ದೋಟಿಹಾಳ: ಗ್ರಾಮದ ಸುತ್ತಮುತ್ತ ರೈತರು ನಿಗದಿತ ಅವಧಿಗಿಂತ ಮೊದಲೇ ಬಿತ್ತನೆ ಮಾಡಿರುವುದು ಹೆಸರು ಬೆಳೆ ಸದ್ಯ ತೇವಾಂಶದ ಕೊರತೆ ಎದುರಿಸುತ್ತಿದ್ದು, ರೈತ ತಲೆ ಮೇಲೆ ಕೈಹೊತ್ತು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ.
ಮಳೆ ಇಲ್ಲದೇ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಶುರುವಾಗಿದೆ. ಈ ಭಾರಿ ಕೃತ್ತಿಕಾ ಮಳೆ ಉತ್ತಮವಾಗಿ ಸುರಿಯುವ ಮೂಲಕ ರೈತರಲ್ಲಿ ಆಶಾವಾದ ಚಿಗುರಲು ಕಾರಣವಾಯಿತು. ಈ ಮಳೆ ಮುಂಗಾರು ಬಿತ್ತನೆಗೆ ಅನೂಕಲವಾಗುತ್ತದೆ ಎಂದು ಈ ಭಾಗದ ಸುಮಾರು 70-80ರಷ್ಟು ರೈತರು ಹೆಸರು ಬೆಳೆಯನ್ನು ನಿಗದಿತ ಅವಧಿಗಿಂತ ಮೊದಲೇ ಬಿತ್ತನೆ ಮಾಡಿದರು. ಆದರೆ ಇಂದು ಸಕಾಲಕ್ಕೆ ಮಳೆ ಬರದೇ ಇರುವುದರಿಂದ ಮೂಳಕೆ ಒಡೆದ ಹೆಸರು ತೇವಾಂಶ ಕೊರತೆಯಿಂದ ಒಣಗುತ್ತಿದೆ.
ಭರಣಿ, ಕೃತಿಕಾ ಮಳೆಗಳು ಉತ್ತಮವಾಗಿ ಸಿರಿದಿರುವುದರಿಂದ ಮುಂಗಾರು ಬಿತ್ತನೆಗೆ ಭೂಮಿ ಹದಮಾಡಿ. ಉತ್ಸಾಹದಿಂದ ರೈತರು ಬಿತ್ತನೆಯಲ್ಲಿ ತೊಡಗಿದ್ದರು. ಆದರೆ ಈಗ ರೋಹಿಣಿ ಮತ್ತು ಮೃಗಶಿರಾ ಮಳೆಯಾಗದ ಕಾರಣ ರೈತರು ಚಿಂತೆಗೆ ಕಾರಣವಾಗಿದೆ.
ನಿಗದಿತ ಅವಧಿಗಿಂತ ಮೊದಲೆ ಬಿತ್ತನೆ ಮಾಡಬೇಡಿ ಎಂದು ಕೃಷಿ ಇಲಾಖೆ ಸೂಚನೆ ನೀಡಿತ್ತು. ಬಿತ್ತನೆಗೆ ನಿಗದಿಯಾಗಿರುವ ಅವಗಿಂತ ಮೊದಲೇ ಮಳೆಯಾದಾಗ ಹೆಸರು ಬಿತ್ತನೆ ಮಾಡಿದರೆ ಮೂರು ತಿಂಗಳಲ್ಲೇ ಕಟಾವಿಗೆ ಬಂದು ನಂತರ ಸಜ್ಜೆ ಅಥವಾ ಹುರುಳಿ ಬಿತ್ತನೆ ಮಾಡಬಹುದು ಎಂಬುದು ರೈತರ ಲೆಕ್ಕಾಚಾರ. ತಾಲೂಕಿನ ಅಲಲ್ಲಿ ಭರಣಿ ಮತ್ತು ಕೃತಿಕಾ ಮಳೆ ಸುರಿದಿತ್ತು. ಬಿತ್ತನೆಗೆ ಅಗತ್ಯ ಇದ್ದಷ್ಟು ಹಸಿಯಾಗಿದ್ದಕ್ಕೆ ರೈತರು ಹೆಸರು ಬಿತ್ತನೆ ಮಾಡಿದ್ದಾರೆ. ಕೃತಿಕಾ ಮಳೆಗೆ ಬಿತ್ತನೆಯಾಗಿರುವ ಹೆಸರು ಈಗಾಗಲೇ 20-25 ದಿನದ ಬೆಳೆ ಇದೆ. ಇದರ ಅವಧಿ 75-80 ದಿನಗಳ ಮಾತ್ರ, ಹೀಗಾಗಿ ಶೇ. 75ರಷ್ಟು ಬೆಳೆ ಕೈಕೊಟ್ಟಿದೆ ಎಂದು ರೈತರು ತಿಳಿಸಿದರು.
ತಿಂಗಳ ಹಿಂದೇ ಕೃತಿಕಾ ಮಳೆ ಉತ್ತವಾಗಿ ಸುರಿದ ಕಾರಣ ಈ ಭಾಗದ ಶೇ. 80ರಷ್ಟು ರೈತರು ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮಾಡಿದ ಮೇಲೆ ಮಳೆಯಾಗದ ಕಾರಣ ಬೆಳೆ ಒಣಗುತ್ತಿವೆ. ಬಿತ್ತನೆಯಾಗಿರುವ ಹೆಸರು ಈಗಾಗಲೇ 20-25 ದಿನದ ಬೆಳೆ ಇದೆ. ಶೇ. 75ರಷ್ಟು ಬೆಳೆ ಕೈಕೊಟ್ಟಿದೆ. ಕಳೆದ 4 ವಾರಗಳಿಂದ ಮಳೆಯ ಸುಳಿವಿಲ್ಲ. ವಾತಾವರಣದಲ್ಲಿ ಬಿಸಿಲಿನ ಜಳ ಹೆಚ್ಚಿಗಿದೆ. –
ಶರಣಪ್ಪ ಈಶಪ್ಪ ಗೌಡರ, ಮಾಟೂರು ಗ್ರಾಮದ ರೈತ
ಮಲ್ಲಿಕಾರ್ಜುನ ಮೆದಿಕೇರಿ