Advertisement

ಆನ್‌ಲೈನ್‌ ಶಿಕ್ಷಣ: ಶೇ. 16ರಷ್ಟು ವಿದ್ಯಾರ್ಥಿಗಳಿಗೆ ಸೌಲಭ್ಯವಿಲ್ಲ

10:52 AM Jun 21, 2020 | Suhan S |

ಮುಂಬಯಿ, ಜೂ. 20: ದೂರದರ್ಶನ ಮತ್ತು ರೇಡಿಯೊದಂತಹ ಮಾಧ್ಯಮಗಳ ಸಹಾಯದಿಂದ ಡಿಜಿಟಲ್‌ ಕಲಿಕೆಯೊಂದಿಗೆ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಶಿಕ್ಷಣ ಇಲಾಖೆಯು ಹೊಂದಿದ್ದು, ಆದರೆ ರಾಜ್ಯದಲ್ಲಿ ಸುಮಾರು ಶೇ. 16ರಷ್ಟು ವಿದ್ಯಾರ್ಥಿಗಳು ಯಾವುದೇ ಸಂವಹನ ಮಾಧ್ಯಮದ ಸೌಲಭ್ಯ ಹೊಂದಿಲ್ಲ ಎಂದು ಸರಕಾರದ ವರದಿ ತಿಳಿಸಿದೆ.

Advertisement

ವಾಸ್ತವವಾಗಿ ಮುಂಬಯಿ ಮತ್ತು ಪುಣೆಯಂತಹ ನಗರಗಳಲ್ಲಿಯೂ ಸಹ ಶೇ. 5ರಿಂದ ಶೇ. 10ರಷ್ಟು ವಿದ್ಯಾರ್ಥಿಗಳಿಗೆ ದೂರದರ್ಶನ ಮತ್ತು ರೇಡಿಯೋ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ. ರಾಜ್ಯ ಸರಕಾರದ ಶಿಕ್ಷಣ ಇಲಾಖೆಯು ಒಟ್ಟುಗೂಡಿಸಿದ ದತ್ತಾಂಶವು ಇದನ್ನು ಬಹಿರಂಗಪಡಿಸಿದ್ದು, ಇದರಿಂದ ಡಿಜಿಟಲ್‌ ಕಲಿಕೆಯನ್ನು ಕಾರ್ಯಗತಗೊಳಿಸುವುದು ಕಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅಂಕಿಅಂಶಗಳ ಪ್ರಕಾರ, ಮುಂಬಯಿಯಲ್ಲಿ ಒಟ್ಟು ಶೇ. 70.33ರಷ್ಟು ವಿದ್ಯಾರ್ಥಿಗಳು ವಾಟ್ಸಾಪ್‌ ಸೌಲಭ್ಯವನ್ನು ಹೊಂದಿದ್ದರೆ, ಶೇ. 17.16ರಷ್ಟು ವಿದ್ಯಾರ್ಥಿಗಳು ಎಸ್‌ ಎಂಎಸ್‌ ಮೂಲಕ ಸಂವಹನ ನಡೆಸುತ್ತಾರೆ. ರಾಜ್ಯದಲ್ಲಿ ಶೇ. 79.74ರಷ್ಟು ವಿದ್ಯಾರ್ಥಿಗಳು ದೂರದರ್ಶನ ಸೌಲಭ್ಯ ಹೊಂದಿದ್ದಾರೆ. ಶೇ. 12.51ರಷ್ಟು ಮಂದಿ ಮೊಬೈಲ್‌ ಫೋನ್‌ ಹೊಂದಿಲ್ಲ, ಶೇ. 3.58 ವಿದ್ಯಾರ್ಥಿಗಳು ಯಾವುದೇ ಸೌಲಭ್ಯವನ್ನು ಹೊಂದಿಲ್ಲ ಎಂದು ದತ್ತಾಂಶ ಹೇಳುತ್ತದೆ. ಮಹಾರಾಷ್ಟ್ರಾದ್ಯಂತ ಒಟ್ಟು ಶೇ. 15.60ರಷ್ಟು ವಿದ್ಯಾರ್ಥಿಗಳು ಯಾವುದೇ ಸೌಲಭ್ಯವನ್ನು ಹೊಂದಿಲ್ಲ ಎನ್ನಲಾಗುತ್ತಿದೆ. ಆನ್‌ಲೈನ್‌ ಶಿಕ್ಷಣದ ರೀತಿಯಲ್ಲಿ ಖಾಸಗಿ ಟೆಲಿವಿಷನ್‌ ಚಾನೆಲ್‌ಗ‌ಳನ್ನು ಸಹ ಶಿಕ್ಷಣ ನೀಡಲು ಬಳಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಚಿವ ಉದಯ್‌ ಸಮಂತ್‌ ಹೇಳಿದ್ದಾರೆ.

ಅಸಾಂಪ್ರದಾಯಿಕ ಮಾರ್ಗಗಳ ಮೂಲಕ ಶಿಕ್ಷಣವನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರಕಾರವು ಎಷ್ಟು ಕಷ್ಟಕರವಾಗಿದೆ ಎಂದು ಡೇಟಾ ಬಹಿರಂಗಪಡಿಸಿದರೆ, ಕೆಂಪು ವಲಯದ ಶಾಲೆಗಳಿಗೆ ಎಸ್‌ಒಪಿ ಘೋಷಿಸುವಲ್ಲಿನ ವಿಳಂಬವು ಹಲವಾರು ನಗರಗಳಲ್ಲಿ ದೊಡ್ಡ ಗೊಂದಲವನ್ನು ಉಂಟುಮಾಡುತ್ತಿದೆ.

ಪೋಷಕರಲ್ಲಿ ಗೊಂದಲ :  ಈ ವಾರದ ಆರಂಭದಲ್ಲಿ, ಹೊಸ ಶೈಕ್ಷಣಿಕ ವರ್ಷಗಳಲ್ಲಿ ಶಾಲೆಗಳನ್ನು ಪುನಃ ತೆರೆಯಲು ರಾಜ್ಯ ಸರಕಾರ ಎಸ್‌ಒಪಿಗಳನ್ನು ಘೋಷಿಸಿತು. ವಿಶೇಷವಾಗಿ ಕಳೆದ ಒಂದು ತಿಂಗಳಲ್ಲಿ ಯಾವುದೇ ಕೋವಿಡ್‌ -19 ಪ್ರಕರಣಗಳು ವರದಿಯಾಗದ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದ್ದು, ಮುಂಬಯಿಯಲ್ಲಿ ಕೆಂಪು ವಲಯಗಳಿಗೆ ಪ್ರತ್ಯೇಕ ಎಸ್‌ಒಪಿ ಇರುತ್ತದೆ ಎಂದು ಹೇಳಲಾಗಿದೆ. ಸುತ್ತೋಲೆ ಬಿಡುಗಡೆ ಮಾಡದಿರುವುದರಿಂದ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವ ಬಗ್ಗೆ ಆತಂಕದಲ್ಲಿರುವ ಪೋಷಕರು ಸೇರಿದಂತೆ ಶಾಲೆಗಳು ಮತ್ತು ಶಿಕ್ಷಕರಲ್ಲಿ ದೊಡ್ಡ ಗೊಂದಲ ಉಂಟಾದಂತಾಗಿದೆ. ಈ ಮಧ್ಯೆ ಶಿಕ್ಷಣ ಆಯುಕ್ತ ವಿಶಾಲ್‌ ಸೋಲಂಕಿ, ಕೆಂಪು ವಲಯಗಳಿಗೆ ಪ್ರತ್ಯೇಕ ಎಸ್‌ಒಪಿಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next