Advertisement

ಕೂರ್ಗಿ ಅರೋಗ್ಯ ಕೇಂದ್ರದಲ್ಲಿ ಮೂಲ ಸೌಕರ್ಯ ಕೊರತೆ

11:03 PM Jul 16, 2019 | sudhir |

ತೆಕ್ಕಟ್ಟೆ : ಗ್ರಾಮೀಣ ಭಾಗದ ಕೊರ್ಗಿ ದಿ| ಕೆ.ಚಂದ್ರಶೇಖರ ಹೆಗ್ಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಆದರೆ, ಮೂಲಸೌಕರ್ಯ ಕೊರತೆ ಕೇಂದ್ರವನ್ನು ಬಾಧಿಸುತ್ತಿದೆ.

Advertisement

ಸಿಬಂದಿ ಕೊರತೆ

ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾಳಾವರ, ವಕ್ವಾಡಿ, ಕೊರ್ಗಿ ಸೇರಿದಂತೆ ಒಟ್ಟು ಮೂರು ಉಪ ಕೇಂದ್ರಗಳಿವೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹಾಗೂ ಡಿ ದರ್ಜೆಯ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ, 1 ಗುಮಾಸ್ತ ಹುದ್ದೆ, 1 ದಾದಿ, 1 ಫಾರ್ಮಾಸಿಸ್ಟ್‌ ಹುದ್ದೆ, 1ಪುರುಷ ಆ.ಸಹಾಯಕ ಹುದ್ದೆ ಖಾಲಿ ಇದೆ.

ಸ್ಥಿರ ದೂರವಾಣಿ ಇಲ್ಲ

ಗ್ರಾಮಕ್ಕೆ ಸರಿಯಾದ ಬಸ್‌ ವ್ಯವಸ್ಥೆಗಳಿಲ್ಲದೆ ಇರುವ ಕಾರಣ ಪ್ರಮುಖವಾಗಿ ಗ್ರಾಮೀಣ ಭಾಗದ ಹೊರ ರೋಗಿಗಳು ಆರೋಗ್ಯ ಕೇಂದ್ರದೆಡೆಗೆ ಬರಲು ಕಷ್ಟ ಸಾಧ್ಯವಾಗುತ್ತಿದೆ.

Advertisement

ವೈದ್ಯಾಧಿಕಾರಿಗಳ ಸಂಪರ್ಕಕ್ಕೆ ಬೇಕಾಗುವ ಸ್ಥಿರ ದೂರವಾಣಿ ಹಾಗೂ ಇಂಟರ್‌ನೆಟ್ ಸಂಪರ್ಕಗಳಿಲ್ಲದಿರುವುದು ಸಮಸ್ಯೆಯಾಗಿದೆ.

ಸೌಲಭ್ಯಗಳಿವೆ

ಸುವ್ಯವಸ್ಥಿತ ಕಟ್ಟಡವನ್ನು ಹೊಂದಿರುವ ಈ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, 5 ಸಿಬಂದಿ ಇದ್ದಾರೆ. 11 ಮಂದಿ ಆಶಾ ಕಾರ್ಯಕರ್ತೆಯರೂ ಸೇವೆ ಸಲ್ಲಿಸುತ್ತಿದ್ದಾರೆ. ಹೊರ ರೋಗಿಗಳ ತಪಾಸಣಾ ವಿಭಾಗದಲ್ಲಿ ಆರು ಬೆಡ್‌ಗಳಿರುವ ಕೊಠಡಿ ಇದೆ. ಪೂರ್ಣ ಕಾಲಿಕ ಸಿಬಂದಿ ಬೇಕು.

ತಡೆಗೋಡೆ ಅಗತ್ಯ

ಆರೋಗ್ಯ ಕೇಂದ್ರಕ್ಕೆ ಸಿಬಂದಿ ಕೊರತೆ ಹಾಗೂ ಸ್ಥಿರ ದೂರವಾಣಿ ಹಾಗೂ ಇಂಟರ್‌ನೆಟ್ ಸಂಪರ್ಕ ಇಲ್ಲದಿರುವುದು ಸಮಸ್ಯೆ ತಂದಿದೆ. ಕೇಂದ್ರಕ್ಕೆ ಸಂಬಂಧಪಟ್ಟ 80 ಸೆಂಟ್ಸ್‌ ವಿಸ್ತೀರ್ಣದ ಜಾಗಕ್ಕೆ ತಡೆಗೋಡೆ ನಿರ್ಮಾಣವಾಗಬೇಕಾಗಿದೆ.
– ಡಾ| ಪ್ರತಾಪ್‌ ಕುಮಾರ್‌, ವೈದ್ಯಾಧಿಕಾರಿಗಳು, ಕೊರ್ಗಿ ಪ್ರಾ.ಆ. ಕೇಂದ್ರ

ಸಿಬಂದಿ ಕೊರತೆ ನೀಗಿಸಿ

ಇಲ್ಲಿನ ವೈದ್ಯರಿಗೆ ಹಳ್ಳಿಹೊಳೆ ಹಾಗೂ ಕೊರ್ಗಿ ಪ್ರಾಥಮಿಕ ಕೇಂದ್ರವನ್ನು ಒತ್ತಡದಿಂದ ನಿರ್ವಹಿಸಬೇಕಾದ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ವೈದ್ಯರನ್ನು ಕೊರ್ಗಿ ಆರೋಗ್ಯ ಕೇಂದ್ರದಲ್ಲೇ ಪೂರ್ಣಕಾಲಿಕವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಸಿಬಂದಿ ಕೊರತೆ ನೀಗಿಸಬೇಕು.
– ಮಂಜುನಾಥ ಕಲ್ಕೂರ,ಸ್ಥಳೀಯರು

 

Advertisement

Udayavani is now on Telegram. Click here to join our channel and stay updated with the latest news.

Next