ಈ ಸಾಲಿನ ಬಜೆಟ್‌ನಲ್ಲಿ ನೀರಿನ ಕೊರತೆಯಿಂದಾಗಿ ಒತ್ತಡದಲ್ಲಿರುವ ನೂರು ಜಿಲ್ಲೆಗಳನ್ನು ಗುರುತಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ. ಕಿಸಾನ್ ರೈಲು, ನಾಗರಿಕ ವಿಮಾನಯಾನ ಇಲಾಖೆ ಸಹಯೋಗದಲ್ಲಿ “ಕೃಷಿ ಉಡಾನ್’, ಒಂದು ಜಿಲ್ಲೆ ಒಂದು ಉತ್ಪನ್ನನಂತಹ ಸಣ್ಣ-ಪುಟ್ಟ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಅನುಷ್ಠಾನಗೊಂಡರೆ, ಪ್ರಾದೇಶಿಕವಾಗಿ ಗಮನಾರ್ಹ ಪರಿಣಾಮ ಬೀರಲಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದ ದೃಷ್ಟಿಕೋನದಲ್ಲಿ ಕೃಷಿಯನ್ನು ನೋಡದೆ, ಅವಾಸ್ತವಿಕತೆ ಮೂಲಕ ಜನಪ್ರಿಯ ಯೋಜನೆಗೆ ಒತ್ತು ನೀಡುವ ಪ್ರಯತ್ನ ಮಾಡಲಾಗಿದೆ.
ರೈತರ ಆದಾಯ ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ 16 ಅಂಶಗಳ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಲಾಗಿದೆ. ಮೇಲ್ನೋಟಕ್ಕೆ ಇದು ಆಕರ್ಷಕವಾಗಿ ಕಾಣಬಹುದು. ಆದರೆ, ಅದಕ್ಕೊಂದು ಸ್ಪಷ್ಟ ನೀಲನಕ್ಷೆಯನ್ನು ಬಜೆಟ್‌ನಲ್ಲಿ ತೋರಿಸಿಲ್ಲ. ಇದರ ಬದಲಿಗೆ ದೇಶದ ಒಟ್ಟಾರೆ ಆರ್ಥಿಕ ವೃದ್ಧಿ ದರದಲ್ಲಿ ಕೃಷಿ ಕ್ಷೇತ್ರದ ಪಾಲು ಹೆಚ್ಚಿಸಲಾಗುವುದು ಎಂದು ಹೇಳಿದ್ದರೆ, ಹೆಚ್ಚು ಸಮಂಜಸವಾಗಿರುತ್ತಿತ್ತು. ಅದಕ್ಕೆ ಪೂರಕವಾಗಿ ಉತ್ಪಾದನೆ, ಮಾರುಕಟ್ಟೆ, ನೀರಾವರಿ ಸೌಲಭ್ಯ ಮತ್ತಿತರ ಅಂಶಗಳಿಗೆ ಆದ್ಯತೆ ನೀಡುವ ಬಗ್ಗೆಯೂ ಸ್ಪಷ್ಟ ಕಲ್ಪನೆ ಸಿಗುತ್ತಿತ್ತು.
ಇನ್ನು ನೈಸರ್ಗಿಕ ಹಾಗೂ ಪರಂಪರಾಗತ ಕೃಷಿ ಪದ್ಧತಿಗಳು ಕೂಡ ಅವಾಸ್ತವಿಕವಾಗಿವೆ. ಈ ಕ್ರಮಗಳಿಂದ ಆದಾಯ ಹೆಚ್ಚಳ ಆಗಿರುವ ಬಗ್ಗೆ ಅಧಿಕೃತವಾಗಿ ದೃಢಪ ಟ್ಟಿಲ್ಲ. ಇದೊಂದು ಹಿಮ್ಮುಖ ಚಲನೆ ಆಗಿದೆ. ಅಷ್ಟಕ್ಕೂ ತಂತ್ರಜ್ಞಾನ ಆಧಾರಿತ ಕೃಷಿಯತ್ತ ನಾವು ಮುಖಮಾಡ ಬೇಕಾಗಿದೆ. ಆ ಮೂಲಕ ನೆರೆ, ಬರ, ರೈತರ ಆತ್ಮಹತ್ಯೆ ಯಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬೇಕಿತ್ತು. ಈ ಪ್ರಯತ್ನವೂ ಬಜೆಟ್‌ನಲ್ಲಿ ಕಾಣುವುದಿಲ್ಲ.
ನೀರಿನ ಕೊರತೆಯಿಂದಾಗಿ ಒತ್ತಡದಲ್ಲಿರುವ ನೂರು ಜಿಲ್ಲೆಗಳನ್ನು ಗುರುತಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ. ಕಿಸಾನ್ ರೈಲು, ನಾಗರಿಕ ವಿಮಾನಯಾನ ಇಲಾಖೆ ಸಹಯೋಗದಲ್ಲಿ “ಕೃಷಿ ಉಡಾನ್’, ಒಂದು ಜಿಲ್ಲೆ ಒಂದು ಉತ್ಪನ್ನನಂತಹ ಸಣ್ಣ-ಪುಟ್ಟ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಅನುಷ್ಠಾನಗೊಂಡರೆ, ಪ್ರಾದೇಶಿಕವಾಗಿ ಗಮನಾರ್ಹ ಪರಿಣಾಮ ಬೀರಲಿವೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಮಾದರಿ ಕೃಷಿ ಭೂಗುತ್ತಿಗೆ ಅಧಿನಿಯಮ- 2016, ಮಾದರಿ ಕೃಷಿ ಉತ್ಪಾದನೆ, ಜಾನುವಾರು ಮತ್ತು ಮಾರುಕಟ್ಟೆ ಅಧಿನಿಯಮ-2017ರಂತಹ ಕಾಯ್ದೆಗಳನ್ನು ಅನುಸರಿಸುವಂತಹ ರಾಜ್ಯಗಳನ್ನು ಬೆಂಬಲಿಸುವುದಾಗಿ ಹೇಳಿರುವುದು ಸರಿ ಅಲ್ಲ. ಇದು ರೈತರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಗುದ್ದಾಟಕ್ಕೆ ಎಡೆಮಾಡಿಕೊಡುತ್ತದೆ.
ಬಜೆಟ್ ವಿಶ್ಲೇಷಣೆ
ಡಾ.ಪ್ರಕಾಶ್ ಕಮ್ಮರಡಿ, ಮಾಜಿ ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ