Advertisement

Lok Sabha Election: ಸೋಲಿನ ಭೀತಿಯಿಂದ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ: ಬೊಮ್ಮಾಯಿ

08:59 PM Mar 14, 2024 | Suhan S |

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಸಿಗುತ್ತಿಲ್ಲ. ಸಚಿವರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

Advertisement

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅಭ್ಯರ್ಥಿಗಳ ಆಯ್ಕೆ ವಿನೂತನ ರೀತಿಯಾಗಿದೆ. ಡಾ. ಮಂಜುನಾಥ್‌ ಅವರು ಲಕ್ಷಾಂತರ ಜನರಿಗೆ ಆರೋಗ್ಯ ಕಾಪಾಡಿದ್ದಾರೆ.  ಯದುವೀರ ಒಡೆಯರ್‌ ಅವರಿಗೆ ಟಿಕೆಟ್‌ ನೀಡಿರುವುದು ದಕ್ಷಿಣ ಕರ್ನಾಟಕದಲ್ಲಿ ಒಳ್ಳೆಯ ಸಂದೇಶ ನೀಡಿದಂತಾಗಿದೆ ಎಂದರು.

ಹಳೆ ಬೇರು, ಹೊಸ ಚಿಗುರಿಗೂ ಪಕ್ಷ  ಅವಕಾಶ ನೀಡಿದೆ. ಈ ರೀತಿ ನಿರ್ಣಯ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್‌ನಲ್ಲಿ ಆ ಪರಿಸ್ಥಿತಿ ಇಲ್ಲ. ಸಚಿವರೂ ಸೋಲುವ ಭಯದಲ್ಲಿ ಇದ್ದಾರೆ. ಟಿಕೆಟ್‌ ಸಿಗದ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನುವುದು ಡಿಸಿಎಂ ಡಿಕೆಶಿವಕುಮಾರ್‌ ಅವರ ಚಾಳಿ ಎಂದು ಹೇಳಿದರು.

ಕೆಲವರಿಗೆ ಟಿಕೆಟ್‌ ಮಿಸ್‌ ಆಗಿದೆ ನಿಜ. ಆದರೆ, ಹೊಸಬರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿದೆ. ಟಿಕೆಟ್‌ ಮಿಸ್‌ ಆದವರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ಕಾಂಗ್ರೆಸ್‌ಗೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿದೆ ಎಂದಾಯಿತು. ಅಂತಹ ದಯನೀಯ ಸ್ಥಿತಿ ಅವರ ಪಕ್ಷಕ್ಕೆ ಬರಬಾರದಿತ್ತು. ಎಲ್ಲಕ್ಕೂ ಲೋಕಸಭಾ ಚುನಾವಣೆಯ ಫ‌ಲಿತಾಂಶ ಉತ್ತರ ನೀಡಲಿದೆ.ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next