Advertisement
ನಗರದ ನೀರಿನ ಸ್ಥಿತಿಗತಿ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀಮಳೆಯಾಗುತ್ತದೆ. ನಗರಸಭೆಯಲ್ಲಿ ಒಟ್ಟು 31 ವಾರ್ಡ್ಗಳಿದ್ದು, ಹಾಲಿ ಅಂದಾಜು 1.05 ಲಕ್ಷ ಜನಸಂಖ್ಯೆಗೆತಲಾ 135 ಲೀಟರ್ ಪ್ರಮಾಣದಂತೆ ದೊಡ್ಡಬಳ್ಳಾಪುರನಗರಕ್ಕೆ 14.17 ಎಂಎಲ್‌ಡಿ (ಒಂದು ದಿನಕ್ಕೆ ದಶಲಕ್ಷಲೀ.) ಅವಶ್ಯಕತೆ ಇದೆ. ಪ್ರಸ್ತುತ ತಲಾ 68 ಎಲ್‌ಪಿಸಿಡಿಪ್ರಮಾಣದ ರೀತಿ 7.17 ಎಂಎಲ್‌ಡಿ(ಕೊಳವೆಬಾವಿಗಳಿಂದ 5.17, ಜಕ್ಕಲಮಡಗು ಜಲಾಶಯದಿಂದ 2.00 ಎಂಎಲ್‌ಡಿ) ನೀರುಸರಬರಾಜು ಮಾಡಲಾಗುತ್ತಿದೆ. ಇನ್ನೂ 7 ಎಂಎಲ್‌ಡಿನೀರು ಕೊರತೆ ಇದೆ. ನಗರದಲ್ಲಿ ಸರಾಸರಿ 5 ರಿಂದ 6 ದಿನಕೊಮ್ಮೆ ಕುಡಿವ ನೀರು ಸರಬರಾಜುಮಾಡಲಾಗುತ್ತಿದೆ. ಕಳೆದ ಸಾಲಿಗೆ ಹೋಲಿಸಿದರೆ ಈಬಾರಿ ಕೊಳವೆಬಾವಿಗಳಿಂದ ನೀರು ಸರಬರಾಜು 2ಎಂಎಲ್‌ಡಿ ಕಡಿಮೆ ಆಗಿದೆ.
Related Articles
Advertisement
ಎತ್ತಿನಹೊಳೆ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯದ ವಿವಾದ ಇನ್ನೂ ಬಗೆಹರಿದಿಲ್ಲ. ಈ ನ ಡುವೆ ನೆಲ ಮಂಗಲ, ದೊಡ್ಡ ಬಳ್ಳಾ ಪುರ ತಾಲೂಕುಗಳಿಗೆ ವೃಷ ಭಾವತಿ, ನಾಯಂಡರಹಳ್ಳಿಯಿಂದ ಶುದ್ಧೀಕರಿಸಿದ ನೀರು ಹರಿಸುವ ಯೋಜನೆ ರೂಪಿಸಲಾಗಿದೆ. ಈ ಯೋ ಜನೆ ಎಷ್ಟರ ಮಟ್ಟಿಗೆ ಜಾ ರಿಯಾಗಬೇಕಿದೆ ಎನ್ನುವುದನ್ನು ನೋಡ ಬೇಕಿದೆ.
ಕೆರೆ-ಕುಂಟೆಗಳಲ್ಲಿ ನೀರಿಲ್ಲ :
ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ತಾಲೂಕಿನ ಒಂದೆರಡು ಕೆರೆಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ
ಕೆರೆ,ಕುಂಟೆಗಳಿಗೂ ನೀರು ಬಂದಿಲ್ಲ. ನಗರದ ನಾಗರಕೆರೆಯಲ್ಲಿ ಮಲಿನ ನೀರು ಶೇಖರವಾಗಿದೆ. ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ಹಲವಾರು ಘಟಕಗಳು ಮುಚ್ಚಿವೆ. ಈ ಬಾರಿಯ ಮಳೆಗಾಲದಲ್ಲಿ ಬೆಟ್ಟದ ಸಾಲಿನಲ್ಲಿಬರುವ ಇದರಿಂದಾಗಿ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಪ್ರತಿ ದಿನವೂ ಕೊಳವೆ ಬಾವಿಗಳು ಬತ್ತಿ ಹೋಗುತ್ತಲೇ ಇವೆ.
112 ಗ್ರಾಮಗಳಲ್ಲಿ ನೀರಿನ ಸಮಸ್ಯೆ :
ದೊಡ್ಡಬಳ್ಳಾಪುರ ತಾಲೂಕಿನ 112 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಿಲ್ಲೆಯ 4 ತಾಲೂಕಿನ ಶಾಸಕರ ಟಾಸ್ಕ್ಪೋರ್ಸ್ ಸಭೆ ನಡೆಸಿಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.30.75 ಕೋಟಿ ರೂ.ನ ಕ್ರಿಯ ಯೋಜನೆ ರೂಪಿಸಲಾಗಿದೆ. ತಾಲೂಕಿಗೆ 6 ಕೋಟಿ ರೂ. ಬೇಕಿದೆ.ಆದರೆ, ಕ್ರಿಯಾ ಯೋಜನೆಗೆ 2 ತಿಂಗಳು ಕಳೆದಿದ್ದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ತಾಲೂಕಿಗೆಬಿಡುಗಡೆ ಆಗಿರುವ ಹಣ 15 ಹಳ್ಳಿಗಳಿಗೆ ಮಾತ್ರಸಾಲುತ್ತದೆ. ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಶಾಸಕ ಟಿ.ವೆಂಕಟರಮಣಯ್ಯ.
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡುತ್ತಿಲ್ಲ,ನೀರಿನ ಸಮಸ್ಯೆ ಬರಬಹುದಂತಹ ವಾರ್ಡ್‌ಗಳ ಪ್ರದೇಶಗಳಲ್ಲಿ 2020-21ನೇ ಸಾಲಿನನಗರಸಭಾ ನಿ ಯಡಿಯಲ್ಲಿ 20 ಕೊಳವೆಬಾವಿ ಹೊಸದಾಗಿ ಕೊರೆಯಲು ಕ್ರಮಕೈಗೊಳ್ಳಲಾಗುತ್ತಿದೆ, ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿ ಕಾರಿಗಳಆದೇಶದಂತೆ ಅವಶ್ಯಕತೆ ಇದ್ದಲ್ಲಿ ನಗರಸಭೆಯ ವಶಕ್ಕೆ ಪಡೆದು ನೀರು ಸರಬರಾಜು ಮಾಡಲುಕ್ರಮ ಕೈಗೊಳ್ಳಲಾಗುವುದು. -ಸಿ.ಎಂ.ಚಂದ್ರಶೇಖರ್, ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ
– ಡಿ.ಶ್ರೀಕಾಂತ್