Advertisement
ಗ್ರಾಪಂಗಳ ಕಾರ್ಯವೈಖರಿ ಹಾಗೂ ಸಾಧನೆಯ ಬಗ್ಗೆ ಹಲವಾರು ರೀತಿಯ ಅಸಮಾಧಾನ ಜನರಲ್ಲಿದೆ.ಅಧಿಕಾರ ಹಾಗೂ ಅನುದಾನ ಸರಿಯಾಗಿ ಇರುವಾಗಸಮಸ್ಯೆಗಳಿಗೆ ಏಕೆ ಪರಿಹಾರವಿಲ್ಲ ಎಂಬ ಹತ್ತಾರುಪ್ರಶ್ನೆಗಳು ಕಾಡುತ್ತಿವೆ. ವಿಧಾನ ಸಭಾ ಹಾಗೂಲೋಕಸಭಾ ಕ್ಷೇತ್ರಗಳಂತೆ ಗ್ರಾಪಂ ಮತ್ತುಪಂಚಾಯಿತಿಯ ಕ್ಷೇತ್ರಗಳ ಮೌಲ್ಯಮಾಪನ ಸಹ ಆಗಬೇಕು ಎಂಬುದು ಜನರ ಆಗ್ರಹವಾಗಿದೆ.
Related Articles
Advertisement
ಅಧಿಕಾರಿ ದಾಹ: ದಶಕದ ಹಿಂದೆ ಗ್ರಾಮ ಚುನಾವಣೆಎಂದರೆ ಅದಕ್ಕೊಂದು ಬೆಲೆ ಇತ್ತು. ಅಭ್ಯರ್ಥಿಗಳನ್ನು ಹುಡುಕಬೇಕಿತ್ತು. ಆಗ ಪಂಚಾಯಿತಿಗಳಿಗೆ ಅಷ್ಟೇನುಅನುದಾನ ಬರುತ್ತಿರಲಿಲ್ಲ. ಅಭಿವೃದ್ಧಿ ಕೆಲಸಕ್ಕೆ ಸರ್ಕಾರನೀಡುವ ಹಣ ಸಾಲುತ್ತಿರಲಿಲ್ಲ. ಹೀಗಾಗಿ ಗ್ರಾಪಂಗೆಸ್ಪರ್ಧೆ ಮಾಡಲು ಯಾರೂ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ.ಆದರೆ, ಈಗ ಎಲ್ಲವೂ ಬದಲಾಗಿದ್ದು, ಸ್ಪರ್ಧೆಗೆ ಪೈಪೋಟಿನಡೆಯುತ್ತಿದೆ. ಭರವಸೆಗಳ ಜೊತೆ ಹಣದ ಹೊಳೆಹರಿಯುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಹಣ ಎಲ್ಲಿಗೆ ಹೋಗುತ್ತಿದೆ: ಗ್ರಾಪಂಗಳು ಈಗಮೊದಲಿನಂತಿಲ್ಲ. ಇಲ್ಲಿ ಇರುವ ರಾಜಕಾರಣ ದೇಶಹಾಗೂ ರಾಜ್ಯದ ಶಕ್ತಿ ಕೇಂದ್ರದಲ್ಲೂ ಕಾಣುವುದಿಲ್ಲ.ರಾಜಕಾರಣದ ಜೊತೆಗೆ ಅನುದಾನದ ಪ್ರಮಾಣ ಹೆಚ್ಚಾಗಿದೆ. ಆದರೆ, ಸಮಸ್ಯೆಗಳು ಮಾತ್ರ ಸಮಸ್ಯೆಯಾಗಿಯೇ ಉಳಿದಿವೆ, ಉಳಿಯುತ್ತಿವೆ.ಸರ್ಕಾರದಿಂದ ಬರುವ ಅನುದಾನ ಏನಾಗುತ್ತಿದೆ
ಎಂದು ಯಾರೂ ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಅಧಿಕಾರದಲ್ಲಿ ಉಳಿಯುವ ಆಸೆ, ಎಷ್ಟು ಅನುದಾನಯಾವುದಕ್ಕೆ ಖರ್ಚಾಗಿದೆ. ಯಾವ ಕ್ಷೇತ್ರಕ್ಕೆ ಎಷ್ಟುಪ್ರಮಾಣದಲ್ಲಿ ಹಣವಿದೆ. ಕಾಮಗಾರಿ ಮಾಡಿಲ್ಲವೆಂದಮೇಲೆ ಹಣ ಎಲ್ಲಿ ಹೋಯಿತು ಎಂಬುದರ ಬಗ್ಗೆಆಲೋಚನೆ ಮಾಡುವವರು ಜಾಣ ಕುರುಡುಅನುಸರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಶಾಸಕರ ಮನೆಯಲ್ಲಿ ಆಯ್ಕೆ: ಗ್ರಾಪಂಗಳು ಶಕ್ತಿಯುತವಾಗಿ ಕಾರ್ಯನಿರ್ವಹಿಸಬೇಕಾದರೆ,ಮೊದಲು ಗ್ರಾಮಸಭೆ ಪ್ರಾಮಾಣಿಕ ಹಾಗೂವ್ಯವಸ್ಥಿತವಾಗಿ ನಡೆಯಬೇಕು. ಸರ್ಕಾರದಯೋಜನೆಗಳು ಸರಿಯಾಗಿ ಜನರಿಗೆ ತಲುಪಬೇಕುಎಂಬ ಉದ್ದೇಶದಿಂದ ಗ್ರಾಮ ಸಭೆ ನಡೆಸಲಾಗುತ್ತದೆ.ಆದರೆ, ಈ ಸಭೆಗಳಿಗೆ ಬೆಲೆಯೇ ಇಲ್ಲ. ರಾಜಕಾರಣ ಗ್ರಾಮ ಸಭೆಯಲ್ಲಿ ನೇರವಾಗಿ ಕಾಣುತ್ತಿವೆ. ಸಭೆನಡೆದರೂ ಕಾಟಾಚಾರಕ್ಕೆ ಎಂಬುದು ಜನರ ನೇರ ಆರೋಪ. ಆಶ್ರಯ ಮನೆ ಗ್ರಾಮಸಭೆ ಮೂಲಕಹಂಚಿಕೆ ಮಾಡಬೇಕು. ಅದರೆ, ಹಲವು ಯೋಜನೆಗಳಫಲಾನುಭವಿಗಳ ಆಯ್ಕೆ ಇಲ್ಲಿಯೇ ನಡೆಯಬೇಕು.ಇದಾಗುತ್ತಿಲ್ಲ. ಶಾಸಕರ ಮನೆಯಲ್ಲಿ ಫಲಾನುಭವಿಗಳಆಯ್ಕೆ ನಡೆಯುತ್ತಿವೆ ಎಂದು ಜನರು ಆರೋಪಿಸಿದ್ದಾರೆ.
ಗ್ರಾಮ ಸಭೆಗೆ ಶಕ್ತಿ ತುಂಬಿ: ನಿಜವಾದ ಫಲಾನುಭವಿಗಳು ಆಶ್ರಯ ಮನೆಗಳಿಂದ ವಂಚಿತ ರಾಗುತ್ತಿರುವುದಲ್ಲದೆ, ಹಲವು ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಶಾಸಕರ ಬೆಂಬಲಿಗರು ಯಾವುದೇ ಸಮಸ್ಯೆ ಇಲ್ಲದೆ ಸರ್ಕಾರಿ ಯೋಜನಯನ್ನು ಪಡೆಯುತ್ತಿದ್ದಾರೆ. ಇದರ ಬಗ್ಗೆಸರ್ಕಾರ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆಪರಿಶೀಲನೆ ಮಾಡುವ ಗೋಜಿಗೆ ಹೋಗಿಲ್ಲ. ಗ್ರಾಮಸಭೆಗೆ ಶಕ್ತಿ ತುಂಬಿದರೆ, ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಗ್ರಾಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.
ಪರಿಣಾಮಕಾರಿಯಾಗಿ ಗ್ರಾಮ ಸಭೆ ನಡೆಯಲಿ :
ಗ್ರಾಪಂ ಮೌಲ್ಯಮಾಪನ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಪಂನಿಂದ ದೊಡ್ಡ ಪ್ರಮಾಣದ ನಿರೀಕ್ಷೆ ಮಾಡುವುದು ಕಷ್ಟವಾಗಿದೆ. ಪಂಚಾಯತ್ ಆಶಯ ಬಹಳ ಒಳ್ಳೆಯದು. ಆದರೆ, ಅದರ ಸದ್ಬಳಕೆ ಯಾಗುತ್ತಿಲ್ಲ. ಗ್ರಾಮ ಸಭೆಗಳು ಪರಿಣಾಮಕಾರಿಯಾಗಿ ನಡೆಯಬೇಕು. ಇದು ಜಾರಿಗೆ ಬಂದರೆ ಅರ್ಧದಷ್ಟು ಮೌಲ್ಯಮಾಪನ ಮಾಡಿದಂತೆ. ಗ್ರಾಪಂ ವ್ಯಾಪ್ತಿಯಲ್ಲಿ 25 ಇಲಾಖೆಗಳಿದ್ದರೂ ಯಾವುದರ ಮೇಲೂ ನಿಯಂತ್ರಣವಿಲ್ಲ. ಸದಸ್ಯರು ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿಜನರಿಗೆ ಮೌಲ್ಯಮಾಪನ ಎಂದರೆ ಏನು ಎಂಬಂತಾಗಿದೆ ಎಂದು ಬೀಮ್ ಆರ್ಮಿ ಮುಖ್ಯಸ್ಥ ರವಿಚಂದ್ರ ತಿಳಿಸಿದ್ದಾರೆ.
ಗ್ರಾಪಂಗೆ ಸಾಕಷ್ಟು ಅನುದಾನವನ್ನು ಸರ್ಕಾರ ನೀಡಲಿದೆ. ಇದರೊಂದಿಗೆಎನ್‌ಆರ್‌ಇಜಿ ಮೂಲಕವೂ ರೈತರಿಗೆಸಾಕಷ್ಟು ಪ್ರಯೋಜನೆ ದೊರೆಯಲಿದೆ.ಇದನ್ನು ಸಮರ್ಪಕವಾಗಿ ಜನರಿಗೆತಲುಪಿಸುವ ಕೆಲಸ ಗ್ರಾಪಂ ಪಿಡಿಒಮಾಡಬೇಕು. ಇನ್ನು ಪ್ರತಿ 6 ತಿಂಗಳಿಗೆ ಒಮ್ಮೆಗ್ರಾಮ ಸಭೆ ಮಾಡಿ, ಫಲಾನುಭವಿಗಳ ಆಯ್ಕೆ ಮಾಡಬೇಕಿದೆ. -ಸುನಿಲ್, ತಾಪಂ ಇಒ
ಗ್ರಾಪಂಗಳ ಮೂಲ ಉದ್ದೇಶಈಡೇರಿಲ್ಲ. ಪ್ರತಿ ಗ್ರಾಪಂಗೆ ಸಾಕಷ್ಟುಅನುದಾನ ಬರುತ್ತದೆ. ಆದರೆ, ಈ ಹಣ ಹೇಗೆ, ಯಾವುದಕ್ಕೆ ವಿನಿಯೋಗವಾಗಿದೆಎಂಬ ಮಾಹಿತಿ ಜನರಿಗೆ ಇಲ್ಲದಿರುವುದು ನೋಡಿದರೆ ಭ್ರಷ್ಟಾಚಾರಕ್ಕೆಎಡೆಮಾಡಿಕೊಡುತ್ತಿದೆ. ಅಧಿಕಾರಿಗಳುಇದರತ್ತ ಗಮನ ನೀಡುತ್ತಿಲ್ಲ. ಆದ್ದರಿಂದನಿಯಂತ್ರಣವೇ ಇಲ್ಲದಂತಾಗಿದೆ. ಈಗನೂತನ ಸದಸ್ಯರು ಜಾಗೃತರಾಗಬೇಕು. ಪ್ರತಿಯೋಜನೆ ಅನುಷ್ಠಾನದ ಪರಿಶೀಲನೆ ನಡೆಯಬೇಕು. – ಅಡಗೂರು ಶ್ರೀನಿವಾಸ್, ಮಾಹಿತಿ ಹಕ್ಕು ಹೋರಾಟಗಾರ
– ಶಾಮಸುಂದರ್ ಕೆ. ಅಣ್ಣೇನಹಳ್ಳಿ