ಚಿಕ್ಕನಾಯಕನಹಳ್ಳಿ: ತಾಲೂಕಿನ ಶೆಟ್ಟಿಕೆರೆ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಯಿಂದ ರೋಗಿಗಳು ಕಷ್ಟಪಡುವಂತಾಗಿದ್ದು, ಸಣ್ಣ ಆರೋಗ್ಯ ಸಮಸ್ಯೆಗೂ ದೂರದ ಆಸ್ಪತ್ರೆ ಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಶೆಟ್ಟಿಕೆರೆ ಹೋಬಳಿ ಕೇಂದ್ರವಾಗಿದ್ದು ಸಾಸಲು, ಗೋಪಾಲನಹಳ್ಳಿ, ವಡೇರಹಳ್ಳಿ, ಬಾಚೀಹಳ್ಳಿ ಸೇರಿದಂತೆ ಹಲವಾರು ಗ್ರಾಮ ಗಳ ಜನರಿಗೆ ಚಿಕಿತ್ಸೆ ಪಡೆದುಕೊಳ್ಳಲು ಶೆಟ್ಟಿಕೆರೆ ಆಸ್ಪತ್ರೆ ಅನುಕೂಲಕರ. ಆದರೆ ಹಲವು ತಿಂಗಳಿನಿಂದ ಕಾಯಂ ವೈದ್ಯರಿಲ್ಲದೇ ರೋಗಿಗಳು ಚಿಕ್ಕನಾಯಕನಹಳ್ಳಿ, ತಿಪಟೂರಿಗೆ ಹೋಗಬೇಕಿದ್ದು, ಹೆಚ್ಚು ಖರ್ಚು ತಗುಲು ವುದಲ್ಲದೇ ಅಧಿಕ ಪ್ರಯಾಣದಿಂದ ಸಣ್ಣ ರೋಗವೂ ಉಲ್ಭಗೊಳ್ಳುವಂತಾಗಿದೆ. ಕಾಯಂ ವೈದ್ಯರನ್ನು ನೇಮಿಸಬೇಕು ಎಂದು ಹಲವು ಬಾರಿ ಸ್ಥಳೀಯ ಜನರು ಆಗ್ರಹಿಸಿ ದ್ದರೂ ತಾಲೂಕು ಆರೋಗ್ಯ ಇಲಾಖೆ ಗಣನೆಗೆ ತೆಗೆದುಕೊಂಡಿಲ್ಲ.
ಆಸ್ಪತ್ರೆಗೆ ಬರಲು ಹಿಂದೇಟು: ಊರಿನ ಕೆಲವರು ಭಾಗ್ಯಲಕ್ಷ್ಮೀ ಬಾಂಡ್, ಇತರ ಯೋಜನೆಗಳ ಸವಲತ್ತು ಪಡೆಯಲು ಅಟೆಸ್ಟೆಡ್ ಮಾಡಿಸಿಕೊಳ್ಳಲು ಹಣ ತೆಗೆದು ಕೊಳ್ಳಿ ಎಂದು ಹೇಳಿ ವಿಡಿಯೋ ಮಾಡಿ ಕೊಂಡು ಬ್ಲಾಕ್‌ವೆುೕಲ್ ಮಾಡಿದ್ದರಿಂದ ಈ ಹಿಂದಿದ್ದವರನ್ನು ವರ್ಗಾವಣೆಯಾಗುವಂತೆ ಮಾಡಿದ್ದರು. ವಿನಾಕಾರಣ ಆರೋಪ ಮಾಡುವುದು ಇತರ ಕಾರಣಗಳಿಂದ ವೈದ್ಯರು ಇಲ್ಲಿಗೆ ಬರಲು ಕೇಳುತ್ತಿಲ್ಲ.
ನಕಲಿ ವೈದ್ಯರಿಗೆ ರಹದಾರಿ: ವೈದ್ಯರ ಸೇವೆ ಇಲ್ಲವುದನ್ನು ಬಂಡವಾಳ ಮಾಡಿಕೊಳ್ಳುವ ಕೆಲ ನಕಲಿ ವೈದ್ಯರು ಊರಿನಲ್ಲಿ ಕ್ಲಿನಿಕ್ ಪ್ರಾರಂಭಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸುತ್ತಾರೆ. ಇದಕ್ಕೆ ಅವಕಾಶ ಮಾಡಿ ಕೊಡದೆ ಸರ್ಕಾರ ಶೆಟ್ಟಿಕೆರೆ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕ ಮಾಡಬೇಕು.
ಡಾ.ರಾಧಿಕರನ್ನು ನೇಮಕ ಮಾಡಿ: ಈ ಹಿಂದಿದ್ದ ಡಾ.ರಾಧಿಕ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಇಲ್ಲಿನ ಕೆಲವರು ಅವರ ಮೇಲೆ ಆರೋಪ ಮಾಡಿ ವರ್ಗಾವಣೆ ಮಾಡಿಸಿದ್ದಾರೆ. ಇದರಿಂದ ಈ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲವಾಗಿದೆ. ಅವರನ್ನೇ ಮತ್ತೆ ಆಸ್ಪತ್ರೆಗೆ ನೇಮಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ವರ್ಗಾವಣೆ ಮಾಡಿಸಬೇಕು ಎಂಬುದು ಶೆಟ್ಟಿಕೆರೆ ಹೋಬಳಿ ನಿವಾಸಿ ರಾಮಯ್ಯ ಆಗ್ರಹವಾಗಿದೆ.