Advertisement

Hubli; ಹಿಂದುಳಿದ ವರ್ಗದವರಲ್ಲಿ ನಾಯಕತ್ವದ ಕೊರತೆಯಿದೆ: ಎನ್.ಎಲ್. ನರೇಂದ್ರ ಬಾಬು

03:57 PM Aug 26, 2024 | Team Udayavani |

ಹುಬ್ಬಳ್ಳಿ: ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷವಾದರೂ ಸಂವಿಧಾನ ಶಿಲ್ಪಿ ಡಾ.‌ ಬಾಬಾಸಾಹೇಬ ಅಂಬೇಡ್ಕರರ ಆಸೆ ಇನ್ನೂ ಈಡೇರಿಲ್ಲ. ದೇಶದಲ್ಲಿ ಹಿಂದುಳಿದ ವರ್ಗದವರು ಶೇ.60ರಷ್ಟು ಜನಸಂಖ್ಯೆ ಹೊಂದಿದ್ದರೂ ಸರಿಯಾಗಿ ಮೀಸಲಾತಿ ಜಾರಿಯಾಗಿಲ್ಲ. ಇದಕ್ಕೆಲ್ಲಾ ಸಮಾಜವು ಸಂಘಟಿತವಾಗುವಲ್ಲಿ ತೋರಿದ ನಿರ್ಲಕ್ಷ್ಯ ಹಾಗೂ ಮುಖಂಡರು ಗಟ್ಟಿ ಧ್ವನಿ ಎತ್ತುವಲ್ಲಿ ವಿಫಲವಾಗಿರುವುದೇ ಕಾರಣ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಎನ್.ಎಲ್. ನರೇಂದ್ರ ಬಾಬು ಹೇಳಿದರು.

Advertisement

ಇಲ್ಲಿನ ಕೇಶ್ವಾಪುರ ರಸ್ತೆಯ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರ ಕಚೇರಿ ಎದುರಿನಲ್ಲಿ ಅಖಿಲ ಭಾರತ ಒಬಿಸಿ ರೈಲ್ವೆ ನೌಕರರ ಸಂಘದ (ಎಐಒಬಿಸಿಆರ್‌ಇಎ) ನವೀಕೃತ ವಲಯ ಕಚೇರಿ ಉದ್ಘಾಟನೆ ಹಾಗೂ ಬಿ.ಪಿ. ಮಂಡಲ 106ನೇ ಜನ್ಮದಿನೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡಿದರು.

ಕೌಶಲ್ಯ ಇರುವುದೇ ಹಿಂದುಳಿದ ವರ್ಗದವರಲ್ಲಿ. ಆದರೆ ನಮ್ಮ ಭವಿಷ್ಯ ರೂಪಿಸುವ ನಾಯಕತ್ವದ ಕೊರತೆ ಇದೆ. ಸಮಾಜವು ಎಲ್ಲಾ ಕ್ಷೇತ್ರಗಳಲ್ಲಿ ಪ್ರವರ್ಧಮಾನಕ್ಕೆ ಬರಬೇಕು. ‌ಸಮಾನತೆ, ಸಮಾನ ಅವಕಾಶ ಸಿಗಬೇಕು. ಹಿಂದುಳಿದವರೆಂದು ಕೈಕಟ್ಟಿ ಕುಳಿತರೆ ಆಗದು‌. ಸುಶಿಕ್ಷಿತರಾಗಿ ಸಂಘಟಿತರಾಗಬೇಕಿದೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.

ಎಐಒಬಿಸಿಆರ್‌ಇಎ ಪ್ರಧಾನ ಕಾರ್ಯದರ್ಶಿ ಗೋವರ್ಧನ ವೈ., ಹುಬ್ಬಳ್ಳಿ ವಿಭಾಗದ ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ ವಿಜಯ ಸಿಂಗ್‍‌ ಯಾದವ, ಅನಂತ ಗುರುಸ್ವಾಮಿ, ಜಿ.ಬಿ. ವೆಂಕಟ ರಾವ್., ಗೋಪಿನಾಥ, ರಾಜೇಶ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next