Advertisement

ಭಾಗ್ಯ ನಗರಕ್ಕಿಲ್ಲ ಮೂಲ ಸೌಕರ್ಯ-ಸ್ವಚ್ಛತೆ ಭಾಗ್ಯ

03:21 PM Feb 26, 2020 | Suhan S |

ನರೇಗಲ್ಲ: ಸರ್ಕಾರ ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ ಪಟ್ಟಣದ ಕೆಲ ಭಾಗಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ. ಇದಕ್ಕೆ ಉದಾಹರಣೆ ಪಟ್ಟಣದ ವಾರ್ಡ್‌ ನಂ. 7ರಲ್ಲಿನ ಭಾಗ್ಯ ನಗರ. ಇಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ಸಾಮೂಹಿಕ ಶೌಚಾಲಯ, ಬೀದಿ ದೀಪ, ಸಿಸಿ ರಸ್ತೆ, ಉದ್ಯಾನವನ ಸೇರಿದಂತೆ ಹತ್ತು ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.

Advertisement

ನರೇಗಲ್ಲ ಪಟ್ಟಣಕ್ಕೆ ಕಳೆದ ಮೂರು ವರ್ಷಗಳಲ್ಲಿ ಸರ್ಕಾರದಿಂದ 6,78,55,428 ರೂ. ಅನುದಾನ ಬಂದಿದೆ. ಆದರೂ ಭಾಗ್ಯ ನಗರ ಮಾತ್ರ ಅಭಿವೃದ್ಧಿ ಕಂಡಿಲ್ಲ. ಕಸ ವಿಲೇವಾರಿ ಇರಲಿ ಇಲ್ಲಿನ ಚರಂಡಿಗಳ ನಿರ್ವಹಣೆ ಕೂಡ ಸರಿಯಾಗಿ ಆಗುತ್ತಿಲ್ಲ. ಗಬ್ಬು ವಾಸನೆ ಮಧ್ಯದಲ್ಲಿಯೇ ಇಲ್ಲಿನ ನಿವಾಸಿಗಳು ವಾಸಿಸುತ್ತಿದ್ದು, ಜನಪ್ರತಿನಿ ಧಿಗಳು, ಪ.ಪಂ ಅಧಿಕಾರಿಗಳು ಮಾತ್ರ ಸಮಸ್ಯೆ ಪರಿಹಾರ ದೊರಕಿಸಿಕೊಡುತ್ತಿಲ್ಲ. ಭಾಗ್ಯನಗರವು 2011ರಲ್ಲಿ ಪ.ಪಂ ವ್ಯಾಪ್ತಿಗೆ ಒಳ್ಳಪಟ್ಟಿದೆ. ಪ್ರತಿವರ್ಷ ತಪ್ಪದೆ ತೆರಿಗೆ ವಸೂಲಿ ಮಾಡುವ ಪ.ಪಂ ಅಧಿಕಾರಿಗಳು ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಉದಾಸೀನ ಧೋರಣೆ ತೋರುತ್ತಿದ್ದಾರೆ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ನನಸಾಗಿಲ್ಲ ಸ್ವಚ್ಛ ಭಾರತ ಕನಸು: ಭಾಗ್ಯ ನಗರದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಕಣ್ಣು ಮುಂದೆ ಕಾಣುತ್ತಿದೆ. ಚರಂಡಿಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ, ಹಾಳೆ, ತ್ಯಾಜ್ಯ ನೀರು ತುಂಬಿಕೊಂಡು ಗುಬ್ಬು ನಾರುತ್ತಿದೆ. ಅಲ್ಲದೇ ನಗರದಲ್ಲಿ ಪ್ರತಿಯೊಂದು ಮನೆಯ ಮುಂದೆ ಕಸದ ರಾಶಿ ಗೋಚರಿಸುತ್ತದೆ. ಇಲ್ಲಿ ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿರುವ ನಗರದಲ್ಲಿ ಪ.ಪಂ ವತಿಯಿಂದ ಒಂದೂ ಕಂಟೇನರ್‌ ಅಳವಡಿಸಿಲ್ಲ. ಕಸ ವಿಲೇವಾರಿ ಜವಾಬ್ದಾರಿ ಪ.ಪಂ ಹೆಗಲಿಗೆ ಇದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದ್ದಾರೆ. ಕಸ ಹೆಚ್ಚಾಗುತ್ತಿದ್ದಂತೆ ಸೊಳ್ಳೆ, ಹಂದಿಗಳ ಕಾಟವೊ ದಿನೇ ದಿನೇ ಹೆಚ್ಚಾಗುತ್ತಿದೆ.

ಭಾಗ್ಯ ನಗರದಲ್ಲಿ ಕಳೆದ ಐದಾರು ವರ್ಷಗಳಿಂದ ಆರಂಭವಾಗಿರುವ ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರು, ಶಾಲೆಯ ಸುತ್ತ ಸ್ವಚ್ಛತೆ ಸೇರಿದಂತೆ ನಿತ್ಯ ಅಂಗನವಾಡಿಗೆ ಬರುವ ವಿದ್ಯಾರ್ಥಿಗಳು ಕೊಳಚೆ ನೀರಿನ್ನು ತುಳಿದುಕೊಂಡು ಕೇಂದ್ರಕ್ಕೆ ಬರಬೇಕಾಗಿದೆ. ಅಂಗನವಾಡಿ ಮುಂದೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮಕ್ಕಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಶೌಚಾಲಯ ಇದ್ದರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಸವಳು ನೀರೇ ಗತಿ: ಪಟ್ಟಣದ ವಿವಿಧ ಕಡೆಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಆದರೆ, ಅವು ಬೇಸಿಗೆ ಪ್ರಾರಂಭ ಹಂತದಲ್ಲೇ ಸ್ಥಗಿತೊಂಡಿವೆ. ಕಳೆದ 19 ಷರ್ವಗಳಿಂದ ಈ ನಗರದ ಜನತೆ ಸವಳು ನೀರು ಕುಡಿದು ಜೀವನ ಸಾಗಿಸುತ್ತಿದ್ದಾರೆ. ಭಾಗ್ಯ ನಗರದಲ್ಲಿ ಕನಿಷ್ಠ 15 ನೂರಕ್ಕೂ ಅಧಿಕ ಮಹಿಳೆಯರು ಮತ್ತು ಪುರುಷರು ನಿತ್ಯ ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಇಲ್ಲಿ ಒಂದು ಸಾಮೂಹಿಕ ಶೌಚಾಲಯವಿಲ್ಲದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next