Advertisement

ಮಾನವನ ದೇಹಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳು!

09:58 PM Nov 07, 2022 | Team Udayavani |

ಲಂಡನ್‌: ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್‌ ವಿಜ್ಞಾನಿಗಳು ವೈದ್ಯಕೀಯ ಪ್ರಯೋಗದ ಭಾಗವಾಗಿ, ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳನ್ನು ಮಾನವರ ದೇಹಕ್ಕೆ ವರ್ಗಾಯಿಸಿದ್ದಾರೆ.

Advertisement

ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಈ ಪ್ರಯೋಗ ಕೈಗೊಂಡಿದೆ.

“ಈ ಪ್ರಯೋಗವು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ, ರಕ್ತಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆಯಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳು ಕ್ರಾಂತಿಕಾರಿ ಪರಿಣಾಮ ಉಂಟುಮಾಡಲಿದೆ,’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

“ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅವರದೇ ಗುಂಪಿನ ರಕ್ತ ಸಿಗುವುದು ಕಷ್ಟಸಾಧ್ಯ. ರಕ್ತ ಕಣಗಳನ್ನು ದಾನಿಗಳ ಕಾಂಡಕೋಶದಿಂದ ಬೆಳಸಲಾಯಿತು. ನಂತರ ಕೆಂಪು ರಕ್ತ ಕಣಗಳನ್ನು ಆರೋಗ್ಯಕರ ಸ್ವಯಂ ಸೇವಕರ ದೇಹಕ್ಕೆ ವರ್ಗಾಯಿಸಲಾಯಿತು. ಈ ರೀತಿಯ ಪ್ರಯೋಗವು ವಿಶ್ವದಲ್ಲೇ ಇದೇ ಮೊದಲು,’ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next