Advertisement
ಅಮಾಸೆಬೈಲಿನಿಂದ ಐದಾರು ಕಿ.ಮೀ. ದೂರದ ನಡಂಬೂರು, ನರಸೀಪುರ, ಗುಂಡಾಣ ಭಾಗಕ್ಕೆ ಬಸ್ ಇಲ್ಲದೆ 25ರಿಂದ 30 ಮಕ್ಕಳು ನಿತ್ಯ ಸಂಜೆ ವೇಳೆಗೆ ನಡೆದುಕೊಂಡೇ ಹೋಗಬೇಕಾದ ಸ್ಥಿತಿಯಿದೆ.
Related Articles
Advertisement
ನಡಂಬೂರು, ನರಸೀಪುರ, ಗುಂಡಾಣ, ನಿಲ್ಸಿಕಲ್, ಮಾವಿನಕಾಡು, ಉಳಿಕಾಡು ಹೀಗೆ ಸುತ್ತಮುತ್ತಲಿನ ಪರಿಸರದ ಅನೇಕ ಕಡೆಗಳ ಮಕ್ಕಳು ಹಾಲಾಡಿ, ಬಿದ್ಕಲ್ ಕಟ್ಟೆ, ಕೋಟೇಶ್ವರ, ಕುಂದಾಪುರ ಭಾಗದ ಶಿಕ್ಷಣ ಸಂಸ್ಥೆಗಳಿಗೆ ವ್ಯಾಸಂಗಕ್ಕೆ ಬರುತ್ತಾರೆ.
ಬಸ್ ಕಲ್ಪಿಸಲು ಆಗ್ರಹ: ಪ್ರತಿ ನಿತ್ಯ ಮಕ್ಕಳು ಮಾತ್ರವಲ್ಲದೆ ಗ್ರಾಮಸ್ಥರು ಸಹ ಕನಿಷ್ಠ ಗ್ರಾ.ಪಂ. ಕಚೇರಿ ಕೆಲಸಕ್ಕೆ ಬರಬೇಕಾದರೂ 5-6 ಕಿ.ಮೀ. ನಡೆದುಕೊಂಡು ಅಥವಾ ರಿಕ್ಷಾ ಇನ್ನಿತರ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾಗಿದೆ. ಗ್ರಾಮೀಣ ಭಾಗವಾದ ಇಲ್ಲಿಗೆ ಈ ಬೆಳಗ್ಗೆ ಇರುವಂತೆಯೇ ಸಂಜೆ ವೇಳೆಯೂ ಒಂದು ಬಸ್ ವ್ಯವಸ್ಥೆ ಮಾಡಿದರೆ ಬಹಳಷ್ಟು ಅನುಕೂಲವಾಗಲಿದೆ. – ಕಿರಣ್ ಶೆಟ್ಟಿ, ಕೊಟ್ಟಕ್ಕಿ, ಗ್ರಾ.ಪಂ. ಸದಸ್ಯರು
ಪರಿಶೀಲಿಸಲಾಗುವುದು: ಅಮಾಸೆಬೈಲು ಗ್ರಾಮದ ನಡಂಬೂರು ಭಾಗಕ್ಕೆ ಬಸ್ ಸೌಕರ್ಯ ಇಲ್ಲದಿರುವ ಬಗ್ಗೆ ಮಾಹಿತಿಯಿಲ್ಲ. ಸಾರ್ವಜನಿಕರಿಂದ ಮನವಿ ಬಂದಲ್ಲಿ ಪರಿಶೀಲಿಸಿ, ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. – ರಾಜೇಶ್, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಕುಂದಾಪುರ