Advertisement

ರಸಗೊಬ್ಬರ ಕೊರತೆ; ಕಾಂಗ್ರೆಸ್ ಸುಳ್ಳಿನಿಂದ ಆತಂಕ ಸೃಷ್ಟಿ : ಭಗವಂತ್ ಖೂಬಾ

04:45 PM Oct 27, 2021 | Team Udayavani |

ಬೆಂಗಳೂರು : ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಸುಳ್ಳು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆಯ ರಾಜ್ಯ ಸಚಿವ ಭಗವಂತ್ ಖೂಬಾ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರ್ರೊಂದಿಗೆ ಮಾತಾನಾಡಿದ ಸಚಿವ ಭಗವಂತ್ ಖೂಬಾ, ”ಸಿದ್ದರಾಮಯ್ಯ ಅವರು ಪತ್ರಿಕೆಯಲ್ಲಿ ರಸಗೊಬ್ಬರ ಕೊರತೆ ಅಂತ ಸುದ್ದಿ ನೋಡಿ 2008 ರಲ್ಲಿ ಬಿಜೆಪಿ ಸರಕಾರ ಇದ್ದಾಗ ರಸಗೊಬ್ಬರದ ಕೊರತೆಯಿಂದ ರೈತರು ಪ್ರತಿಭಟನೆ ನಡೆಸಿದ್ದರು. ಆಗ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ರೈತರು ಸಾವಿಗೀಡಾಗಿದ್ದರು. ಈಗಲೂ ರಸಗೊಬ್ಬರ ಕೊರತೆಯಾಗಿರುವುದರಿಂದ ಆಗಿನ ಪ್ರಕರಣದ ಪ್ರಸ್ತಾಪ ಮಾಡಿದ್ದಾರೆ, ಅದು ಸರಿಯಲ್ಲ” ಎಂದರು.

”ಈ ವರ್ಷ ಶೇಕಡ 78.8.ರಷ್ಟು ಬಿತ್ತನೆ ಯಾಗಿದೆ. ಡಿಎಪಿ, ಯುರಿಯಾ, ಎನ್ ಎಪಿ ಎಲ್ಲಿಯೂ ಕೊರತೆಯಾಗದಂತೆ ಮಾಡಿದ್ದೇವೆ. ಕಳೆದ ಏಳು ವರ್ಷದಲ್ಲಿ ಎಲಿಯೂ ಗೊಬ್ಬರ ಕೊರತೆಯಾಗಿಲ್ಲ. ಅಕ್ಟೋಬರ್ ನಲ್ಲಿ 730 ಮೆಟ್ರಿಕ್ ಟನ್ ಉತ್ಪಾದನೆ ಆಗಿದೆ. ನರೇಂದ್ರ ಮೋದಿ ಸರಕಾರ ದೇಶದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ಇದರಿಂದ ಕೇಂದ್ರ ಸರಕಾರಕ್ಕೆ 35000 ಕೋಟೆ ಹೊರೆ ಇದೆ. ರೈತರಿಗೆ ಅನಾನುಕೂಲವಾಗದಂತೆ ಮಾಡಿದ್ದೇವೆ” ಎಂದರು.

”ಅಕ್ಬೋಬರ್ ನಲ್ಲಿ 33 ಸಾವಿರ ಮೆಟ್ರಿಕ್ ಟನ್.ಡಿಎಪಿ ಬೇಡಿಕೆ ಇದೆ.ನವೆಂಬರ್ ನಲ್ಲಿ 27 ಸಾವಿರ ಮೆಟ್ರಿಕ್ ಟನ್ ಬೇಡಿಕೆ ಇದೆ. ರಾಜ್ಯದಲ್ಲಿ 36 ಸಾವಿರ ಮೆಟ್ರಿಕ್ ಟನ್ ಡಿಎಪಿ ಲಭ್ಯವಿದೆ. ನವೆಂಬರ್ ಗೆ ಪೂರ್ಣವಾಗುವಷ್ಟು ಲಭ್ಯವಿದೆ” ಎಂದು ತಿಳಿಸಿದರು.

”ಈ ಸೀಸನ್ ನಲ್ಲಿ 2 ಲಕ್ಷ ಮೆಟ್ರಿಕ್ ಟನ್ ಡಿಎಪಿ ಬೇಕಾಗಲಿದೆ. ಅದನ್ನು ಉತ್ಪಾದನೆ ಮಾಡಲಾಗುವುದು. ಎರಡು ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಕ್ರಮ ಕೈಗೊಂಡೊದ್ದೇವೆ” ಎಂದು ತಿಳಿಸಿದರು.

Advertisement

”ಯುರಿಯಾ ರಾಜ್ಯದಲ್ಲಿ 22 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಎಂಒಪಿ 29. ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಮೈಸೂರು ಭಾಗದಲ್ಲಿ ಸ್ವಲ್ಪ ಕೊರತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಕೇಂದ್ರದಿಂದ 3 ಸಾವಿರ ಮೆಟ್ರಿಕ್ ಟನ್ ತರಿಸಲು ಸೂಚನೆ ನೀಡಿದ್ದೇನೆ. ಕಳೆದ ಎರಡು ವರ್ಷದಲ್ಲಿ ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸ್ವಲ್ಪ ಭಾಗದಲ್ಲಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಹೆಚ್ಚಾಗುತ್ತಿದೆ. ರಾಜ್ಯದ ರೈತರು ಅದನ್ನು ಅಳವಡಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ” ಎಂದರು.

”ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರದಿಂದ ಉತ್ಪಾದನೆ ಹೆಚ್ಚಾಗುತ್ತಿದೆ ಈ.ಕಾರಣಕ್ಕೆ ಸರಕಾರದಿಂದ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಖರೀದಿಗೆ ಸೂಚಿಸಲಾಗುತ್ತಿದೆ. ಇದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ರೈತರು ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ” ಎಂದರು.

”2008 ರಲ್ಲಿ ಕೇಂದ್ರದಲ್ಲಿ ಬೇಜವಾಬ್ದಾರಿ ಸರಕಾರ ಅಧಿಕಾರದಲ್ಲಿತ್ತು. ಇದರಿಂದ ರಾಜ್ಯಗಳಲ್ಲಿ ಬೀಜ ಗೊಬ್ಬರದ ಸಮಸ್ಯೆಯಾಗಿತ್ತು. ಆಗ ಕೇಂದ್ರ ಸರಕಾರ ಯಾಕೆ ಗೊಬ್ಬರ ಸರಬರಾಜು ಮಾಡಿರಲಿಲ್ಲ ಎಂದು ಹೇಳಬೇಕು” ಎಂದರು.

”ಸಿದ್ದರಾಮಯ್ಯ ಅವರು ರೈತರಿಗೆ ಭಯ ಹುಟ್ಟಿಸುವ ಕೆಲಸ ಮಾಡಿಬೇಡಿ, ಕೊರತೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ರೈತರು ಮುಂದಿನ ನಾಲ್ಕು ತಿಂಗಳಿಗೆ ಬೇಕಾದಷ್ಟು ಗೊಬ್ಬರ ಸಂಗ್ರಹಕ್ಕೆ ಮುಂದಾಗುತ್ತಾರೆ. ಇದರಿಂದ ದಲ್ಲಾಳಿಗಳ ಹಾವಳಿ ಹೆಚ್ಚಾಗಲಿದೆ” ಎಂದು ಆತಂಕ ವ್ಯಕ್ತ ಪಡಿಸಿದರು.

”ನಾನು ಇಲಾಖೆಯ ಜವಾಬ್ದಾರಿ ಸಚಿವನಾಗಿ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲು ಬಂದಿದ್ದೇನೆ. ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಈ ವರ್ಷ ಮಳೆ.ಹೆಚ್ಚಳವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಚೀನಾ ರಸಗೊಬ್ಬರ ರಫ್ತು ಸ್ಥಗಿತಗೊಳಿಸಿದೆ. ಅಮೆರಿಕಾದಲ್ಲಿ ಸೈಕ್ಲೋನ್ ಬಂದಿರುವುದರಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಆತ್ಮನಿರ್ಭರ ಭಾರತ ಅಡಿಯಲ್ಲಿ ನ್ಯಾನೊ ಯುರಿಯಾ ಉತ್ಪಾದನೆ ಹೆಚ್ಚಾಗಿದೆ. ಮುಂದಿನ ವರ್ಷ ನ್ಯಾನೊ ಡಿಎಪಿ ಉತ್ಪಾದನೆ ಮಾಡಲಾಗುವುದು” ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next