Advertisement

ಐಸಿಯು ಹಾಸಿಗೆಗಳಿಲ್ಲದೆ ಸೋಂಕಿತರ ಪರದಾಟ

01:32 PM Jun 24, 2020 | Suhan S |

ಮುಂಬಯಿ, ಜೂ. 23: ಕೋವಿಡ್ ಸೋಂಕಿತರಿಗೆ ಹೆಚ್ಚಿನ ಸೌಲಭ್ಯವನ್ನು ಮುಂಬಾಯಿ ಮನಪಾ ತನ್ನಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದೆ. ಆದರೆ ಜೂನ್‌ 20ರೊಳಗೆ 300 ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ನಿರ್ಮಿಸಲು ಯೋಜಿಸಿರುವ ಮನಪಾ ಜೂನ್‌ 17ರ ವರೆಗೆ ಕೇವಲ 51 ಐಸಿಯು ಹಾಸಿಗೆಗಳನ್ನು ನಿರ್ಮಿಸಿದ್ದು, ಆಸ್ಪತ್ರೆಗಳಲ್ಲಿ ಸೌಲಭ್ಯಕ್ಕಾಗಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ರಾಜ್ಯ ಮತ್ತು ಕೇಂದ್ರದ ಸಮೀಕ್ಷೆಗಳು ಜೂನ್‌ ಅಂತ್ಯದ ವೇಳೆಗೆ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದು ಈ ಹಿನ್ನೆಲೆ ನಗರದಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದಾಗಿ ಬಿಎಂಸಿ ಹೇಳಿದೆ. ಪ್ರಸ್ತುತ ಸೋಂಕಿನ ಬೆಳವಣಿಗೆಯ ವೇಗ ಮುಂದುವರಿದರೆ ಅಂದಾಜು 80,000 ಕೋವಿಡ್‌ -19 ಪ್ರಕರಣಗಳಿಗೆ ಐಸಿಯು ಘಟಕಗಳನ್ನು ಸಿದ್ಧತೆ ಮಾಡಬೇಕಾಗಿದೆ ಎನ್ನಲಾಗಿದೆ.

ಈಗಾಗಲೇ ಯೋಜಿಸಿರುವಂತೆ ಬಿಎಂಸಿ ಜೂನ್‌ 25ರ ವರೆಗೆ ಹಾಸಿಗೆಯ ಸಾಮರ್ಥ್ಯವನ್ನು 300ರಷ್ಟು ಹೆಚ್ಚಿಸಲಾಗುವುದು. ನಾವು ಐಸಿಯು ಹಾಸಿಗೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದೇನೆ ಎಂದು ಪುರಸಭೆ ಆಯುಕ್ತ ಇಕ್ಬಾಲ್‌ ಸಿಂಗ್‌ ಚಾಹಲ್‌ ಹೇಳಿದರು. ಜೂನ್‌ 10ರಂದು ಚಾಹಲ್‌ 10 ದಿನಗಳಲ್ಲಿ 300 ಐಸಿಯು ಹಾಸಿಗೆಗಳನ್ನು ಸೇರಿಸಲಾಗುವುದು ಎಂದು ಹೇಳಿದ್ದರು. ನಗರದಲ್ಲಿ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿ ಈ ಸಾಮರ್ಥ್ಯವನ್ನು ಹೆಚ್ಚಿಸುವ ಆವಶ್ಯಕತೆಯಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ. ಜೂನ್‌ 17ರ ವರೆಗೆ 1,215ರ ಒಟ್ಟು ಐಸಿಯು ಹಾಸಿಗೆಯ ಸಾಮರ್ಥ್ಯದ ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸುಮಾರು ಶೇ. 95ರಷ್ಟು ಹಾಸಿಗೆಗಳನ್ನು ಆಕ್ರಮಿಸಲಾಗಿದೆ.

ಕನಿಷ್ಠ ಶೇ. 7ರಷ್ಟು ಪ್ರಕರಣಗಳಿಗೆ ಐಸಿಯು ಹಾಸಿಗೆಗಳು ಲಭ್ಯವಿರಬೇಕು ಎಂದು ವೈದ್ಯಕೀಯ ಸಲಹೆಗಾರರ ಸಂಘದ ಅಧ್ಯಕ್ಷ ಡಾ| ದೀಪಕ್‌ ಬೈದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next