Advertisement
ಕ್ರೀಡಾಪಟುಗಳು ಸೇರಿದಂತೆ ಬೆಳಗ್ಗೆ ಮತ್ತು ಸಂಜೆವಾಯು ವಿಹಾರಕ್ಕೆಂದು ಆಗಮಿಸುವ ನೂರಾರು ಜನರಿಗೆ ತೊಡಕ್ಕುಂಟಾಗಿದ್ದು ಇದುವರೆವಿಗೂ ಸಂಬಂಧಿಸಿದ ಅಧಿಕಾರಿಗಳು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿಲ್ಲ.
Related Articles
Advertisement
ನಿರ್ಲಕ್ಷ್ಯ:ಇತ್ತೀಚಿನ ದಿನಗಳಲ್ಲಿ ಬೃಹತ್ ಪ್ರಮಾಣದ ಆರೋಗ್ಯ ಶಿಬಿರ, ಕ್ರೀಡಾಕೂಟ,ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಪಕ್ಷಗಳವಿವಿಧ ಕಾರ್ಯಕ್ರಮಗಳಿಗೆ ಸರ್ಕಾರಿ ಕ್ರೀಡಾಂಗಣ ಬಳಕೆಯಾಗುತ್ತಿದೆ. ಆದರೆ, ಮೂಲ ಉದ್ದೇಶವೇ ಹೊರತಾಗಿ ಕ್ರೀಡಾ ಚಟುವಟಿಕೆಗಳಿಂದದೂರವೇ ಉಳಿಯುವ ಸ್ಥಿತಿಯಿದೆ. ಕ್ರೀಡಾಂಗಣದ ಉತ್ತರ ಭಾಗದಿಂದ ಪೂರ್ವೋತ್ತರವಾಗಿ ಅಳವಡಿಸಿರುವ ಕಲ್ಲು ಹಾಸಿನ ಆಸನಗಳಅಳವಡಿಕೆ ಕಿತ್ತು ಮೇಲೆದ್ದಿವೆ. ವಿಷ ಜಂತುಗಳು,ಗಿಡ-ಗಂಟಿಗಳು ಬೆಳೆಯುತ್ತಿವೆ. ಇನ್ನು ಮೂಲ ಕಲ್ಲು ಹಾಸು ಕಿತ್ತು ಬಂದಿದ್ದರೂ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಯಾವೊಬ್ಬರೂ ಗಮನಹರಿಸಿಲ್ಲ.
ಸ್ಥಳೀಯ ಕ್ರೀಡಾಪಟುಗಳ ಹಿತ ದೃಷ್ಟಿಯಿಂದಮಂಡ್ಯ ಜಿಪಂ ವತಿಯಿಂದ ನಿರ್ಮಾಣಗೊಂಡನೀರಿನ (ತೊಂಬೆ) ಸ್ಥಾವರಕ್ಕೆ ಈವರೆಗೂ ನೀರುಪೂರೈಕೆಗೆ ಪೈಪ್‌ಲೈನ್ ಅಳವಡಿಸಿಲ್ಲ. ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರು ಕ್ರೀಡಾಂಗಣದ ಪ್ರಸ್ತುತ ಸ್ಥಿತಿ ಹೇಗಿದೆ? :
ಒಳಾಂಗಣ ಕ್ರೀಡಾಂಗಣದ ಅವ್ಯವಸ್ಥೆ ಹೇಳ ತೀರದಾಗಿದ್ದು ಮಳೆ, ಗಾಳಿಗೆ ಶಿಥಿಲವಾಗಿರುವ ಸೂರು ಮಳೆ ನೀರು ಸೋರಿ ಕಿತ್ತು ನಿಂತಿರುವ ಮೇಲ್ಚಾವಣಿ ಮತ್ತು ವುಡ್ ಕೋರ್ಟ್ ಇಲ್ಲಿನ ಅವ್ಯವಸ್ಥೆಗಳಿಗೆ ಉದಾಹರಣೆ. ಕ್ರೀಡಾಂಗಣ ಹಲವು ಅದ್ವಾನಗಳಿಂದ ಕೂಡಿದ್ದು ಹಳ್ಳ ಕೊಳ್ಳಗಳಿಂದ ಆವೃತವಾಗಿದ್ದರೂ ದುರಸ್ತಿಗೆ ಮುಂದಾಗದಿರುವುದು ಶೋಚನೀಯ. ಕೆಲ ದೇಹದಾರ್ಢ್ಯ ಪರಿಕರಗಳು ನಿರ್ವಹಣೆಕೊರತೆಯಿಂದ ತುಕ್ಕು ಹಿಡಿದಿವೆ. ಬದಲಿ ಯಂತ್ರಗಳ ಅಳವಡಿಕೆಗೆ ಕ್ರಮವಹಿಸಿಲ್ಲ. ಈ ಕುರಿತು ಜಿಪಂಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವರ್ಗದ ಗಮನ ಸೆಳೆದರೂ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಕ್ರೀಡಾಸಕ್ತರಲ್ಲಿ ಬೇಸರ ತರಿಸಿದೆ.
ಮಂಡ್ಯ ಜಿಲ್ಲೆಯವರೇ ಆದ ಕೆ.ಸಿ.ನಾರಾಯಣಗೌಡರು ಯುವ ಜನ ಸೇವಾ ಮತ್ತು ಕ್ರೀಡಾಇಲಾಖೆಯ ಸಂಪುಟ ದರ್ಜೆಸಚಿವರಾಗಿದ್ದಾರೆ. ಮಂಡ್ಯ ಸೇರಿದಂತೆತಾಲೂಕಿನ ವಿವಿಧ ಕ್ರೀಡಾಂಗಣಗಳಉನ್ನತೀಕರಣಕ್ಕೆ ಕ್ರಮವಹಿಸಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕಿದೆ. -ಮ.ನ.ಪ್ರಸನ್ನಕುಮಾರ್, ಮದ್ದೂರು ಪುರಸಭೆ ಸದಸ್ಯರು
ಮದ್ದೂರು ಸರ್ಕಾರಿ ಕ್ರೀಡಾಂಗಣ ಅಭಿವೃದ್ಧಿ ಸಂಬಂಧ ಈಗಾಗಲೇ ಸಂಬಂಧಿಸಿದ ಮೇಲಧಿಕಾರಿಗಳೊಟ್ಟಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಮುಂದಿನ ಅನುದಾನದಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇನ್ನು ಈಗಾಗಲೇನೀತಿ ನಿಬಂಧನೆಗಳ ಕುರಿತಾಗಿ ನಾಮಫಲಕ ಅಳವಡಿಸಿ ಮುಂಜಾಗ್ರತೆ ವಹಿಸಲಾಗಿದೆ. – ಜಿ.ಓಂಪ್ರಕಾಶ್,ಸಹಾಯಕ ನಿರ್ದೇಶಕ, ಯುವಜನ ಸೇವೆಮತ್ತು ಕ್ರೀಡಾ ಇಲಾಖೆ, ಮಂಡ್ಯ
– ಎಸ್.ಪುಟ್ಟರಾಜು