Advertisement

ಇವಿ ವಾಹನಗಳ ಬೆಂಕಿಗೆ ಕಾರಣವೇನು? ತಜ್ಞರ ಸಮಿತಿಯಿಂದ ವರದಿ

05:28 PM Jun 29, 2022 | Team Udayavani |

ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳು ತನ್ನಿಂತಾನೇ ಬೆಂಕಿ ಹತ್ತಿಕೊಂಡು ಉರಿದಂತಹ ಸರಣಿ ಪ್ರಕರಣಗಳು ಇತ್ತೀಚೆಗೆ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಇಂಥ ದುರ್ಘ‌ಟನೆಗಳ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು ಕಂಡುಕೊಂಡ ಆತಂಕಕಾರಿ ಅಂಶಗಳು ಇಲ್ಲಿವೆ.

Advertisement

ತಜ್ಞರ ಸಮಿತಿ ಕಂಡುಕೊಂಡಿದ್ದೇನು?
– ಅತಿಯಾಗಿ ಬಿಸಿಯಾಗುವಂಥ ಬ್ಯಾಟರಿಗಳಿಗೆ ಶಕ್ತಿಯನ್ನು ಹೊರಸೂಸಲು “ವಾತಾಯನ’ ವ್ಯವಸ್ಥೆ ಇಲ್ಲ
– ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಿವೆ
– ಕೆಲವು ವಾಹನಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ಬಳಸಲಾಗಿದೆ
– ಮೂಲಭೂತ ಸುರಕ್ಷತಾ ವ್ಯವಸ್ಥೆಯನ್ನೂ ಕಂಪನಿಗಳು ಕಲ್ಪಿಸಿಲ್ಲ
– ಸುರಕ್ಷತೆಗೆ ಆದ್ಯತೆ ನೀಡುವ ಬದಲು ಶಾರ್ಟ್‌ಕಟ್‌ ರೂಟ್‌ಗಳನ್ನು ಬಳಸಲಾಗಿದೆ

ವಾತಾಯನ ವ್ಯವಸ್ಥೆ ಇದ್ದರೆ…
ಬ್ಯಾಟರಿಗಳು ಅತಿಯಾಗಿ ಬಿಸಿಯಾದಾಗ ಒಳಗೆ ಅನಿಲರೂಪದ ಒತ್ತಡ ಸೃಷ್ಟಿಯಾಗುತ್ತದೆ. ವಾಹನವು ಸಂಚರಿಸುವ ವೇಳೆ ಆ ಒತ್ತಡವು ಅಲ್ಲೇ ಇದ್ದು, ಅದು ತೀವ್ರಗೊಂಡಾಗ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹತ್ತಿಕೊಳ್ಳುತ್ತದೆ. ಆದರೆ, ಇಲ್ಲಿ ವಾತಾಯನ ವ್ಯವಸ್ಥೆಯಿದ್ದರೆ, ಅನಿಲದ ಒತ್ತಡವು ಆ ವ್ಯವಸ್ಥೆಯ ಮೂಲಕ ಹೊರಹೋಗುತ್ತದೆ. ಹಾಗಾಗಿ ಅಪಾಯ ಉಂಟಾಗುವುದಿಲ್ಲ. ಆದರೆ, ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಬ್ಯಾಟರಿಗಳಲ್ಲಿ ವಾತಾಯನ ವ್ಯವಸ್ಥೆ ಇಲ್ಲದಿರುವುದೇ ಅವಘಡಗಳಿಗೆ ಕಾರಣ ಎಂದು ಸಮಿತಿ ಹೇಳಿದೆ.

ಸರ್ಕಾರದ ಸೂಚನೆ
– ಸಮಿತಿ ನೀಡಿರುವ ಸಲಹೆಗಳನ್ನು ಸರ್ಕಾರವು ಆಯಾ ಕಂಪನಿಗಳಿಗೆ ರವಾನೆ. ಸೂಕ್ತ ಕ್ರಮಗಳಿಗೆ ಸೂಚನೆ.
– ನಿಮ್ಮ ವಿರುದ್ಧ ಏಕೆ ನಾವು ಕಾನೂನು ಕ್ರಮ ಕೈಗೊಳ್ಳಬಾರದು ಎಂದೂ ಪ್ರಶ್ನಿಸಿದೆ

ಆಗಸ್ಟ್‌ನಲ್ಲಿ ಮಾರ್ಗಸೂಚಿ
ಸಾರಿಗೆ ಸಚಿವಾಲಯವು ವಿದ್ಯುತ್‌ಚಾಲಿತ ವಾಹನ ತಯಾರಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಗಿಗೊಳಿಸುತ್ತಿದೆ. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿಯು ಆಗಸ್ಟ್‌ನೊಳಗಾಗಿ ಅಂತಿಮ ಮಾರ್ಗಸೂಚಿಗಳನ್ನು ಹೊರಡಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next