Advertisement
ತಾಲೂಕಿನಲ್ಲಿ ಪೂರ್ವ ಮುಂಗಾರು ವಾಡಿಕೆಯಂತೆ ಹೆಚ್ಚು ಮಳೆಯಾಗಿದೆ. ಆದರೆ, ರೈತರು ಕೃಷಿ ಮಾಡಲು ಯೋಗ್ಯವಾರುವ ರೀತಿಯಲ್ಲಿ ಮಳೆ ಆಗಿಲ್ಲ. ವಾಡಿಕೆಯಂತೆ 106.4 ಮಿ.ಮೀ.ಮಳೆಯಾಗಬೇಕಿತ್ತು. ಆದರೆ, 128 ಮಿ.ಮೀ. ಮಳೆಯಾಗಿದೆ. ಅಗತ್ಯಕ್ಕಿಂತ ಹೆಚಚು ಮಳೆಯಾದರೂ ಪೂರ್ವ ಮುಂಗಾರು ಕೂಡಾ ವೈಫಲ್ಯ ಹೊಂದಿದೆ.
Related Articles
Advertisement
ಮುಂಗಾರು ಎದುರು ನೋಡುತ್ತಿರುವ ರೈತ: ಪೂರ್ವ ಮುಂಗಾರು ಉತ್ತಮವಾಗಿ ಆಗಿದ್ದರೆ ತಾಲೂಕಿನ ರೈತರು ಧನ್ಯಾ ಬೆಳೆಗಳನ್ನು ಮಾಡಿ ಮನೆ ವೆಚ್ಚಕ್ಕೆ ಹಣ ನೋಡುತ್ತಿದ್ದರು ಹಾಗೂ ರಾಸುಗಳ ಮೇವಿಗಾಗಿ ಜೋಳ ಬೆಳೆಯಲು ಮುಂದಾಗುತ್ತಿದ್ದ. ಆದರೆ, ಪೂರ್ವ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಹಾಗಾಗಿ, ವಿಧಿ ಇಲ್ಲದೆ ಜೂನ್ ಮೊದಲ ವಾರಕ್ಕೆ ಪ್ರಾರಂಭವಾಗುವ ಮುಂಗಾರನ್ನು ಎದುರು ನೋಡುವಂತಾಗಿದೆ.
ಮಳೆ ಆಗಮನದ ನಿರೀಕ್ಷೆ: ಬುಧವಾರದಿಂದ ಮೂರು ಹದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.4ರ ನಂತರ ನೈರುತ್ಯ ಮುಂಗಾರು ಕೇರಳ ಪ್ರವೇಶ ಮಾಡಲಿದ್ದು, ಜೂ.9ರಂದು ರಾಜ್ಯಕ್ಕೆ ಮುಂಗಾರು ಆಗಮಿಸಲಿದೆ ಎಂದು ಹಮಾಮಾನ ಇಲಾಖೆ ಮಾಹಿತಿ ನೀಡಿದೆ. ಇಲಾಖೆ ನೀಡಿರುವ ಮಾಹಿತಿ ಅನುಸರಿಸಿ ರೈತರು ತಮ್ಮ ಕೃಷಿ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧರಿದ್ದಾರೆ.
ತೋಟಗಾರಿಗೆ ಬಿತ್ತನೆ ಪ್ರಮಾಣ ಕುಂಠಿತ: ಪೂರ್ವ ಮುಗಾರು ಕೈ ಕೊಟ್ಟಿರುವುದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದೆ. ತೋಟಗಾರಿಕೆ ಬಳೆಯಾದ ಆಲೂಗಡ್ಡೆಯನ್ನು ದಂಡಿಗನಹಳ್ಳಿ, ಬಾಗೂರು ಹೋಬಳಿಯಲ್ಲಿ ಹೆಚ್ಚು ಬೆಳೆಯುತ್ತಿದ್ದು ಕಸಬಾ- ನುಗ್ಗೇಹಳ್ಳಿ ಹೋಬಳಿಯ ಕೆಲ ಗ್ರಾಮ ಸೇರಿದಂತೆ 900 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಆಗಬೇಕಿತ್ತು. ಇದುವರೆಗೆ ಯಾವುದೇ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ. ಟೊಮೇಟೋ 220 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದು, ಕೊಳವೆ ಬಾವಿ ಹೊಂದಿರುವ 125 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮೆಣಸಿನಕಾಯಿ 200 ಹೆಕ್ಟೇರ್‌ಗೆ ಕೇವಲ 30 ಹೆಕ್ಟೇರ್‌ನಲ್ಲಿ ಮಾತ್ರ ರೈತ ಬೆಳೆದಿದ್ದಾನೆ.
ಇಲಾಖೆಯಲ್ಲಿ ಬಿತ್ತನೆ ಬೀಜ ದಾಸ್ತಾನು: ಈಗಾಗಲೆ ಸರ್ಕಾರ ಬಿತ್ತನೆ ಬೀಜವನ್ನು ತಾಲೂಕು ಕೃಷಿ ಇಲಾಖೆಗೆ ಸರಬರಾಜು ಮಾಡಿದ್ದು, ತಾಲೂಕಿನಲ್ಲೇ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜವನ್ನು ರವಾನೆ ಮಾಡಲಾಗಿದೆ. ಕೊಳವೆ ಬಾವಿ ಹೊಂದಿರುವವರನ್ನು ಹೊರತು ಪಡಿಸಿದರೆ, ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಬೀಜ ಪಡೆಯಲು ರೈತರು ಕೃಷಿ ಇಲಾಖೆಗೆ ಆಗಮಿಸದೆ ಇರುವುದಿಂದ ದಾಸ್ತಾನು ಇಲಾಖೆಯಲ್ಲಿ ಉಳಿದಿದೆ.
ಈಗಾಗಲೇ ಜಿಲ್ಲಾಡಳಿತ ಪೂರ್ವ ಮುಂಗಾರು ಬೆಳೆಯ ಬಿತ್ತನೆ ಬೀಜ, ಕೃಷಿಗೆ ಅಗತ್ಯ ಔಷಧ, ಗೊಬ್ಬರವನ್ನು ಸರಬರಾಜು ಮಾಡಿದೆ. ಆದರೆ, ಮಳೆ ಕೊರತೆಯಿಂದ ರೈತರು ಪಡೆಯಲು ಮುಂದೆ ಬಂದಿಲ್ಲ, ಈ ವಾರದಲ್ಲಿ ಮಳೆಯಾಗದಿದ್ದರೆ ತಾಲೂಕಿನಲ್ಲಿ ವಿವಿಧ ಕಾಳು ಬೆಳೆ ಬೆಳೆಯುವುದನ್ನು ಮರೆಯ ಬೇಕಾಗುತ್ತದೆ. -ಎಂ.ಎಸ್.ಜನಾರ್ದನ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ
ಯುಗಾದಿ ನಂತರ ವರ್ಷಧಾರೆ ಸಕಾಲಕ್ಕೆ ಆಗುವ ನಿರೀಕ್ಷೆ ಹೊಂದಿ ದ್ದೆವು. ಆದರೆ, ಮುಂಗಾರು ಆರಂಭದಲ್ಲಿ ಕುಂಠಿತ ಆಗಿದೆ. ಕೃಷಿಗಾಗಿ ಭೂಮಿಯನ್ನು ಸಿದ್ಧಪಡಿಸಿದ್ದೆವು. ಮಳೆಗಾಗಿ ಎದುರು ನೋಡು ತ್ತಿದ್ದೇವೆ. ದ್ವಿದಳ ಬೆಳೆ ಮಾಡಲು ಮಳೆ ಬರ ಲಿಲ್ಲ. ರಾಗಿ ಬೆಳೆಗಾದರು ಮಳೆ ಬಂದರೆ ಸಾಕು. -ಕಾಂತರಾಜು, ಕೃಷಿಕ, ಕುರುವಂಕ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ