ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಜೊತೆಗೆ ಮೇವಿನ ಅಭಾವವೂ ಕಾಡುತ್ತಿದ್ದು, ಜನಜಾನುವಾರುಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮದಲ್ಲಿಮೇವಿನ ಕೊರತೆಯಿಂದ ಜಾನುವಾರುಗಳ ಸಾಕಣೆ ಮಾಡಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮೇವು ಸರಬರಾಜು ಮಾಡಲು ರೈತರು ರಾಜ್ಯ ಪಶು ಸಂಗೋಪನೆ ಸಚಿವ ಪ್ರಭು ಚೌಹಾನ್ ಅವರ ಮೊರೆ ಹೋಗಿದ್ದಾರೆ.
ಜಿಲ್ಲಾಡಳಿತಕ್ಕೆ ಮನವಿ: ಇತ್ತೀಚಿಗೆ ಹುಲ್ಲಿನ ಬಣವೆ ಬೆಂಕಿಗೆ ಆಹುತಿ ಆಗಿದ್ದರಿಂದ ಧನಕರುಗಳಿಗೆ ಮೇವು ಇಲ್ಲದೆ ದೇವಿಕುಂಟೆ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಗೋಪಾಲ್ ಎಂಬ ರೈತ 30ಕ್ಕೂ ಹೆಚ್ಚು ದೇಸಿ ಹಸು ಸಾಕುತ್ತಿದ್ದಾರೆ. ಈಗ ಎಲ್ಲಿಯೂ ಮೇವು ಸಿಗದೆ ಹಸುಗಳನ್ನು ಸಾಕಣೆಮಾಡಲು ಪರದಾಡುತ್ತಿದ್ದಾರೆ. ಕೂಡಲೇ ಮೇವು ಒದಗಿಸಲು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.
ಬಣವೆಗಳು ಬೆಂಕಿಗೆ ಆಹುತಿ: ದೇವಿಕುಂಟೆಗ್ರಾಮದಲ್ಲಿ 86 ಮನೆಗಳಿವೆ. ಸುತ್ತಲೂ ಕಾಡುಮೇಡು ಇದೆ. ಇಲ್ಲಿನ ಬೆಟ್ಟ-ಗುಡ್ಡ, ರಸ್ತೆ ಬದಿ, ಖಾಲಿಜಮೀನಿನಲ್ಲಿ ಬೆಳೆಯುವ ಹುಲ್ಲನ್ನು ನಂಬಿಕೊಂಡು ಜನರು ಹಸು, ಮೇಕೆ, ಕುರಿ ಸಾಕುತ್ತಿದ್ದಾರೆ. ಬೇಸಿಗೆಯಲ್ಲಿ ಹಲ್ಲು ಒಣಗುವುದರಿಂದ ಹಸಿ ಮೇವುಎಲ್ಲೂ ಸಿಗುವುದಿಲ್ಲ. ಅಲ್ಲದೆ, ರಾತ್ರಿ ಮೇವಿಗಾಗಿಕೂಡಿಟ್ಟಿದ್ದ ಮೇವು ಬೆಂಕಿ ಬಿದ್ದು ಸುಟ್ಟು ಹೋಗಿದ್ದು, ಈಗ ಪರದಾಡುವಂತಾಗಿದೆ ಎಂದು ರೈತ ಗೋಪಾಲ್ ಅಳಲು ತೋಡಿಕೊಂಡರು.
ಈ ವರ್ಷ ಮಳೆ ಹೆಚ್ಚಾಗಿ ಬಿದ್ದು ವಿಪರೀತ ಹುಲ್ಲುಬೆಳೆದಿತ್ತು. ಪ್ರತಿ ವರ್ಷ ಕಾಡಿಗೆ ಬೆಂಕಿ ಬಿದ್ದಾಗ ಶೇ.50 ಹುಲ್ಲ ನಾಶವಾಗುತ್ತಿತ್ತು. 20 ದಿನಗಳ ಹಿಂದೆ ಕಿಡಿಗೇಡಿಗಳು ಇಟ್ಟಿದ್ದ ಬೆಂಕಿಗೆ ನಾಲ್ಕು ದಿನ ಉರಿದಿದ್ದು, ಇದರಿಂದ ಕಾಡು ನಾಶವಾಗಿತ್ತು. ಬೇಸಿಗೆಯಲ್ಲಿ ಮೇವು, ನೀರಿಲ್ಲದೆ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಮೇವಿನ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಈಗಾಗಲೇ ರಾಜ್ಯ ಪಶು ಸಂಗೋಪನೆಸಚಿವ ಪ್ರಭು ಚೌಹಾನ್, ಪಶು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಬಾಗೇಪಲ್ಲಿ ತಹಶೀಲ್ದಾರ್ ಅವರ ಮೊರೆ ಹೋಗಿದ್ದಾರೆ. ಆದರೆ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೇವಿಗಾಗಿ ಆಂಧ್ರಕ್ಕೆ ಮೊರೆ: ಸರ್ಕಾರ ಮೇವು ಒದಗಿಸದ ಕಾರಣ, ರೈತರು ಆಂಧ್ರದ ಮದ್ದಕವಾರಿ ಪಲ್ಲಿಯ ಕಾಡಿಗೆ ಹೋಗಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಕುಡಿಯುವನೀರು ಪೂರೈಕೆ ಮಾಡುವ ಜೊತೆಗೆ ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕ್ ಮತ್ತು ಗೋಶಾಲೆ ಆರಂಭಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಾಗೇಪಲ್ಲಿ ಪಶು ಅಧಿಕಾರಿಗಳು ಸೂಕ್ತಸಹಕಾರ ನೀಡುತ್ತಿಲ್ಲ, ಸರ್ಕಾರದಿಂದಬರುವ ಸೌಲಭ್ಯ ಕೊಡುವುದಿಲ್ಲ. ಹಸುಗಳುಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆನಾಟಿ ವೈದ್ಯ ಪದ್ಧತಿಯಿಂದ ಗುಣಮುಖಮಾಡಲಾಗುತ್ತಿದೆ. ಜೊತೆಗೆ ಹಸುಗಳಿಗೆನಿವೃತ್ತ ಪಶು ವೈದ್ಯರ ಸಹಕಾರದಿಂದ 30 ಹಸುಗಳ ಪೋಷಣೆಗೆ ಮಾಡಲಾಗುತ್ತಿದೆ.
–ಗೋಪಾಲ್, ರೈತ
ಭಾರತದಲ್ಲಿ 30 ರಿಂದ 35 ಶುದ್ಧ ಗೋತಳಿ ಗುರುತಿಸಲಾಗಿದೆ. ಹೆಚ್ಚು ಹಾಲು ಕರೆಯುವ ಉದ್ದೇಶದಿಂದ ಸೀಮೆಹಸು ಪಾಲನೆ ಮಾಡಲಾಗುತ್ತಿದೆ. ಹೀಗಾಗಿಶುದ್ಧ ಗೋತಳಿ ಸಂತತಿ ಕಡಿಮೆ ಆಗುತ್ತಿದೆ.ಇವುಗಳನ್ನು ಉಳಿಸಲು ಸರ್ಕಾರ ಸಹಕಾರನೀಡಿದ್ರೆ ಕ್ಯಾಟಲ್ ಕ್ಲಬ್ ಮಾಡುವಯೋಚನೆ ಇದೆ. ಈಗ ಗೋವುಗಳ ರಕ್ಷಣೆಗೆಸರ್ಕಾರ ಅಥವಾ ದಾನಿಗಳು ಮೇವು, ನೀರಿನ ವ್ಯವಸ್ಥೆ ಮಾಡಬೇಕಿದೆ.
– ಪವನ್‌ಕಲ್ಯಾಣ್ ಡಿ.ಜಿ., ಗೋವು ಸಾಕಣೆದಾರ