Advertisement

ಬಳ್ಳಾರಿ, ಮಂಗಳೂರು, ಬೆಳಗಾವಿಯಲ್ಲಿ ಪ್ರಯೋಗಾಲಯ

09:32 PM Mar 22, 2020 | Lakshmi GovindaRaj |

ಬೆಂಗಳೂರು: ಮುಂದಿನ ನಾಲ್ಕು ದಿನಗಳಲ್ಲಿ ಬಳ್ಳಾರಿ, ಮಂಗಳೂರು, ಬೆಳಗಾವಿಯಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯಗಳು ಆರಂಭವಾಗಲಿವೆ ಎಂದು ರಾಜ್ಯ ಕೊರೊನಾ ಪ್ರಯೋಗಾಲಯಗಳ ಹೆಚ್ಚುವರಿ ಕರ್ತವ್ಯಾಧಿಕಾರಿ ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

Advertisement

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆಯು ಶನಿವಾರ ಶಂಕಿತರ ಪರೀಕ್ಷಾ ನಿಯಮ ತಿದ್ದುಪಡಿ ಮಾಡಿತ್ತು. ಇದರಿಂದ ಪರೀಕ್ಷೆಗೆ ಒಳಗಾಗುತ್ತಿರುವವರ ಸಂಖ್ಯೆ ನಿತ್ಯ 200 ರಿಂದ 250ಕ್ಕೆ ದಾಟುತ್ತಿದೆ. ಹೀಗಾಗಿ, ನೂತನ ಪ್ರಯೋಗಾಲಯಗಳು ಅತ್ಯಗತ್ಯವಾಗಿದ್ದವು.

ರಾಜ್ಯದಲ್ಲಿ ಹೊಸ ಪ್ರಯೋಗಾಲಯ ಆರಂಭ ಕುರಿತಿ ಮಾಹಿತಿ ನೀಡಿದ ಡಾ.ಸಿ.ಎನ್‌.ಮಂಜುನಾಥ್‌, ರಾಜ್ಯಕ್ಕೆ ಅಗತ್ಯ ಪ್ರಯೋಗಾಲಯಗಳ ನೀಡುವ ಕುರಿತು ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಅನುಮತಿ ಪಡೆಯಲಾಗುತ್ತಿದೆ. ಮುಂದಿನ ನಾಲ್ಕು ದಿನದೊಳಗೆ ಬಳ್ಳಾರಿ, ಮಂಗಳೂರು, ಬೆಳಗಾವಿಯಲ್ಲಿ ಮೆಡಿಕಲ್‌ ಕಾಲೇಜುಗಳಲ್ಲಿ ಪ್ರಯೋಗಾಲಯ ಆರಂಭಿಸಲಾಗುವುದು.

ಕಲಬುರಗಿಯಲ್ಲಿ ಎರಡು ದಿನಗಳಿಂದ ಪ್ರಯೋಗಾಲಯ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಬೆಂಗಳೂರಿನಲ್ಲಿಯೇ ಹೆಚ್ಚು ಶಂಕಿತರು ಇರುವುದರಿಂದ ನಿಮ್ಹಾನ್ಸ್‌ನಲ್ಲಿ ಎರಡು ದಿನಗಳಲ್ಲಿ ಪ್ರಯೋಗಾಲಯ ಪ್ರಾರಂಭವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next