Advertisement
ಜೀವ ಭಯದಲ್ಲಿ ವಾಸ: ಹಲವಾರು ತಲೆಮಾರುಗಳಿಂದ ಹಿರಿಯರ ನೆಲೆ ನಿಂತು ಬದುಕು ಸಾಗಿಸಿದ ನೆನಪುಗಳ ಬುತ್ತಿ ಮೆಲುಕಿ ಹಾಕುತ್ತಾ ಇಂದಿಗೂ ಗ್ರಾಮದ ಜನರು ಬದುಕಿನ ಬಂಡಿ ಸಾಗಿಸುತ್ತಾ ತಮ್ಮ ಹಿರಿಯರು ನಿರ್ಮಿಸಿದ ಮಣ್ಣಿನ ಗೋಡೆಯ ಮನೆಗಳು ನೆಲ ಕಚ್ಚುವ ಸ್ಥಿತಿ ತಲುಪಿದ್ದು ಅದೇ ಹಳೆಯ ಮನೆಗಳು, ಬೀದಿರು ದಬ್ಬೆಯ ಮೇಲೆನ ಹೊದಿಕೆ, ಹಂಚಿನ ಮನೆಗಳಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ. ಮತ್ತೇ ಕೆಲವು ಮನೆಗಳು ನೆಲಕ್ಕುರುಳಿವೆ.
Related Articles
Advertisement
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಈ ಗ್ರಾಮದ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜಕಾರಿಣಿಗಳು ಮಾತ್ರ ಇತ್ತ ಗಮನ ಹರಿಸದೆ ದೂರು ಉಳಿದು ಚುನಾ ವಣೆ ಬಂತೆಂದರೆ ಸಾಕು, ಮತ ಪಡೆ ಯುವ ಸಲುವಾಗಿ ನಿಮ್ಮ ಸಮಸ್ಯೆ ಬಗೆ ಹರಿಸಿಕೊಡುವ ಭರವಸೆ ನೀಡಿ ಚುನಾವಣೆ ನಂತರ ಜಯಗಳಿಸಿದ ಯಾವೊಬ್ಬ ಪ್ರತಿನಿಧಿಯೂ ಸಹ ಇತ್ತ ಸುಳಿಯದೆ ಇರುವುದು ಎದ್ದು ಕಾಣತೊಡಗಿದೆ.
ನಿವೇಶನ ಭಾಗ್ಯವೂ ಇಲ್ಲ: ಪ್ರಸ್ತುತ ಗ್ರಾಮದಲ್ಲಿ ಸುಸಜ್ಜಿತ ಶಾಲಾ ಕೊಠಡಿ ಇಲ್ಲದೆ ಪಾಠ ಪ್ರವಚನಕ್ಕೆ ಭಾರೀ ತೊಂದರೆ ಉಂಟಾಗಿದೆ. ಈ ಗ್ರಾಮದ ಸರ್ವೆ ನಂಬರ್ 75ರಲ್ಲಿ ಸುಮಾರು ಐದು ಎಕರೆ ಭೂಮಿಯನ್ನು ಗ್ರಾಮಸ್ಥರಿಗೆ ನಿವೇಶನ ಒದಗಿಸಲು ಮೀಸಲಿಟ್ಟಿದ್ದಾರೆ. ಈ ಬಗ್ಗೆ ಗ್ರಾಮದ ಮುಖಂಡರು ಹಲವು ಬಾರಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರೂ ಸಹ ಯಾವುದೆ ಪ್ರಯೋಜ ಕಂಡಿಲ್ಲ. ತಮ್ಮ ಗ್ರಾಮಸ್ಥರ ಅಳಲಿಗೆ ಸರ್ಕಾರದ ಮನ ಕರಗಿ ಸೌಕರ್ಯ ನೀಡಲಿದ್ಯಾ? ಈ ಗ್ರಾಮದ ಮೂಲ ಭೂತ ಸೌಕರ್ಯಗಳನ್ನು ನೀಡುವಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಗಮನ ಹರಿಸುವುದೆ ಎಂಬುದನ್ನು ಕಾದು ನೋಡಬೆಕಿದೆ.
ಹೆಸರಿಗಷ್ಟೇ ಈ ಗ್ರಾಮ ಮಲ್ಲಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದೆ. ಆದರೇ ಗ್ರಾಮೀಣ ಭಾಗದ ಅನುದಾನ ಏನಾಗಿದೆ ಗೊತ್ತಿಲ್ಲ. ಈ ಗ್ರಾಮಗಳ ಅಭಿವೃದ್ಧಿಗೆ ಪಿಡಿಒ ಅಧಿಕಾರಿಗಳು ಯಾವ ಕ್ರಮ ವಹಿಸಿದ್ದಾರೆ? ಗ್ರಾಮಗಳ ಅಭಿವೃದ್ಧಿ ಬಗ್ಗೆ ತಾಪಂ ಇಒ, ಜಿಪಂ ಸಿಇಒ, ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಹಾದಿಯಾಗಿ ಯಾವೊಬ್ಬ ಅಧಿಕಾರಿಯೂ ಈ ಗ್ರಾಮದ ದುಸ್ಥಿತಿ ಸರಿ ಪಡಿಸಲು ಮುಂದಾಗಿಲ್ಲ. ಮೂಲ ಸೌಕರ್ಯವಿಲ್ಲದೇ ಬದುಕುತ್ತಿರುವ ಇಲ್ಲಿನ ಗ್ರಾಮಸ್ಥರ ಬೇಡಿಕೆ ಅರಣ್ಯ ರೋದನವಾಗಿದೆ. ಯಾವ ಸರ್ಕಾರ ನಮ್ಮ ಗ್ರಾಮದ ಉದ್ಧಾರಕ್ಕೆ ಬರುವುದೋ ಗೊತ್ತಿಲ್ಲ. – ಮಂಜುನಾಥ್, ತೆವಡಹಳ್ಳಿ ಗ್ರಾಮಸ್ಥ