Advertisement

ದೇಶಾಭಿವೃದ್ಧಿಗೆ ಶ್ರಮಿಸುವ ಕಾರ್ಮಿಕರಿಗೆ ಪ್ರಧಾನಿ ಮೋದಿ ಸಲಾಂ

11:00 AM May 01, 2017 | udayavani editorial |

ಹೊಸದಿಲ್ಲಿ : ಮೇ 1ರ ಕಾರ್ಮಿಕ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕಾರ್ಮಿರಿಗೆ ಸಲಾಂ ಹೇಳಿದ್ದಾರೆ. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಕಾರ್ಮಿಕರು ಅತ್ಯಂತ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. 

Advertisement

“ಕಾರ್ಮಿಕ ದಿನದಂದು ನಾವು ದೇಶದ ಸಮಸ್ತ ಕಾರ್ಮಿಕರಿಗೆ ಅವರ ದೃಢ ಸಂಕಲ್ಪ ಹಾಗೂ ಕಠಿನ ಪರಿಶ್ರಮಕ್ಕಾಗಿ ಹಾಗೂ ಅವರು ದೇಶದ ಆರ್ಥಿಕಾಭಿವೃದ್ಧಿಯಲ್ಲಿ ವಹಿಸುತ್ತಿರುವ ದೊಡ್ಡ ಪಾತ್ರಕ್ಕಾಗಿ ಪ್ರಣಾಮಗಳನ್ನು  ಹೇಳುತ್ತೇವೆ; ಶ್ರಮ ಏವ ಜಯತೇ!’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. 

ಮೇ. 1ರ ಅಂತಾಷ್ಟ್ರೀಯ ಕಾರ್ಮಿಕರ ದಿನವನ್ನು ಕಾರ್ಮಿಕರ ದಿನವೆಂದು ಆಚರಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಗುಜರಾತ್‌ ಮತ್ತು ಮಹಾರಾಷ್ಟ್ರಕ್ಕೂ ಪ್ರಧಾನಿ ಮೋದಿ ಅಭಿನಂದನೆಗಳನ್ನು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next