Advertisement

ಇಲಾಖೆಗಳ ನಡುವೆ ಸಮನ್ವಯ ಕೊರತೆ: ಅನುಷ್ಠಾನ ವಿಳಂಬ

11:32 PM Mar 10, 2020 | Team Udayavani |

ವಿಧಾನಸಭೆ: ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಲ್ಲಿ ಅನಗತ್ಯ ವಿಳಂಬ ಹಾಗೂ ಯೋಜನಾ ವೆಚ್ಚ ಹೆಚ್ಚಾಗಿರುವುದರ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

Advertisement

ಸದನದಲ್ಲಿ ಮಂಗಳವಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಅವರು ವರದಿ ಮಂಡಿಸಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ಇತರ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡದ ಕಾರಣ ಗುತ್ತಿಗೆದಾರರಿಗೆ ಲಾಭವಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಜತೆಗೆ, ಕಾನೂನು ಬಾಹಿರ ಮರಳು ಗಣಿಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾದ ವರಮಾನ ನಷ್ಟವಾಗಿರುವ ಬಗ್ಗೆಯೂ ಉಲ್ಲೇಖೀಸಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ, ಕರ್ನಾಟಕ ಉದ್ಯಾನವನ ಆಟದ ಮೈದಾನ ಮುಕ್ತ ಪ್ರದೇಶಗಳ ಕಾಯ್ದೆ, ಘೋಷಿತ ಆಟದ ಮೈದಾನದ ಮಾರ್ಗಪಲ್ಲಟ ಅಥವಾ ಬದಲಾವಣೆಯನ್ನು ನಿಷೇಧಿಸಿದೆ. ಆದರೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಹೈಕೋರ್ಟ್‌ ನ್ಯಾಯಮೂರ್ತಿಗಳಿಗಾಗಿ ವಸತಿ ಗೃಹಗಳ ನಿರ್ಮಾಣಕ್ಕೆ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿನ ಆಟದ ಮೈದಾನದ 7.19 ಎಕರೆ ಜಮೀನನ್ನು ಲೋಕೋಪಯೋಗಿ ಇಲಾಖೆಗೆ ನೀಡಿದೆ.

ಸರ್ಕಾರದ ನಿರ್ದೇಶನದಂತೆ ಈ ಜಮೀನು ನೀಡಿದ್ದು, ಆ ಸ್ಥಳದಲ್ಲಿ ಇಲಾಖೆ ಯಾವುದೇ ಪರಿಶೀಲನೆ ನಡೆಸದೆ, ಕಾನೂನು ಬಾಹಿರವಾಗಿ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಇದರ ಬಗ್ಗೆಯೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಕಾಮಗಾರಿ ನಿಲ್ಲಿಸಲು ಆದೇಶಿಸಿದ್ದರೂ ನಿಲ್ಲಿಸದ ಕಾರಣ ಗುತ್ತಿಗೆದಾರರು ಮಧ್ಯಸ್ಥಿಕೆದಾರರ ಮೊರೆ ಹೋಗುವ ಸನ್ನಿವೇಶ ಸೃಷ್ಟಿಸಿದ್ದರಿಂದ 5.76 ಕೋಟಿ ರೂ.ಮೊತ್ತವನ್ನು ಇಲಾಖೆ ಪಾವತಿಸಿರುವುದು ವ್ಯರ್ಥ ಎಂದು ಸಮಿತಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next