Advertisement

ಥಿಯೇಟರ್‌ ತೆರೆದರೂ ಪ್ರೇಕ್ಷಕರ ಕೊರತೆ

03:27 PM Feb 07, 2022 | Team Udayavani |

ಮೈಸೂರು: ಜಿಲ್ಲೆಯ ಚಿತ್ರಮಂದಿರಗಳು ಪುನಾರಂಭಗೊಂಡಿದ್ದರೂ ಪ್ರೇಕ್ಷಕರ ಕೊರತೆ ಕಂಡು ಬಂದಿದೆ.

Advertisement

ಮೈಸೂರು ಸೇರಿ ರಾಜ್ಯದಲ್ಲಿ ಚಿತ್ರಮಂದಿರ ಶೇ.100 ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆ ಮುಚ್ಚಿದ್ದ ಥಿಯೇಟರ್‌ಗಳು ತೆರೆದುಕೊಂಡಿವೆ.ಕೊರೊನಾ ಪ್ರಕರಣ ಹೆಚ್ಚಾದ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ಮಾತ್ರ ಸರ್ಕಾರ ಅವಕಾಶ ನೀಡಿತ್ತು.ಈ ಕ್ರಮ ಖಂಡಿಸಿ ಮೈಸೂರಿನ ಚಿತ್ರಮಂದಿರಗಳು ಮುಚ್ಚಿದ್ದವು. ಹೊಸ ಆದೇಶ ಹೊರಬೀಳುತ್ತಿದ್ದಂತೆ ಶನಿವಾರವೇ ಚಿತ್ರಮಂದಿರಗಳ ಬಾಗಿಲು ತೆರೆದು ಪ್ರೇಕ್ಷಕರ ಬರಮಾಡಿಕೊಂಡಿವೆ.

ರಜೆ ದಿನವಾದ ಭಾನುವಾರವೂ ಹೆಚ್ಚಿನ ಪ್ರಮಾಣದಲ್ಲಿ ಸಿನಿಪ್ರೇಕ್ಷಕರು ಇರಲಿಲ್ಲ. ಬಹುತೇಕ ಖುರ್ಚಿ ಖಾಲಿ ಹೊಡೆಯುತ್ತಿದ್ದವು. ಚಲನಚಿತ್ರ ಮಂದಿರಗಳಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಚಿತ್ರಮಂದಿರದ ಒಳಗೆ ತಿಂಡಿ ಮತ್ತು ಪಾನೀಯ ಸೇವಿಸಬಹುದು ಹೊರಗೆ ಹೋಗಲು ಅವಕಾಶವಿಲ್ಲ. ಇಲ್ಲಿಗೆ ಹೋಗಲು 2 ಡೋಸ್‌ ಲಸಿಕೆ ಕಡ್ಡಾಯವಾಗಿದೆ. ಕೋವಿಡ್‌ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದು ಚಿತ್ರಮಂದಿರ ಮಾಲಿಕರಿಗೆ ಸರ್ಕಾರ ಸೂಚಿಸಲಾಗಿದೆ.

ಹಳೆ ಚಿತ್ರಗಳು ಸಿನಿಮಾಮಂದಿರಗಳಲ್ಲಿ ಪ್ರದರ್ಶಿಸಲಾಗಿದೆ.  ಹೊಸ ಚಿತ್ರ ಬಿಡುಗಡೆಯಾಗುವ ವರೆಗೂ ಪ್ರೇಕ್ಷಕರು ಚಿತ್ರಮಂದಿರಕ್ಕೆಬರುವುದು ಕಷ್ಟಕರ. ಹೀಗಾಗಿ, ದೊಡ್ಡ ನಟರ ಚಿತ್ರಗಳಬಿಡುಗಡೆ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಚಿತ್ರಮಂದಿರದಮಾಲಿಕರೊಬ್ಬರು ತಿಳಿಸಿದರು. ಇದಲ್ಲದೇ ಜಿಮ್‌, ಈಜುಕೊಳ, ಯೋಗ ಕೇಂದ್ರಗಳನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next