Advertisement
ಹಾಸನ ಜಿಲ್ಲೆಯ ಕಲ್ಪತರು ತಾಲೂಕು ಎಂಬಹೆಗ್ಗಳಿಕೆ ಹೊಂದಿದ್ದು ತಾಲೂಕಿನ 41 ಗ್ರಾಪಂಗಳ ಪೈಕಿ12 ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಕುಡಿವನೀರಿನ ಸಮಸ್ಯೆ ಉಲ್ಬಣವಾಗಿದ್ದು ಮಹಿಳೆಯರುತಮ್ಮ ಮನೆಗೆ ನೀರು ತರಲು ನಿತ್ಯವೂ ಕಿ.ಮೀ. ವರೆಗೆ ಸಂಚಾರ ಮಾಡುವಂತಾಗಿದೆ.
Related Articles
Advertisement
ನುಗ್ಗೇಹಳ್ಳಿ, ಹಿರೀಸಾವೆ, ಜುಟ್ಟನಹಳ್ಳಿ ಯೋಜನೆ:
ಶ್ರವಣಬೆಳಗೊಳ ವಿಧಾನ ಸಭಾ ವ್ಯಾಪ್ತಿಯಲ್ಲಿ ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಪೂರ್ಣ ಗೊಂಡಿದ್ದು ಪ್ರಾಯೋಗಿಕವಾಗಿ ನೀರು ಕೆರೆಗಳಿಗೆ ನೀರು ತುಂಬಿಸಿರು ವುದರಿಂದ ನುಗ್ಗೇಹಳ್ಳಿ, ಜಂಬೂರು, ಕಲ್ಕೆರೆ ಭಾಗದ ಕೆಲ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತಿದೆ. ಹಿರೀಸಾವೆ- ಜುಟ್ಟನಹಳ್ಳಿ ಯೋಜನೆಯಿಂದ ಬೆಕ್ಕಾ, ಮತಿಗಟ್ಟಜುಟ್ಟನಹಳ್ಳಿ ವ್ಯಾಪ್ತಿಯ ಕೆಲ ಗ್ರಾಮದ ಕೆರೆಗಳಿಗೆನೀರು ತುಂಬಿಸಿರುವುದರಿಂದ ಇಲ್ಲಿಯೂ ಸಮಸ್ಯೆ ಅಷ್ಟಾಗಿ ಕಂಡು ಬಂದಿಲ್ಲ.
ವಾರದಲ್ಲೇ ಕೊಳವೆ ಬಾವಿ ನಿಂತೋಯ್ತು :
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಇರುವುದರಿಂದ ತಾಲೂಕು ಆಡಳಿತಭೇಟಿ ನೀಡಿ ಸಮಸ್ಯೆ ಇರುವ ಗ್ರಾಮವನ್ನುಪತ್ತೆ ಹಚ್ಚಿ ಶಾಸಕ ಸಿ.ಎನ್.ಬಾಲಕೃಷ್ಣರಗಮನಕ್ಕೆ ತಂದರೂ ಕೂಡಲೇ ಶಾಸಕರುಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಅಳವಡಿಸಿ ನೀರಿನ ಸಮಸ್ಯೆಬಗೆಹರಿಸಿದ್ದರು. ವಾರದಲ್ಲಿಯೇ ಕೊಳವೆಬಾವಿಯಲ್ಲಿ ನೀರು ಬತ್ತಿಹೋಗಿದ್ದು ತಾಲೂಕಿನಲ್ಲಿ ಅಂರ್ಜಲ ಕುಸಿಯುತ್ತಿದೆ.
ಸಮಸ್ಯೆ ಇರುವ ಗ್ರಾಮಗಳು : ಹಿರೀಸಾವೆ ಗ್ರಾಪಂ ವ್ಯಾಪ್ತಿಯ ಕಲ್ಲಹಳ್ಳಿ ಹಾಗೂ ಹಿರೀಸಾವೆಹೋಬಳಿ ಕೇಂದ್ರ, ಬಾಳಗಂಚಿ ಗ್ರಾಪಂ ವ್ಯಾಪ್ತಿಯ ತಿಮ್ಮಾಪುರ,ಬ್ಯಾಡರಹಳ್ಳಿ, ಕಾವಲು ಹೊಸೂರು. ದಮ್ಮನಿಂಗಲ ಗ್ರಾಪಂನಮಜ್ಜನಹಳ್ಳಿ, ಮತ್ತಿಗಟ್ಟ ಗ್ರಾಪಂನ ಕಮರವಹಳ್ಳಿ, ಜೋಳಂಬಳ್ಳಿ,ಕಬ್ಟಾಳು ಗ್ರಾಪಂನ ಡಿಂಕ ಕೊಪ್ಪಲು, ಗೌಡಗಡರೆ ಗ್ರಾಪಂನಬಡಕನಹಳ್ಳಿ, ದಿಡಗ ಗ್ರಾಪಂ ಕೇಂದ್ರದಲ್ಲಿಯೂ ನೀರಿನ ಸಮಸ್ಯೆಇದೆ. ಸಂತೆಶಿವರ ಗ್ರಾಪಂನ ಯಾಚನಘಟ್ಟ, ಕಲ್ಕೆರೆ ಗ್ರಾಪಂನೆಟ್ಟೆಕೆರೆ, ತಗಡೂರು ಗ್ರಾಪಂನ ಕಲ್ಲುಮಲ್ಲೇನಹಳ್ಳಿ ಇನ್ನುಮಟ್ಟನವಿಲೆ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೂಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬಾಗೂರುಹೋಬಳಿ ಕೇಂದ್ರ ಗಡಿಯಲ್ಲಿನ ಕೆಲ ಗ್ರಾಮದಲ್ಲಿ ಮುಂದಿನ ತಿಂಗಳಲ್ಲಿ ಸಮಸ್ಯೆ ಉಂಟಾಗುವ ಲಕ್ಷಣಗಳು ಕಾಣುತ್ತಿವೆ.
ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರಿಸಲಾಗಿದೆ. ಎಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ಆ ಭಾಗದಲ್ಲಿಖಾಸಗಿ ಕೊಳವೆ ಬಾವಿಯಿಂದ ಜನರಿಗೆ ನೀರುಕೊಡಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ.ಕೆಲ ಕಡೆಯಲ್ಲಿ ಟ್ಯಾಂಕರ್ ಮೂಲಕ ನೀರುಸರಬರಾಜು ಮಾಡಲಾಗುತ್ತಿದೆ. – ಸುನಿಲ್‌ಕುಮಾರ್, ತಾಪಂ ಇಒ
ಪ್ರತಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ. ಯಾರಾದರೂ ತೋಟಕ್ಕೆ ನೀರು ಬಿಟ್ಟುಕೊಂಡಾಗ ಅಲ್ಲಿಗೆ ತೆರಳಿ ನೀರು ಪಡೆಯುತ್ತೇವೆ. ಆದಷ್ಟು ಬೇಗ ತೋಟಿ ಏತನೀರಾವರಿ ಯೋಜನೆ ಮುಗಿಸಿದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯಲಿದೆ. – ಶಾರದಮ್ಮ, ದಿಡಗ ನಿವಾಸಿ
– ಶಾಮಸುಂದರ್ ಕೆ.ಅಣ್ಣೇನಹಳ್ಳಿ