Advertisement

Panaji: ಮಳೆ ಕೊರತೆ; ರೈತರಿಗೆ ಸಂಕಷ್ಟ

02:54 PM Sep 06, 2023 | Team Udayavani |

ಪಣಜಿ: ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ರಾಜ ವರುಣನಿಗಾಗಿ ಕಾಯುತ್ತಿದ್ದಾರೆ. ಮುಂದಿನ ವಾರ ಮಳೆ ಬಾರದಿದ್ದರೆ ಭತ್ತದ ಕೃಷಿ ಬೆಳೆಗಳಿಗೆ ತೊಂದರೆಯಾಗಲಿದೆ. ಭತ್ತದ ಕೃಷಿಗೆ ಭಾರಿ ಹೊಡೆತ ಬೀಳಬಹುದು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಭತ್ತದ ಕೃಷಿಗೆ ನೀರಿಲ್ಲದ ಕಾರಣ ರೈತರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವರ್ಷ ಜೂನ್ ಮಧ್ಯಭಾಗದಲ್ಲಿ ರಾಜ್ಯಕ್ಕೆ ಮುಂಗಾರು ಆಗಮನವಾಗಿತ್ತು. ಜುಲೈನಲ್ಲಿ ಗೋವಾ ರಾಜ್ಯದಲ್ಲಿ ಸರಾಸರಿಗಿಂತ ದಾಖಲೆಯ ಮಳೆಯಾಗಿದೆ. ಆದರೆ ಆಗಸ್ಟ್‍ನಲ್ಲಿ ಕೇವಲ 12 ಇಂಚುಗಳಷ್ಟು ಮಳೆಯಾಗಿದೆ. ಸೆಪ್ಟೆಂಬರ್‍ನಲ್ಲಿ ನಿರೀಕ್ಷಿತ ಮಳೆಯಾಗುವ ಭರವಸೆ ಇಲ್ಲ. ರಾಜ್ಯದಲ್ಲಿ ಇದುವರೆಗೆ 110 ಇಂಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಗೋವಾ ರಾಜ್ಯದಲ್ಲಿ ಸದ್ಯ ಮಳೆಯ ಕೊರತೆಯಿಂದಾಗಿ ಭತ್ತ, ಸೌತೆಕಾಯಿ, ಇತರ ತರಕಾರಿ,ಸೇರಿದಂತೆ ಇತರೆ ತರಕಾರಿಗಳು ನೀರಿನ ಕೊರತೆ ಹಾಗೂ ಅಧಿಕ ಉಷ್ಣಾಂಶದಿಂದ ಅಪಾಯಕ್ಕೆ ಸಿಲುಕಿವೆ. “ರಾಜ್ಯಕ್ಕೆ ಈ ವರ್ಷ ಮುಂಗಾರು ತಡವಾಗಿ ಆಗಮಿಸಿತು, ಇದರಿಂದ ಬೆಳೆಗಳ ನಾಟಿ ವಿಳಂಬವಾಯಿತು. ನಂತರ ಜುಲೈನಲ್ಲಿ ಹೆಚ್ಚುವರಿ ಮಳೆಯಾಯಿತು ಆದರೆ ಅಗಷ್ಟ ತಿಂಗಳಿನಿಂದ ಮಳೆ  ಕಡಿಮೆಯಾಗಿದೆ.” ಸದ್ಯ ಉತ್ತಮ ಮಳೆಯಾಗದಿದ್ದರೆ, ಬೆಳೆ ನಷ್ಟವಾಗುವ ಭೀತಿಯಿದೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಆತಂಕದ ವಿಷಯವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿ ನೇವಿಲ್ ಅಲ್ಫಾನ್ಸೊ ಪ್ರತಿಕ್ರಿಯೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next