Advertisement

ನಿರ್ವಹಣೆ ಕೊರತೆ-ಕೆಟ್ಟು ನಿಂತ ಸಿಸಿ ಕ್ಯಾಮೆರಾ

01:36 PM Dec 23, 2021 | Team Udayavani |

ಹಾವೇರಿ: ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ವಾಹನಗಳ ಕಳ್ಳತನ, ಮಹಿಳಾ ದೌರ್ಜನ್ಯಗಳ ಮೇಲೆ ಹದ್ದಿನ ಕಣ್ಣಿಡುವ ದೃಷ್ಟಿಯಿಂದ ಪೊಲೀಸ್‌ ಇಲಾಖೆ ನಗರದ ಪ್ರಮುಖ ಭಾಗಗಳಲ್ಲಿ ಅಳವಡಿಸಿದ್ದ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳುನಿರ್ವಹಣೆಯಿಲ್ಲದೇ ಧೂಳು ತಿನ್ನುತ್ತಿದ್ದು, ನಗರದಲ್ಲಿನಡೆಯುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ.

Advertisement

ನಗರದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳು, ಅಪಘಾತಗಳು, ವಾಹನಗಳಕಳ್ಳತನ ಹಾಗೂ ಮಹಿಳಾ ದೌರ್ಜನ್ಯಗಳ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವಹಿನ್ನೆಲೆಯಲ್ಲಿ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಪ್ರಾಧಿಕಾರದ ಸಹಕಾರದೊಂದಿಗೆ ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ನಿರ್ವಹಣೆಯ ಕೊರತೆಯಿಂದ ಬಹುತೇಕ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು, ಧೂಳು ತಿನ್ನುತ್ತ ಕಣ್ಣು ಮುಚ್ಚಿಕೊಂಡು ಕುಳಿತಿವೆ. ಇದರಿಂದಾಗಿ ನಗರದಲ್ಲಿ ನಡೆಯುತ್ತಿರುವಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆಗೆ ಸಮಸ್ಯೆ ಎದುರಾಗಿದೆ.

ಸಿಸಿ ಕ್ಯಾಮೆರಾ ಅಳವಡಿಕೆ: ನಗರದ ಪ್ರಮುಖವೃತ್ತಗಳಾದ ಹೊಸಮನಿ ಸಿದ್ದಪ್ಪ ವೃತ್ತ, ಸುಭಾಸಸರ್ಕಲ್‌, ಜೆಪಿ ವೃತ್ತ, ಜೆ.ಎಚ್‌.ಪಟೇಲ್‌ ವೃತ್ತ, ಅಂಬೇಡ್ಕರ್‌ ಸರ್ಕಲ್‌, ಜಿ.ಎಚ್‌.ಕಾಲೇಜು ಹತ್ತಿರ,ಕೆಇಬಿ ವೃತ್ತ, ಅಕ್ಕಮಹಾದೇವಿ ಸರ್ಕಲ್‌, ಬಸ್‌ ನಿಲ್ದಾಣ, ಎಂ.ಜಿ. ರಸ್ತೆ, ಹಾನಗಲ್ಲ ರೋಡ್‌, ಪಾದಗಟ್ಟಿ ಕ್ರಾಸ್‌, ಬಸವೇಶ್ವರ ನಗರದ 17ನೇ ಕ್ರಾಸ್‌, ರೈಲ್ವೆನಿಲ್ದಾಣದ ಹತ್ತಿರ, ಇಜಾರಿಲಕಮಾಪುರ ಸೇರಿದಂತೆನಗರದ ಪ್ರಮುಖ 36 ಪ್ರದೇಶಗಳಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಸಿಸಿ ಕ್ಯಾಮರಾ ಇದ್ದೂ ಇಲ್ಲದಂತಾಗಿದೆ.

ನಿರ್ವಹಣೆ ಇಲ್ಲದೇ ಹಾಳು: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾ ಸಹಕಾರಿಯಾಗಿದ್ದು,ಈಮೂಲಕ ಸಂಚಾರಿ ನಿಯಮ ಉಲ್ಲಂಘನೆ, ಅಪಘಾತ ಪ್ರಕರಣ,  ಸರಗಳ್ಳತನ, ವಾಹನಗಳ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ಮಟ್ಟಹಾಕಲು ಪೊಲೀಸ್‌ ಇಲಾಖೆಗೆ ಸಾಥ್‌ ನೀಡುತ್ತಿವೆ . ಆದರೆ ಇಲ್ಲಿನ ಪೊಲೀಸ್‌ ಇಲಾಖೆ ಸಿಸಿ ಕ್ಯಾಮೆರಾಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸದ ಸಂಗತಿ. ನಗರದ ಜನತೆ ಆತಂಕ ರಹಿತವಾಗಿ ಸಂಚಾರಕ್ಕೆ ಮುಕ್ತಗೊಳಿಸಲು ಸಂಬಂಧಿಸಿದವರು ಸಿಸಿಕ್ಯಾಮೆರಾಗಳನ್ನು ದುರಸ್ತಿಗೊಳಿಸಬೇಕಾದಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಖಾಸಗಿ ಫೂಟೆಜ್‌ಗಳ ಮೊರೆ: ನಗರದ 36ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಅಳವಡಿಸಿರುವ ಸಿಸಿಕ್ಯಾಮೆರಾಗಳು ಹಾಳಾಗಿದ್ದು, ನಗರದಲ್ಲಿ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೂ ನಗರದಲ್ಲಿ ನಡೆಯುವ ಅಪಘಾತ, ಕಳ್ಳತನ,ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಗಳನ್ನು ಪತ್ತೆ ಹಚ್ಚಲು ‌ ಪೊಲೀಸ್‌ ಇಲಾಖೆ ನಗರದ ವಿವಿಧ ಅಂಗಡಿಕಾರರು, ಸಾರ್ವಜನಿಕರು ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಜಿಲ್ಲಾ ಪೊಲೀಸ್‌ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ನಗರದಲ್ಲಿಕೆಟ್ಟು ನಿಂತಿರುವ ಸಿಸಿ ಕ್ಯಾಮೆರಾಗಳನ್ನು ಸರಿಪಡಿಸುವಕುರಿತು ಶಾಸಕರುಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.ಹಾವೇರಿ ನಗರದಲ್ಲಿ ಹೆಚ್ಚುವರಿಯಾಗಿಮಾರುಕಟ್ಟೆಪ್ರದೇಶ, ಎಲ್ಲ ಭಾಗದಿಂದ ನಗರಕ್ಕೆ ಪ್ರವೇಶಿಸುವ ಸ್ಥಳ ‌ಸೇರಿ 100ಕ್ಕೂಹೆಚ್ಚು ಪ್ರದೇಶಗಳನ್ನುಹೊಸದಾಗಿ ಗುರುತಿಸಲಾಗಿದೆ.ಈ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ನಗರಸಭೆ, ಶಾಸಕರು ಹಾಗೂ ಡಿಸಿಯವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. – ಹನುಮಂತರಾಯ,ಎಸ್ಪಿ,ಹಾವೇರಿ

-ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next