ಚಿಂತಾಮಣಿ: ತಾಪಂನ 2020-21ನೇಮಾರ್ಚ್ ಅಂತ್ಯಕ್ಕೆ ವಿವಿಧ ಇಲಾಖೆಗಳಲ್ಲಿಅನುಷ್ಠಾನಗೊಳಿಸಿರುವ ಯೋಜನೆಗಳ ಪ್ರಗತಿ ಪರಿಶೀಲನೆ ಸೇರಿ ವಿವಿಧ ಕ್ರಿಯಾಯೋಜನೆಗಳಿಗೆ ಅನುಮೋದನೆ ಪಡೆಯಲು ಸೋಮವಾರ ಕರೆದಿದ್ದ ತಾಪಂ ಸಾಮಾನ್ಯ ಸಭೆ ಕೋರಂ ಇಲ್ಲದೇ ರದ್ದಾಯಿತು.
ಸಾಮಾನ್ಯ ಸಭೆ ನಡೆಯಲು ಕನಿಷ್ಠ 12 ಸದಸ್ಯರು ಭಾಗಿಯಾಗಬೇಕು. ಆದರೆ,ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸೇರಿ 11 ಮಂದಿ ಮಾತ್ರ ಇದ್ದರು. ಹೀಗಾಗಿ ಸಭೆ ರದ್ದು ಮಾಡಿ ಅಧ್ಯಕ ಕವಿತಾ ಹೊರನಡೆದರು. ಇನ್ನು ಕೋವಿಡ್ ನಿಯಂತ್ರಣಕ್ಕೆ ಪಣತೊಟ್ಟು ಹಗಲು ಇರುಳು ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಸಾಮಾನ್ಯ ಸಭೆ ರದ್ದಾಗಿರಿಂದಾಗಿ ಸಮಯ ವ್ಯರ್ಥ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಸದಸ್ಯನರಸಿಂಹರಾಜು, ಕೊರೊನಾದಿಂದ ತಾಲೂಕಿನ ಜನತೆ ತತ್ತರಿಸುತ್ತಿದ್ದಾರೆ. ಇದು ವರೆಗೂತಾಪಂನಿಂದ ಒಂದು ಮಾಸ್ಕ್ ಸಹ ವಿತರಣೆಮಾಡಲಿಕ ಆೆR ಗಿಲ್ಲ. ಅನುದಾನ ಹಂಚಿಕೆಮಾಡಿಕೊಂಡು ಲೂಟಿ ಮಾಡಲು ಸಭೆಕರೆದರೆ ಯಾರು ಬರುತ್ತಾರೆ ಎಂದು ಕಿಡಿಕಾರಿದರು.
5 ವರ್ಷಗಳಿಂದಲೂ ಜೆಡಿಎಸ್ ಸದಸ್ಯರಿಗೆ ಅನುದಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೋವಿಡ್‌ನಿಯಂತ್ರಣಕ್ಕಾದರೂ ಅನುದಾನವನ್ನುಸಮರ್ಪಕವಾಗಿ ಸದ್ಬಳಕೆ ಮಾಡಿಕೊÙಬೇ Û ಕು ಎಂದು ಹೇಳಿದರು.
ಆಡಳಿತ ಪಕ್ಷ ಸದಸ್ಯರೇ ಗೈರು: ತಾಪಂನಲ್ಲಿ ಒಟ್ಟು 23 ಸದಸ್ಯರಿದ್ದು, ಈ ಪೈಕಿ ನಾಲ್ವರುಜೆಡಿಎಸ್, 19 ಸದಸ್ಯರು ಎಂ.ಸಿ.ಸುಧಾಕರ್‌ಬೆಂಬಲಿಗರು. ಸೋಮವಾರ ಕರೆದ ಸಭೆಗೆಆಡಳಿತ ಪಕ್ಷದ ಎಂ.ಸಿ.ಸುಧಾಕರ್ ಬೆಂಬಲಿತಸದಸ್ಯರೇ ಗೈರು ಹಾಜರಾಗಿದ್ದರು. ಈಕುರಿತು ಪ್ರತಿಕ್ರಿಯಿಸಿದ ಅಧ್ಯಕ್ಷೆ ಕವಿತಾಮಂಜುನಾಥ್, ಕೊರೊನಾ ಕಾರಣದಿಂದಸದಸ್ಯರು ಗೈರು ಆಗಿದ್ದಾರೆ. ಆದರಿಂದ ಸಭೆ ರದ್ದುಗೊಳಿಸಲಾಗಿದೆ ಎಂದರು.