Advertisement
ಈ ಹಿಂದೆ ಸತತ ಹೋರಾಟ ನಡೆಸಿದರ ಫಲವಾಗಿ ಮಾಸಿಕ ಪಿಂಚಣಿ ಇನ್ನೇನು ಸಂತ್ರಸ್ತ ಕೈಸೇರುವ ಹಂತದಲ್ಲಿ ಕೋವಿಡ್ 19 ಕಸಿದುಕೊಂಡಂತಾಗಿದೆ. ಅತ್ತ ಮಾಸಾ ಶನವೂ ಇಲ್ಲ ಇತ್ತ ಸವಲತ್ತುಗಳು ಇಲ್ಲ ಎಂಬಂತಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 3,550 ಮಂದಿ ಮಾಸಾಶನ ಪಡೆಯಲು ಅರ್ಹರಾಗಿದ್ದು, ದ.ಕ. ಉಡುಪಿ ಸಹಿತ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಗುರುತಿಸಿದ್ದರೂ ಪಿ2ಕೆ ತಂತ್ರಾಂಶ ಕೊರತೆಯಿಂದ ಮಾಸಿಕ ಪಿಂಚಣಿ ಕೈಸೇರಿರಲಿಲ್ಲ. ಇದೀಗ ಕೋವಿಡ್ 19 ಮಹಾಮಾರಿಯು ಸರಕಾರದ ಬೊಕ್ಕಸವನ್ನೇ ಬರಿದಾಗಿಸಿದ್ದರಿಂದ ಆಶ್ವಾಸನೆ ಗಳು ಮತ್ತಷ್ಟು ಜಟಿಲವಾಗುತ್ತಿವೆ.
ಜಿಲ್ಲೆಯಲ್ಲಿ ಶೇ. 70ರಷ್ಟು ಸಂತ್ರಸ್ತರು ಬಿಪಿಎಲ್ ಕಾರ್ಡುದಾರರಿದ್ದು, ಸರಕಾರದಿಂದ ಪಡಿತರ, ಔಷಧ ಹೊರತು ಪಡಿಸಿ ಬೇರಾವ ಸೌಲತ್ತು ಲಭ್ಯವಿಲ್ಲ. ಕೋವಿಡ್ 19ದಿಂದ ಆಸ್ಪತ್ರೆ ಭೇಟಿ, ಔಷಧ ಸಹಿತ ಪೌಷ್ಟಿಕ ಆಹಾರದ ಕೊರತೆ ಮತ್ತಷ್ಟು ಕಾಡಿದೆ. ದ.ಕ. ಜಿಲ್ಲೆಯಲ್ಲಿ 3,550, ಉಡುಪಿಯಲ್ಲಿ 1900ಕ್ಕೂ ಅಧಿಕ ಮಂದಿ ಸಂತ್ರಸ್ತರಿದ್ದಾರೆ. ಬೆಳ್ತಂಗಡಿ ತಾಲೂಕಿನ 19 ಗ್ರಾಮಗಳಲ್ಲಿ 1,112 ಮಂದಿ ಎಂಡೋ ಸಂತ್ರಸ್ತರ ಪೈಕಿ 974 ಮಂದಿ ಅಧಿಕೃತ ಸ್ಮಾರ್ಟ್ ಕಾರ್ಡ್ ಹೊಂದಿರುವವರಿದ್ದಾರೆ. 360 ಮಂದಿ (ಬೆಡ್‌ರಿಡನ್) ಮಲಗಿದಲ್ಲೇ ಇರುವವರಿದ್ದಾರೆ. ಕೋವಿಡ್ 19 ದಿಂದಾಗಿ ಪ್ಯಾಂಪರ್, ಔಷಧ ಕೊರತೆ ಕಾಡುತ್ತಿದೆ. ಡೇ ಕೇರ್ ಸೆಂಟರ್
ಡೇ ಕೇರ್ ಸೆಂಟರ್ ಮುಚ್ಚಿದ್ದರಿಂದ ಅದನ್ನು ಅವಲಂಬಿಸಿದ್ದ ಹೆಚ್ಚಿನ ಸಂತ್ರಸ್ತರು ಸಂಕಷ್ಟಕ್ಕೊಳಗಾಗಿದ್ದಾರೆ. ಮಾನಸಿಕ ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲು ಔಷಧ, ಆರೈಕೆಗೆ ಮಂಗಳೂರು ಆಸ್ಪತ್ರೆಗೆ ತೆರಳಬೇಕಿರುವ ಅನಿವಾರ್ಯ. ಅದು ಸಾಧ್ಯವಾಗದೇ ಇರುವುದರಿಂದ ಸ್ಥಳೀಯ ಆರೋಗ್ಯ ಕೇಂದ್ರದ ಆಶ್ರಯ ಪಡೆದರೂ ಸೂಕ್ತ ಔಷಧ ಲಭ್ಯವಾಗುತ್ತಿಲ್ಲ. ಶೇ. 60 ದೇಹಾರೋಗ್ಯ ತೊಂದರೆ ಇದ್ದವರಿಗೆ 3,000, ಶೇ. 25ರಿಂದ 60 ರೊಳಗಿರುವ ಮಂದಿಗೆ 1,500, ಬ್ಲೂ ಸ್ಮಾರ್ಟ್ ಹೊಂದಿರುವ ಸಂತ್ರಸ್ತರಾಗಿದ್ದು, ಮಕ್ಕಳಿಲ್ಲದವರು, ಕ್ಯಾನ್ಸರ್, ಹೃದ್ರೋಗ ಸಮಸ್ಯೆ ಇರುವ ಮಂದಿಗೆ ಬಸ್ ಪಾಸ್ ವ್ಯವಸ್ಥೆಯಷ್ಟೇ ನೀಡಲಾಗಿದೆ. ಇದು ಸದ್ಯ ಔಷಧಕ್ಕೂ ಸಾಲದಂತಾಗಿದೆ. ಸರಕಾರ ನೀಡಿದ 8 ಖಾಸಗಿ ಆಸ್ಪತ್ರೆಯಲ್ಲಿ ಒಪ್ಪಂದ ಮಾಡಿ ಸ್ಮಾರ್ಟ್ ಕಾರ್ಡ್ ನೀಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳು ಒಳ ರೋಗಿಗಳಾಗಿ ದಾಖಲಿಸುತ್ತಿಲ್ಲ ಎಂಬುದು ಸಂತ್ರಸ್ತರ ಆರೋಪ.
Related Articles
ಎಂಡೋಸಂತ್ರಸ್ತರ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ಕೋವಿಡ್ 19 ಮುಂಜಾಗ್ರತೆಯಾಗಿ ಡೇ ಕೇರ್ ಸೆಂಟರ್ ಅನಿವಾರ್ಯವಾಗಿ ಮುಚ್ಚಲಾಗಿದೆ. ಪ್ಯಾಂಪರ್ ವ್ಯವಸ್ಥೆ ಕಲ್ಪಿಸಲು ಇಲಾಖೆಯಲ್ಲಿ ಬಜೆಟ್ ಹೊಂದಾಣಿಕೆಯಾಗಬೇಕಿದೆ. ಈ ಕುರಿತು ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಔಷಧ ಪೂರೈಸುವ ಸಲುವಾಗಿ ಸ್ಥಳೀಯ ಮೆಡಿಕಲ್ ಅವಲಂಬಿಸುವಂತೆ ಆಶಾಕಾರ್ಯಕರ್ತೆಯರು, ಎಎನ್‌ಎಂಗಳಿಗೆ ಈಗಾಗಲೆ ಸೂಚಿಸಲಾಗಿದೆ. ಅದನ್ನು ಸರಕಾರವೇ ಭರಸಿಲಿದೆ.
-ಡಾ| ನವೀನ್‌ಚಂದ್ರ
ನೋಡಲ್ ಅಧಿಕಾರಿ, ದ.ಕ.
Advertisement