳಿಗೆ ಸಾಗಿಸುವಂತೆ ಡೀಸಿ ಸೂಚನೆ ನೀಡಲಾ ಗಿದೆ ಎಂದರು.
ಮುಡಾ ಅಧ್ಯಕ್ಷ ಶ್ರೀನಿವಾಸ್, ಜಿಪಂ ಸದಸ್ಯ ಎನ್.ಶಿವಣ್ಣ, ಮುಖಂಡ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್ ಮೊದಲಾದವರು ಹಾಜರಿದ್ದರು.