ಆಲೂರು: ಕಾರ್ಮಿಕರು ದೇಶದ ಶಕ್ತಿ.ಹೀಗಾಗಿಯೇ ಮೇ 1 ನೇ ತಾರೀಕನ್ನು ವಿಶ್ವಕಾರ್ಮಿಕರ ದಿನಾಚರಣೆಯನ್ನಾಗಿ ಆಚ ರಿಸಿಕಾರ್ಮಿಕರ ಶ್ರಮವನ್ನೂ ಸ್ಮರಿಸುತ್ತೇವೆ.ಆದರೆ, ಕಾರ್ಮಿಕರ ದಿನದಂದೇ ಕೂಲಿಯಾಳು, ಊಟವಿಲ್ಲದೇ ಪರದಾಡಿ ರಸ್ತೆಬದಿಯಲ್ಲಿ ಎಸೆದಿದ್ದ ಕಸದ ರಾಶಿ ಮಧ್ಯೆ ಇಟ್ಟ ಊಟದ ಎಲೆಗಳ ಮಧ್ಯೆ ಕುಳಿತು, ಒಂದೊಂದೇ ಅನ್ನದ ಅಗಳನ್ನು ಎತ್ತಿಕೊಂಡು ತಿನ್ನುತ್ತಿದ್ದ ದೃಶ್ಯನೋಡಿದ ದಾರಿ ಹೋಕರ ಕಣ್ಣಾಲಿಗಳು ತುಂಬಿಹೋಗಿದ್ದವು.
ಕಣ್ಣೀರು: ಅರಸೀಕೆರೆ ತಾಲೂಕು ತಂತನಹಳ್ಳಿಕೆರೆ ಗ್ರಾಮದ ರಾಜು (38) ಹೊಟ್ಟೆ ಹಸಿವು ತಾಳಲಾರದೆ ರಸ್ತೆ ಬದಿ ಬಿದ್ದಿದ್ದ ಕಸದ ರಾಶಿಯಲ್ಲಿನ ಅನ್ನವನ್ನು ತಿನ್ನುತ್ತಿದ್ದರು.ದಾರಿ ಹೋಕ ಸಾರ್ವಜನಿಕರೊಬ್ಬರುವಿಚಾರಿಸಿದಾಗ, ಹೊಟ್ಟೆ ಹಸಿವು ತಾಳಲಾರದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ವರ್ಷದ ಹಿಂದೆ ಆಲೂರಿಗೆ ಬಂದಿದ್ದಾರೆ. ಆದರೆ, ಈಗ ಕೆಲಸ ಕೈ ಕೊಟ್ಟಿದ್ದು ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಹೊಟ್ಟೆ ಹಸಿವು ತಾಳಲಾಗುತ್ತಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ ಎಂದು ರಾಜು ಕಣ್ಣೀರ ಹರಿಸಿದರು.
ಗಾರೆ ಕೆಲಸ: ವಿಷಯ ತಿಳಿದು ಸ್ಥಳಕ್ಕೆ ಬಂದತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಅನ್ನ-ಸಾಂಬರು ತಂದುನೀಡಿ ಊಟ ಬಡಿಸಿದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಸಿಬ್ಬಂದಿ ಜತೆಗೆ ಬಂದು ರಾಜುಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇತಮ್ಮ ಮನೆಗೆರಾಜು ಅವರನ್ನುಕರೆ ದುಕೊಂಡು ಹೋಗಿದ್ದು ಗಾರೆ ಕೆಲಸ ನೀಡುವುದಾಗಿ ತಿಳಿಸಿದ್ದಾರೆ.
ಊಟ ಮಾಡಲೂ ಹಣವಿರಲಿಲ್ಲ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಈ ಮಧ್ಯೆ ಕೂಲಿ ಸಿಗದ ಕಾರ್ಮಿಕನೋರ್ವ ಊರಿಗೆ ಹೋಗಲು ಹಾಗೂ ಊಟಕ್ಕೂ ಹಣವಿಲ್ಲದೇ,ಕಸದ ರಾಶಿ ಮಧ್ಯೆ ಕುಳಿತು ವಿಧಿಯಿಲ್ಲದೇ ಎಂಜಲೆಲೆಯಲ್ಲಿದ್ದ ಅಗಳನ್ನುತಿಂದಿದ್ದಾನೆ.
ತಾಲೂಕಿನ ಕೋನಪೇಟೆ ರಸ್ತೆಯಲ್ಲಿ ಶನಿವಾರ ಸಂಜೆ ಮನಮಿಡಿಯುವ ದೃಶ್ಯ ಕಂಡು ಬಂದಿದೆ. ಉದ್ಯೋಗ ಕಸಿದುಕೊಂಡಲಾಕ್‌ಡೌನ್, ಊರು ತಲುಪಲು ವಾಹನಗಳೂ ಇಲ್ಲ,ಟ್ಯಾಕ್ಸಿಗಳಿಗೆ ಬಾಡಿಗೆ ನೀಡುವಷ್ಟು ಶ್ರೀಮಂತನೂ ಅಲ್ಲ,ಹೊತ್ತಿನ ಊಟಕ್ಕೂ ಹಣವಿರಲಿಲ್ಲ.
ಟಿ.ಕೆ.ಕುಮಾರಸ್ವಾಮಿ ಆಲೂರು