Advertisement

ವಿದ್ಯುತ್ ಇಲ್ಲದೇ ಪರದಾಡುತ್ತಿರುವ ತೋಟದ ವಸತಿ ಪ್ರದೇಶದ 45 ಕ್ಕೂ ಅಧಿಕ ಕುಟುಂಬಗಳು

07:23 PM Mar 23, 2022 | Team Udayavani |

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕಿನ ಮದನಮಟ್ಟಿ ಮತ್ತು ಹಳಿಂಗಳಿ ಗ್ರಾಮಗಳ ವಸತಿ(ತೋಟ) ಪ್ರದೇಶದಲ್ಲಿ  45 ಕ್ಕೂ ಅಧಿಕ ಕುಟುಂಬಗಳ 400 ಕ್ಕೂ ಅಧಿಕ ಜನರು ಕುಟುಂಬಗಳಿಗೆ ಕಳೆದ ಒಂದು ತಿಂಗಳಿಂದ ರಾತ್ರಿ ಹೊತ್ತು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲೆ ಬದುಕು ಸಾಗಿಸುವಂತಾಗಿದೆ.

Advertisement

ಸರ್ಕಾರ ರೈತರಿಗೆ ನೀಡುವ ಉಚಿತ ವಿದ್ಯುತ್ ಸಮಯ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವಿದ್ಯುತ್ ಸಂಪರ್ಕ ವಿರುತ್ತದೆ ಆದರೆ ಸಂಜೆ 6 ರಿಂದ ಬೆಳಿಗ್ಗೆ 9 ರವರೆಗೂ ಈ ಎಲ್ಲಾ ಕುಟುಂಬಗಳು ರಾತ್ರಿ ಕತ್ತಲಲ್ಲೆ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗರು.

ಸಂಜೆವರೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ರಾತ್ರಿ ಮನೆಗೆ ಬಂದು ಅಡಿಗೆ ಮಾಡಬೇಕು, ಮಾಡಿದ ಅಡಿಗೆ ತಿನ್ನಲು ಚಿಕ್ಕ ದೀಪದಲ್ಲಿಯೇ ಊಟಮಾಡಬೇಕು, ತೋಟದ ವಸತಿಗಳು ಅದರಲ್ಲೂ ಕೃಷ್ಣಾ ನದಿ ತೀರವಾಗಿರುವುದರಿಂದ ಹುಳು ಹಪ್ಪಟಿಗಳ ಕಾಟ ಕೂಡಾ ಇರುತ್ತದೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ನಮಗೆ ತುಂಬಾ ತೊಂದರೆಯಾಗಿದೆ ಎನ್ನುತ್ತಾರೆ ಹಳಿಂಗಳಿ ತೋಟದ ಏರಿಯಾದಲ್ಲಿ ವಾಸಿಸುವ ಸುಮಿತ್ರಾ ಹಣಮನ್ನವರ.

ಈ ಕ್ಷೇತ್ರದ ಜನಪ್ರತಿನಿಧಿಗಳು, ಹೆಸ್ಕಾಂ ಅಧಿಕಾರಿಗಳು ಕೂಡಲೆ ಇವರ ತೊಂದರೆಗೆ ಸ್ಪಂದಿಸಿ ಅನುವು ಮಾಡಿಕೋಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.

Advertisement

ಈಗ ಡಿಗ್ರಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ನಮಗೆ ರಾತ್ರಿ ಓದಲು ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮೇಣದ ಬತ್ತಿಯೇ ನಮಗೆ ಆಸರೆಯಾಗಿದೆ. ಅನೇಕ ಬಾರಿ ಅಧಿಕಾರಿಗಳಿಗೆ ನಮ್ಮ ತೊಂದರೆ ತಿಳಿಸಿದರು ಯಾರೂ ಕ್ಯಾರೆ ಎನ್ನುತ್ತಿಲ್ಲ. ಇಷ್ಟೊಂದು ತಂತ್ರಜ್ಞಾನ ಮುಂದುವರೆದ ದೇಶವಾಗಿದೆ. ಅಧಿಕಾರಿಗಳು ರಾತ್ರಿ ಹೊತ್ತು ಕೇವಲ ದೀಪ ಬೇಳಗಲು ಮಾತ್ರ ಸಿಂಗಲ್ ಪೇಸ್ ಸಂಪರ್ಕ ನೀಡಿದರೆ ನಮಗೆ ಒಳ್ಳೆಯದಾಗುತ್ತದೆ.ಅನೀಲ ರಾಘನನ್ನವರು. ಬಿಎ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ  ಮದನಮಟ್ಟಿ ತೋಟದ ವಸ್ತಿ ಏರಿಯಾ.

Advertisement

Udayavani is now on Telegram. Click here to join our channel and stay updated with the latest news.

Next