Advertisement
ಬಿಬಿಎಂಪಿ ವ್ಯಾಪ್ತಿಯ 243 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಅನುಮೋದನೆ ನೀಡಲಾಗಿತ್ತು. ಅದರಲ್ಲಿ 227 ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿವೆ. ಬೊಮ್ಮನಹಳ್ಳಿ 27, ದಾಸರಹಳ್ಳಿ 10, ಪೂರ್ವ 46, ಮಹದೇವಪುರ 22, ಆರ್‌ಆರ್ ನಗರ 18, ದಕ್ಷಿಣ 47, ಪಶ್ಚಿಮ 46, ಯಲಂಹಕ ವಲಯದಲ್ಲಿ ಒಟ್ಟು 11 ನಮ್ಮ ಕ್ಲಿನಿಕ್ ಕಾರ್ಯಾಚರಣೆಯಲ್ಲಿದೆ.
Related Articles
Advertisement
ಕ್ಲಿನಿಕ್ ಹುಡುಕುವುದೇ ದೊಡ್ಡ ತಲೆನೋವು: ಬಿಬಿ ಎಂಪಿಯ ವಾರ್ಡ್ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್‌ಗಳ ವಿಳಾಸ ಹಾಗೂ ಸ್ಥಳದ ನಕ್ಷೆಯನ್ನು ಬಿಬಿಎಂಪಿ ತನ್ನ ಅಧಿಕೃತ ಅಂತರ್ ಜಾಲತಾಣದಲ್ಲಿ ಪ್ರಕಟಿಸಿದೆ. ಇದರಲ್ಲಿ ನೀಡಲಾದ ನಕ್ಷೆಗೂ, ಮೂಲ ಸ್ಥಳಕ್ಕೂ 1 ಕಿ.ಮೀ. ಅಂತರ ತೋರಿಸುತ್ತದೆ. ಕೆಲವಡೆ ಕ್ಲಿನಿಕ್ ಬಲಗಡೆಯಲ್ಲಿದ್ದರೂ, ನಕ್ಷೆ ಮಾತ್ರ ಎಡಗಡೆ ತೋರಿಸುತ್ತಿದೆ. ಕೆಲ ಕ್ಲಿನಿಕ್‌ಗಳನ್ನು ವಸತಿ ಕಟ್ಟಡ ಮನೆಯಲ್ಲಿ ನಿರ್ಮಿಸಿರುವುದರಿಂದ, ಹೊಸದಾಗಿ ಏರಿಯಾಗೆ ಬಂದವರಿಗೆ ಈ ಕ್ಲಿನಿಕ್‌ಗಳನ್ನು ಹುಡುಕಾಡುವುದೇ ದೊಡ್ಡ ಕೆಲಸವಾಗಲಿದೆ.
ಪ್ರಯೋಜನವೇನು ಬಂತು?: ಸೋಮವಾರದಿಂದ ಶನಿವಾರದವರೆಗೆ ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಗೆ ತೆರೆದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಬಂದ್ ಮಾಡಲಾಗುತ್ತಿತ್ತು. ಈ ನಡುವೆ ಆರೋಗ್ಯ ಇಲಾಖೆ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಯ್ದ ನಮ್ಮ ಕ್ಲಿನಿಕ್‌ಗಳಲ್ಲಿ ಕಾರ್ಯಾಚರಿಸುವ ವೈದ್ಯರ ಅವಧಿಯನ್ನು ಮಧ್ಯಾಹ್ನ 12ರಿಂದ ರಾತ್ರಿ 9ವರೆಗೆ ವಿಸ್ತರಿಸಲಾಗಿತ್ತು. ಆದರೂ, ನಮ್ಮ ಕ್ಲಿನಿಕ್ ಯೋಜನೆಯ ನಿಜವಾದ ಗುರಿ ತಲುಪುವಲ್ಲಿ ವಿಫಲವಾಗಿದೆ.
ನಿಯೋಜನೆಗೆ ಒತ್ತಾಯ: ಒಂದು ಕ್ಲಿನಿಕ್‌ಗೆ ಒಬ್ಬರೇ ವೈದ್ಯಾಧಿಕಾರಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಅವರು ರಜೆಗೆ ಹೋದಾಗ ಕೊರತೆ ಕಾಡುತ್ತದೆ. ಕೆಲವೊಮ್ಮೆ ಸುದೀರ್ಘ ರಜೆಗೆ ಹೋದಾಗ ಇನ್ನೊಬ್ಬ ವೈದ್ಯರನ್ನು ಹೆಚ್ಚುವರಿ ಜವಾಬ್ದಾರಿ ನೀಡಿ ನಿಯೋಜಿ ಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಆರ್ಥಿಕವಾಗಿ ಹಿಂದುಳಿದ ಜನಸಾಮಾನ್ಯರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸೋದು ಸರಿಯಲ್ಲ. ಸೇವೆ ನೀಡಲು ಸಾಧ್ಯವಾಗದಿದ್ದರೆ ನಮ್ಮ ಕ್ಲಿನಿಕ್‌ಗಳನ್ನು ಮುಚ್ಚಿ. ವೈದ್ಯರು ರಜೆಯಲ್ಲಿರುವ ಸಂದರ್ಭದಲ್ಲಿ ದಾದಿಯರು ಡ್ನೂಟಿ ಡಾಕ್ಟರ್ ಆಗುತ್ತಾರೆ. ಅವರ ಚಿಕಿತ್ಸೆಯಿಂದ ಏನಾದರೂ ಹೆಚ್ಚುಕಮ್ಮಿಯಾದರೆ ಹೊಣೆಯಾರು.-ಶೈಲಾ ಶ್ರೀನಿವಾಸ, ಸಾರ್ವಜನಿಕರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ ನಮ್ಮ ಕ್ಲಿನಿಕ್‌ಗಳಲ್ಲಿ ತೆರವಾದ ಸ್ಥಳಕ್ಕೆ ವೈದ್ಯಾಧಿಕಾರಿ ನೇಮಕ ಮಾಡುವಂತೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರದಲ್ಲಿ ವೈದ್ಯಾಧಿಕಾರಿಗಳ ನೇಮಕವಾಗಲಿದೆ. -ಡಾ.ಮದನಿ, ಮುಖ್ಯಾಧಿಕಾರಿ, ಸಾರ್ವಜನಿಕ ಆರೋಗ್ಯವಿಭಾಗ ಬಿಬಿಎಂಪಿ.
– ತೃಪ್ತಿ ಕುಮ್ರಗೋಡು