Advertisement
ತಾಲೂಕಿನಲ್ಲಿ ಆಂದಾಜು 20-30 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಅಜವಾನ್‌ಗೆರಾಜ್ಯದಲ್ಲಿ ಸೂಕ್ತ ಮಾರುಕಟ್ಟೆಗಳೇ ಇಲ್ಲ. ಇಲ್ಲಿಯ ಬೆಳೆಗಾರರು ಹೊರರಾಜ್ಯದ ಮಾರುಕಟ್ಟೆಯನ್ನು ಅವಲಂಬಿಸುವಂತಾಗಿದೆ.
Related Articles
Advertisement
ಅಜವಾನ್‌ಗೆ ಉತ್ತಮ ಬೆಲೆ: ಅಜವಾನ್‌ನನ್ನು ಔಷಧಿಯ ವಸ್ತು ತಯಾರಿಕೆಯಲ್ಲಿ ಬಳಕೆ ಮಾಡುತ್ತಿರುವುದರಿಂದ ಅಜವಾನ್ ಬೆಲೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 20ರಿಂದ 25ಸಾವಿರ ರೂ.ಗೆ ಮಾರಾಟವಾಗಲಿದೆ.
ಮಾರುಕಟ್ಟೆಯ ಸಮಸ್ಯೆ: ಅಜವಾನ್ ಬೆಳೆಯನ್ನು ತಾಲೂಕಿನಲ್ಲಿಯೇ ಮೊದಲಿಗೆ ಧನ್ನೂರ ಗ್ರಾಮದ ರೈತ ವಿಜಯಕುಮಾರ ಹುದ್ದಾರ ಬೆಳೆದಿದ್ದು ವಿಶೇಷ. ಅವರು ಅಜವಾನ್‌ನನ್ನು ಹೆಚ್ಚಿನ ಇಳುವರಿಯಲ್ಲಿ ಬೆಳೆದಿರುವುದನ್ನು ಕಂಡು ತಾಲೂಕಿನ ಹಿರೇಬಾದವಾಡಗಿ,ಬೇವಿನಮಟ್ಟಿ, ಚಿಕ್ಕಬಾದವಾಡಗಿ, ಚಿತ್ತವಾಡಗಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆಯುತ್ತಾರೆ. ಆದರೆ, ರಾಜ್ಯದಲ್ಲಿಯೇ ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ. ಅಜವಾನ್ ಮಾರುಕಟ್ಟೆ ಸ್ಥಾಪಿಸುವಂತೆ ರೈತರ ಒತ್ತಾಯವಾಗಿದೆ.
ಅಜವಾನ್ ಬೆಳೆ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬೆಳೆ. ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಂಗಳೂರನಲ್ಲೂ ಅಜವಾನ್ ಮಾರುಕಟ್ಟೆಯಿಲ್ಲ. ಆಂಧ್ರದ ಕರ್ನೂಲ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. -ವಿಜಯಕುಮಾರ ಕೆ ಹುದ್ದಾರ್, ಧನ್ನೂರದ ಅಜವಾನ್ ಬೆಳೆಗಾರ
ಅಜವಾನ್ ಬೆಳೆಗೆ ಬೆಳಗಾವಿ ವಿಭಾಗದಲ್ಲೂ ಮಾರುಕಟ್ಟೆಯ ವ್ಯವಸ್ಥೆಯಿಲ್ಲ. ಈಕುರಿತು ಸರ್ಕಾರದ ಗಮನಕ್ಕೆ ತರಬೇಕು. ಈ ಕುರಿತು ಕೃಷಿ ಮಾರಾಟ ಮಂಡಳಿಯೊಂದಿಗೆ ಮಾತನಾಡುತ್ತೇನೆ. -ನಜೀರ ಅಹ್ಮದ್ ಲಕ್ಕುಂಡಿ, ಜಿಲ್ಲಾ ವ್ಯವಸ್ಥಾಪಕರು ಎಪಿಎಂಸಿ ಬಾಗಲಕೋಟೆ.
-ಮಲ್ಲಿಕಾರ್ಜುನ ಎಂ ಬಂಡರಗಲ್ಲ