Advertisement
ರೇವಣ್ಣ ಒಳ್ಳೆಯ ನಡವಳಿಕೆಯ ವ್ಯಕ್ತಿಯಲ್ಲ. ಪ್ರಜ್ವಲ್ ರೇವಣ್ಣ ಇಷ್ಟೊಂದು ದೌರ್ಜನ್ಯ ನಡೆಸುತ್ತಿದ್ದರೂ ಅವರ ಅಪ್ಪ, ಅಮ್ಮ ನೋಡಿಕೊಂಡು ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಸರ್ಕಾರ ಸೂಕ್ತ ತನಿಖೆ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು. ಪೆನ್‌ಡ್ರೈವ್ ಗಳು ಸಾರ್ವಜನಿಕರಿಗೆ ಸಿಗದಂತೆ ನೋಡಿಕೊಳ್ಳಬೇಕು. ಪ್ರಜ್ವಲ್ ರೇವಣ್ಣ ಗೆದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಫಲಿತಾಂಶಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಈಗ ಸಂತ್ರಸ್ತೆಯರ ಪರವಾಗಿ ನಿಲ್ಲಲಿ: ಹಿಂದೆ ನಾಗಮಂಗಲ ಕೆಂಚನಹಳ್ಳಿ ಗಂಗಾಧರಮೂರ್ತಿ ಅವರ ಕೊಲೆ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲದಿದ್ದರೂ ಇದೇ ದೇವೇಗೌಡರು ನನ್ನನ್ನು ಜೈಲಿಗೆ ಕಳುಹಿಸಲು 8 ಕಿ.ಮೀ. ದೂರ ಗಂಗಾಧರ ಮೂರ್ತಿ ಅವರ ಫೋಟೋ ಹೊತ್ತುಕೊಂಡು ಪಾದಯಾತ್ರೆ ಮಾಡಿದ್ದರು. ಆಗ ನಾನು ಎಷ್ಟು ನೋವು ಅನುಭವಿಸಿದ್ದೆನು. ಪ್ರಕರಣದಲ್ಲಿ ನನ್ನದು ಯಾವ ಪಾತ್ರ ಇರಲಿಲ್ಲ. ಅದಕ್ಕೆ ನ್ಯಾಯಾಲಯದ ತೀರ್ಪು ಎಲ್ಲರಿಗೂ ಗೊತ್ತಿದೆ. ಅದರಂತೆ ಇಂದು ಸಹ ಸಂತ್ರಸ್ತೆಯರ ಪರವಾಗಿ ಪಾದಯಾತ್ರೆ ಮಾಡಲಿ ಎಂದು ಆಗ್ರಹಿಸಿದರು.
ಒಕ್ಕಲಿಗ ಸಮುದಾಯಕ್ಕೆ ಅವಮಾನ: ಪ್ರಜ್ವಲ್ ರೇವಣ್ಣ ಪ್ರಕರಣವೂ ವಿಕೃತ ಕಾಮಿ ಉಮೇಶ್ ರೆಡ್ಡಿಗಿಂತಲೂ ದೊಡ್ಡ ಪ್ರಕರಣವಾಗಿದೆ. ಗೂಗಲ್‌ನಲ್ಲೂ ಸರ್ಚ್ ಮಾಡಿದರೆ ಇವರದ್ದೇ ಬರುತ್ತಿದೆ. ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾರೆ. ಆತನ ಕೆಲಸದಿಂದ ಇಡೀ ಒಕ್ಕಲಿಗ ಸಮುದಾಯ ತಲೆ ತಗ್ಗಿಸುವಂತಾಗಿದೆ. ಒಬ್ಬ ಜಿಪಂ ಮಾಜಿ ಸದಸ್ಯೆಯ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ಸ್ಥಿತಿಯೂ ಇದೇ ಆಗಿದೆ. 5 ವರ್ಷ ಇದೇ ಕೆಲಸ ಮಾಡಿದ್ದಾನೆ. ಆ ಕರ್ಮವನ್ನು ನೋಡಲಾಗುತ್ತಿಲ್ಲ. 3 ಸಾವಿರ ಮಹಿಳೆಯರು, ಪಕ್ಷದ ಕಾರ್ಯಕರ್ತರ ಮನೆಗಳು ಬೀದಿಗೆ ಬೀಳುವಂತಾಗಿದೆ ಎಂದು ಕಿಡಿಕಾರಿದರು.
ಒಕ್ಕಲಿಗರನ್ನು ತುಳಿದಿದ್ದು ಜನತಾದಳ ಸಾಧನೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಒಕ್ಕಲಿಗರು ಬೆಳೆಯದಂತೆ ತುಳಿದಿದ್ದಾರೆ. ಜೆಡಿಎಸ್ ಕಂಪನಿಯಿಂದಲೇ ನಾವೆಲ್ಲರೂ ತುಳಿತಕ್ಕೊಳಗಾಗಿ ದ್ದೇವೆ. ನೊಂದವರ ಶಾಪವೇ ದೇವೇಗೌಡರಿಗೆ ಈ ಸ್ಥಿತಿ ಬಂದಿದೆ. ಇದೀಗ ಅವರು ಅನುಭವಿಸು ವಂತಾಗಿದೆ. ಒಕ್ಕಲಿಗ ಕುಟುಂಬಗಳನ್ನು ಮೂಲೆಗುಂಪು ಮಾಡಿದರು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನನಗೆ 6 ತಿಂಗಳ ಕಾಲ ಸಂಸದರನ್ನಾಗಿ ಮಾಡಿದರು. ಆಗ ನಾನು ಸುಮಾರು 32 ಕೋಟಿ ರೂ. ಸಾಲಗಾರನಾದೆ. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ಕೊಡದೆ ನನಗೆ ಮೋಸ ಮಾಡಿ ತನ್ನ ಮಗನ ತಂದು ಮಂಡ್ಯದಲ್ಲಿ ಪ್ರತಿಷ್ಠಾಪಿಸಲು ಮುಂದಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಹೇಮರಾಜು, ಚೇತನ್, ಉಮೇಶ್, ರಮೇಶ್, ನಾಗರಾಜು ಉಪಸ್ಥಿತರಿದ್ದರು.