Advertisement

ಸಿಲಿಂಡರ್‌ ಕೊರತೆ; ಕಟ್ಟಿಗೆ ಒಲೆ ಮೇಲೆ ಬಿಸಿಯೂಟ

11:26 AM Sep 08, 2019 | Suhan S |

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಸರಕಾರಿ ಶಾಲೆಗಳಲ್ಲಿ ಒಂದು ತಿಂಗಳಿನಿಂದ ಸಿಲಿಂಡರ್‌ ಪೂರೈಕೆಯಾಗದ ಕಾರಣ ಕಟ್ಟಿಗೆ ಒಲೆ ಮೇಲೆ ಬಿಸಿಯೂಟ ತಯಾರಿಸಲಾಗುತ್ತಿದೆ. ಸಿಲಿಂಡರ್‌ ದೊರೆಯದ ಕಾರಣ ಶಾಲೆಗಳಲ್ಲಿ ಅನಿವಾರ್ಯವಾಗಿ ಕಟ್ಟಿಗೆ ಒಲೆ ಮೇಲೆ ಅಡುಗೆ ಮಾಡಲಾಗುತ್ತಿದೆ.

Advertisement

ತಾಲೂಕಾದ್ಯಂತ ಸರಕಾರಿ ಶಾಲೆಗಳಿಗೆ ಕುಷ್ಟಗಿ ಭಾರತ್‌ ಗ್ಯಾಸ್‌ ಏಜೆನ್ಸಿಯವರು ಸಿಲಿಂಡರ್‌ ನೀಡುತ್ತಿದ್ದಾರೆ. ಆದರೆ ಒಂದು ತಿಂಗಳಿನಿಂದ ಕೆಲ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಸಿಲಿಂಡರ್‌ ವಿತರಿಸದ ಕಾರಣ ಅನಿವಾರ್ಯವಾಗಿ ವಿದ್ಯಾರ್ಥಿಗಳಿಗೆ ಕಟ್ಟಿಗೆ ಒಲೆ ಮೇಲೆ ಅಡುಗೆ ತಯಾರಿಸಿ ಬಿಸಿಯೂಟ ಉಣಬಡಿಸಲಾಗುತ್ತಿದೆ.

ಬಿಸಿಯೂಟ ತಯಾರಿಸಲು ಬೇಕಾಗುವ ಸಿಲಿಂಡರ್‌ಗಳಿಗೆ ನೆರೆ ಹಾವಳಿ ಬಿಸಿ ತಟ್ಟಿದೆ. ಹೋಬಳಿ ವ್ಯಾಪ್ತಿಯ ಶಾಲೆಗಳಿಗೆ ಪ್ರತಿ ತಿಂಗಳಿಗೊಮ್ಮೆ ಆಯಾ ಶಾಲೆಗಳಿಗೆ ಕುಷ್ಟಗಿ ಭಾರತ್‌ ಗ್ಯಾಸ್‌ ಏಜೆನ್ಸಿಯವರು ಬಂದು ತುಂಬಿದ ಸಿಲಿಂಡರ್‌ಗಳನ್ನು ಕೊಟ್ಟು ಶಾಲೆಗಳಿಲ್ಲಿರುವ ಖಾಲಿ ಸಿಲಿಂಡರ್‌ಗಳನ್ನು ತಮ್ಮದೇ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ನೆರೆ ಹಾವಳಿಯಿಂದ ಕುಷ್ಟಗಿ ಭಾರತ್‌ ಗ್ಯಾಸ್‌ ಏಜೆನ್ಸಿಗೆ ಮಂಗಳೂರಿನಿಂದ ರಿಫೈನರಿ ಸ್ಟೇಶನ್‌ನಿಂದ ಸಿಲಿಂಡರ್‌ ಸರಬರಾಜು ಆಗುವಲ್ಲಿ ವ್ಯತ್ಯಯಾಗುತ್ತಿದ್ದು. ಇದರಿಂದ ಶಾಲೆಗಳಲ್ಲಿ ಕಟ್ಟಿಗೆಯ ಮೇಲೆ ಬಿಸಿಯೂಟ ಬೇಯುತ್ತಿದೆ.

ದೂರದಲ್ಲಿದೆ ಏಜೆನ್ಸಿ: ಹೋಬಳಿ ವ್ಯಾಪ್ತಿಯಲ್ಲಿರುವ ಗಡಿ ಗ್ರಾಮಗಳ ಶಾಲೆಗಳಿಗೆ ಕುಷ್ಟಗಿ ದೂರವಾಗುತ್ತಿದ್ದು. ಪ್ರತಿ ಸಲ ಕುಷ್ಟಗಿಯವರು ಸಿಲಿಂಡರ್‌ ಬಂದು ಶಾಲೆಗಳಿಗೆ ತಲುಪಿದ ನಂತರ ಒಂದು ಕಿ.ಮೀ.ಗೆ ಒಂದು ರೂಪಾಯಿ ಆರವತ್ತು ಪೈಸೆ ಚಾರ್ಜ್‌ ಮಾಡುತ್ತಾರೆ. ಇದರಿಂದ ಆರ್ಥಿಕ ಹೊರೆ ಆಗುವ ಸಾಧ್ಯತೆ ಇದೆ.

ತಾವರಗೇರಾದಲ್ಲಿರುವ ಇಂಡಿಯನ್‌ ಗ್ಯಾಸ್‌ ಏಜೆನ್ಸಿಯ ಸಮೀಪದಲ್ಲಿದೆ. ಈಗಾಗಿ ಕುಷ್ಟಗಿಯಿಂದ ತಾವರಗೇರಾ ಗ್ಯಾಸ್‌ ಅಂಗಡಿಗೆ ವರ್ಗಾವಣೆ ಮಾಡಿದರೆ ಸೂಕ್ತ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರು ಅಭಿಪ್ರಾಯಪಟ್ಟರು.

Advertisement

ಬಯಲಲ್ಲಿ ಬಿಸಿಯೂಟ ತಯಾರಿಕೆ: ಸಿಲಿಂಡರ್‌ ಕೊರತೆಯಿಂದ ಕಟ್ಟಿಗೆ ಮೇಲೆ ಬಿಸಿಯೂಟ ತಯಾರಿಸಲು ಶಾಲೆಯ ಆವರಣದಲ್ಲಿ ಒಲೆ ಹೂಡಿ. ಬಯಲಲ್ಲಿ ಅಡುಗೆ ತಯಾರಿಸುವುದರಿಂದ ಅಡುಗೆಯಲ್ಲಿ ದೂಳು, ಮಣ್ಣು ಬೀಳುವ ಸಾಧ್ಯತೆ ಇದ್ದು. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರಲಿದೆ ಎಂದು ಪಾಲಕರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next