ಕಾಗವಾಡ: ಕರ್ನಾಟಕ ಹಾಗೂ ಮಹಾರಾಷ್ಟ್ರಗಡಿ ವಿವಾದದ ಬೆನ್ನಲ್ಲೇ ಮಂಗಳವಾರದಿಂದಜಿಲ್ಲಾಡಳಿತ ಕೋವಿಡ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದೆ. ಅಲ್ಲಿಂದಲೂ ಬಸ್‌ಗಳು ಬರುತ್ತಿಲ್ಲ. ಕಾಗವಾಡ ಆರ್‌ಟಿಒ ಚೆಕ್‌ಪೋಸ್ಟ್ ಹತ್ತಿರ ಕೋವಿಡ್ ತಪಾಸಣೆ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಸಂಚರಿಸುವ 500 ಬಸ್‌ಗಳ ಸೇವೆ ಸ್ಥಗಿತಗೊಂಡಿದೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ಮಧ್ಯಾಹ್ನದಿಂದ ಚೆಕ್‌ಪೋಸ್ಟ್‌ಪ್ರಾರಂಭಿಸಲಾಗಿದ್ದು, ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇದ್ದವರನ್ನು ಮಾತ್ರ ರಾಜ್ಯದ ಒಳಕ್ಕೆಬಿಡಲಾಗುತ್ತಿದೆ. ಕಾಗವಾಡದಲ್ಲಿ ಮಹಾರಾಷ್ಟ್ರದ ಬಸ್‌ಗಳನ್ನುತಡೆಯಲಾಗುತ್ತಿದೆ ಎಂಬ ಸುದ್ದಿ ಮಿರಜ ಹಾಗೂ ಸಾಂಗಲಿ ಪಟ್ಟಣದಲ್ಲಿ ಹರಡಿದ ನಂತರ ಎಲ್ಲ ಬಸ್ ಸಂಚಾರ ಸೇವೆ ಸ್ಥಗಿತಗೊಂಡಿತು. ಪ್ರಯಾಣಿಕರನ್ನು ಕಾಗವಾಡ ಬಸ್ ನಿಲ್ದಾಣದಲ್ಲಿ ಬಿಟ್ಟು ಬಸ್‌ಗಳು ಮರಳಿ ಡಿಪೊಗಳಿಗೆ ಹೋಗಲುಪ್ರಾರಂಭಿಸಿದವು. ಇದ್ದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿ ಯಾವುದೇ ಮಾಹಿತಿ ತಿಳಿಯದೇ ಪರದಾಡುವಂತಾಯಿತು.
ಖಾಸಗಿ ವಾಹನಗಳ ಮೊರೆ: ಕೆಲವರು ಸುಮಾರು 2 ಕಿಮೀ ನಡೆದು ಕಾಲ್ನಡಿಗೆಯಲ್ಲಿ ಚೆಕ್‌ಪೋಸ್ಟ್ ದಾಟಿ ಖಾಸಗಿ ವಾಹನದಲ್ಲಿ ಮಹಾರಾಷ್ಟ್ರದಲ್ಲಿನ ತಮ್ಮ ಸ್ಥಾನಗಳಿಗೆ ತೆರಳಿದರು. ಅಲ್ಲಿಂದ ಬರುವ ಜನ ಕೂಡ ಕಾಲ್ನಡಿಗೆಯಲ್ಲಿ ಗಡಿ ಪ್ರವೇಶಿಸಿ ಖಾಸಗಿ ವಾಹನದಲ್ಲಿ ಪ್ರಯಾಣ ಬೆಳೆಸಿದರು. ಕಾಲ್ನಡಿಗೆಯಲ್ಲಿ ಬರುವವರ ಕೋವಿಡ್ ಪರೀಕ್ಷೆಪ್ರಮಾಣಪತ್ರವನ್ನು ಯಾರೂ ಕೇಳಲಿಲ್ಲ! ಖಾಸಗಿ ವಾಹನಗಳವರು ಮನ ಬಂದಂತೆ ಪ್ರಯಾಣಿಕರಿಂದ ಹಣ ವಸೂಲು ಮಾಡಿದರು.
ರೋಗಿಗಳಿಗೆ ತೊಂದರೆ: ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಜನ ಸಾಂಗ್ಲಿ, ಮೀರಜ್‌ಗಳಿಗೆ ಹೋಗುತ್ತಿದ್ದು, ನಡೆಯಲಾಗದ ವೃದ್ಧುರು, ರೋಗಿಗಳು ಬಸ್‌ನಿಲ್ದಾಣದಲ್ಲಿಯೇ ಕುಳಿತು ಪರದಾಡಿದರು. ನೊಂದ ಪ್ರಯಾಣಿಕ ಸುರಪುರದ ಕುಮಾರ ಮಾತನಾಡಿ, ಕರ್ನಾಟಕದಲ್ಲಿ ಉಪಚಾರ ದೊರೆಯದೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇವೆ. ಇದರಲ್ಲಿ ನಮ್ಮದೇನು ತಪ್ಪು? ಈಗ ಆಕಸ್ಮಿಕವಾಗಿ ಬಸ್ ತಡೆದು ನಮಗೆ ತೊಂದರೆ ನೀಡುತ್ತಿದ್ದೀರಿ. ಈಗ ನಾವು ರೋಗಿಗಳನ್ನು ತೆಗೆದುಕೊಂಡು ಎಲ್ಲಿಗೆ ಹೋಗಬೇಕು? ಇವರ ಜೀವಕ್ಕೆ ಅಪಾಯವಾದರೆ, ಇದರ ಹೋಣೆಗಾರರು ಯಾರು? ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಕೆಎಸ್‌ಆರ್‌ಟಿಸಿ ಕಾಗವಾಡ ವಿಭಾಗದನಿಯಂತ್ರಕ ಚಂದ್ರಶೇಖರ ಬೇನಾಳ ಮಾಹಿತಿನೀಡಿ, ಮಧ್ಯಾಹ್ನ ನಮ್ಮ ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮಹಾರಾಷ್ಟ್ರಕ್ಕೆಸಂಚರಿಸುವ ಎಲ್ಲ ಬಸ್ ಸ್ಥಗಿತಗೊಳಿಸಿದ್ದೇವೆ.ದಿನನಿತ್ಯ 550 ಬಸ್‌ಗಳು ಸಂಚರಿಸುತ್ತವೆ. ಈ ಎಲ್ಲಬಸ್‌ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದರು.