Advertisement

ರಿಕ್ಷಾದವರ ಕೋಣೆಯಲ್ಲಿ ಕಂಟ್ರೋಲರ್‌

06:38 PM Oct 30, 2020 | Suhan S |

ಹೊನ್ನಾವರ: ಹಿಂದಿನ ತಲೆಮಾರಿನ ಜನಪ್ರತಿನಿಧಿಗಳು ಸಾರ್ವಜನಿಕ ಬಳಕೆಗಾಗಿ ಸ್ಥಳ ಕಾದಿಡದ ಕಾರಣ ಇಂದಿನ ತಲೆಮಾರಿನವರು ರಸ್ತೆಯಲ್ಲೇ ಬಸ್‌ ಸ್ಟ್ಯಾಂಡ್‌ ನೋಡುವಂತಾಗಿದೆ. ಬಸ್‌ ನಿಯಂತ್ರಕರು ರಿಕ್ಷಾ ದವರು ಕೂರುವ ಕೋಣೆಯಲ್ಲಿ ಕೂರಬೇಕಾಗಿದೆ.

Advertisement

ನಗರಕ್ಕೆ ನೂತನ ಬಸ್‌ ನಿಲ್ದಾಣ ಮಂಜೂರು ಆಗಿರುವುದರಿಂದ ಹಂಗಾಮಿ ಬಸ್‌ ನಿಲ್ದಾಣಕ್ಕೆ ಪೊಲೀಸ್‌ ಮೈದಾನದಲ್ಲಿ ಸ್ಥಳ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಶೆಡ್‌ ನಿರ್ಮಾಣವಾಗಿ ಬಸ್‌ ಸ್ಟ್ಯಾಂಡ್‌ ಸ್ಥಳಾಂತರವಾಗಿತ್ತು. ಇಲಾಖೆಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಪೊಲೀಸರು ತಕರಾರು ಮಾಡಿ ಬಸ್‌ ಸ್ಟ್ಯಾಂಡ್‌ ಓಡಿಸಿದರು. ಬಸ್‌ ಸ್ಟ್ಯಾಂಡ್‌ ಮರಳಿ ಮೊದಲಿನ ಸ್ಥಳಕ್ಕೆ ಬಂತು. ಗುತ್ತಿಗೆದಾರರು ಅಲ್ಲಿಂದ ಹೊರಹಾಕಿದ ಮೇಲೆ ರಸ್ತೆಗೆ ಬಂದಿದೆ. ನಗರದಲ್ಲೆಲ್ಲೂ ಹಂಗಾಮಿ ಬಸ್‌ ಸ್ಟ್ಯಾಂಡ್‌ ಗೆ ಸ್ಥಳವಿಲ್ಲ. 3ಕಿಮೀ ದೂರ ಪ್ರಭಾತನಗರದಲ್ಲಿ ಅರಣ್ಯ ಇಲಾಖೆಯ ಭೂಮಿ ಇದೆ.

ಫೋನು, ಫ್ಯಾನು, ಲೈಟು ಯಾವುದೂ ಇಲ್ಲದ ಇಬ್ಬರು ಕೂರುವ ಗೂಡಿನಲ್ಲಿ ನಿಯಂತ್ರಕರು ಮಾತ್ರ ಕೂರಬಹುದು. ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರು ಅಂಗಡಿ ಬಾಗಿಲಿನಲ್ಲಿ ನಿಲ್ಲಬೇಕು. ಚಹಾ ಕುಡಿಯಲು ಒಂದು ಸರಿಯಾದ ಅಂಗಡಿಯಿಲ್ಲ. ದೂರದೂರ ಬಸ್‌ ನಿಲ್ಲಿಸಿ ಬರುವ ಚಾಲಕರು ಫೋನ್‌ ಬಂದ ಮೇಲೆ ಬಸ್‌ ಗಳನ್ನು ತರುತ್ತಾರೆ. ನಿತ್ಯ 350 ಬಸ್‌ಗಳು ಓಡಾಡುವಾಗ ಒಂದೇ ಬಾರಿ ನಾಲ್ಕು ಬಸ್‌ ಬಂದರೆ ನಿಲ್ಲಲು ಸ್ಥಳವಿಲ್ಲ. ಮಧ್ಯೆ ಟೆಂಪೋಗಳು ನುಸುಳುತ್ತವೆ, ಇಷ್ಟು ವಿಸ್ತಾರವಾದ ಸ್ಥಳ ಬೇರೆ ಇಲ್ಲ. ಶಾಸಕ ದಿನಕರ ಶೆಟ್ಟಿ ಪೊಲೀಸ್‌ ಮೈದಾನ ಸಿಗುವ ಭರವಸೆ ಹೊಂದಿದ್ದರು. ಅವರಿಗೂ ಬೇಜಾರಾಗಿದೆ. ಈಗ ದಿನಕರ ಶೆಟ್ಟಿಯವರು ಕಟ್ಟಿಸಿಕೊಟ್ಟ

ರಿಕ್ಷಾ ವಿಶ್ರಾಂತಿ ಶೆಡ್‌ನ‌ಲ್ಲಿ ಬಸ್‌ ನಿಯಂತ್ರಕರು ಕೂತಿದ್ದು ಬೋರ್ಡಿನ ಮೇಲಿದ್ದ ದಿನಕರ ಶೆಟ್ಟಿಯವರ ಮತ್ತು ಬಿಜೆಪಿ ಕಮಲದ ಚಿಹ್ನೆ ಮೇಲೆ ಕಾಗದ ಅಂಟಿಸಿದ್ದು ಯಾಕೆ ಎಂಬುದು ಅರ್ಥವಾಗಲಿಲ್ಲ. ರಿಕ್ಷಾದವರು ಉದಾರವಾಗಿ ಬಿಟ್ಟುಕೊಡದಿದ್ದರೆ ನಿಯಂತ್ರಕರೂ ಹಾದಿ ಮೇಲೆ ನಿಲ್ಲಬೇಕಿತ್ತು. ಬಂದರದಲ್ಲಿ ಸ್ಥಳವಿದೆ, ಅಲ್ಲಿ ಹೋಗಿ ಬರಲು ರಸ್ತೆ ಕಿರಿದಾಗಿದೆ. ಈ ಹಂಗಾಮಿ ವ್ಯವಸ್ಥೆಯನ್ನು ಜನ ಒಪ್ಪಿಕೊಂಡಿದ್ದಾರೆ. ಆದರೆ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾಗಲು ಕನಿಷ್ಠ ಎರಡು ವರ್ಷ ಬೇಕು. ಅಷ್ಟರವರೆಗೆ ಸಮಸ್ಯೆಯ ಸರಮಾಲೆ ತಪ್ಪದು. ಹಂಗಾಮಿ ಬಸ್‌ ಸ್ಟ್ಯಾಂಡ್‌ ನಿರ್ಮಾಣವಾದ ಮೇಲೆ ಹಳೆಯ ಬಸ್‌ ಸ್ಟ್ಯಾಂಡ್‌ ಕಳಚಿದ್ದರೆ ಸರಿಯಾಗುತ್ತಿತ್ತು. ಯಾರ ಮಾತೂ ಕೇಳದ ಹಳೆ ಬಸ್‌ ಸ್ಟ್ಯಾಂಡ್‌ ಮುರಿಯುವವರು ಮುರಿದುಕೊಂಡು ಹೋದರು, ಹೊಸದು ಕಟ್ಟುವವರು ಹೊರಹಾಕಿದರು. ಸಾರಿಗೆ ಅಧಿಕಾರಿಗಳು ತಮಾಷೆ ನೋಡುತ್ತಿದ್ದಾರೆ. ಪತ್ರಿಕೆಗಳು ಸಲಹೆ ನೀಡಿದರೂ ಕಾಲಕಸ ಮಾಡಿದರು. ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಜನ ಬಯಸಿದ್ದಾರೆ. ಸದ್ಯಕ್ಕಂತೂ ಬಸ್‌ ಸ್ಟ್ಯಾಂಡ್‌ ಗೆ ರಸ್ತೆಯೇ ವಿಳಾಸ, ರಸ್ತೆಯಲ್ಲೇ ವಾಸ.

 

Advertisement

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next