Advertisement

“ಹದಿಹರೆಯದ ವಯಸ್ಸಿಗೆ ಮಾರ್ಗದರ್ಶನದ ಕೊರತೆ’

11:25 PM Jul 12, 2019 | Team Udayavani |

ಬೆಳ್ತಂಗಡಿ: ಹದಿಹರೆಯದ ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಂದ ಸಹಜ ವಾಗಿಯೇ ಉದ್ವೇಗಕ್ಕೆ ಒಳಗಾಗಿ ಹಲವು ಬಾರಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಆರಂಭಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಇದರಿಂದಾಗುವ ಪರಿ ಣಾಮ ತಿಳಿಸುವುದು ಅನಿವಾರ್ಯ ಎಂದು ಮಂಗಳೂರಿನ ಡೀಡ್ಸ್‌ ಸಂಸ್ಥೆಯ ಸಂಯೋಜಕಿ ಗುಲಾಬಿ ಬಿಳಿಮಲೆ ಅಭಿಪ್ರಾಯಪಟ್ಟರು.

Advertisement

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಏರ್ಪಡಿಸಲಾದ 2 ದಿನಗಳ ಲಿಂಗತ್ವ ಸಮಾನತೆ ಮಾಹಿತಿ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಆಕರ್ಷಣೆ
ತಮ್ಮ ಶೈಕ್ಷಣಿಕ ಗುರಿ ತಲುಪುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವಾರು ಆಕರ್ಷಣೆಗಳಿಗೆ ಒಳಗಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸೂಕ್ತ ಮಾರ್ಗದರ್ಶನದಿಂದ ತಪ್ಪು ಹಾದಿ ತುಳಿಯದಂತೆ ಕಾಪಾಡಬಹುದು ಎಂದು ಅವರು ತಿಳಿಸಿದರು. ಆರು ಮಂದಿ ಸಂಪನ್ಮೂಲ ವ್ಯಕ್ತಿಗಳ ತಂಡ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟಿತು.

ಕಾಲೇಜಿನ ಪ್ರಾಚಾರ್ಯ ಪ್ರೊ| ಎನ್‌. ದಿನೇಶ್‌ ಚೌಟ ಮಾರ್ಗದರ್ಶನ ನೀಡಿದರು. ಕಾಲೇಜಿನ ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕರಾದ ದಿವ್ಯಾಕುಮಾರಿ ಹಾಗೂ ಡಾ| ರಾಜೇಶ್ವರಿ ಕೆ.ಆರ್‌. ಕಾರ್ಯಕ್ರಮ ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next