Advertisement

ಕವಿವಿ: ವಾಲಿಬಾಲ್‌ ಪಂದ್ಯಾವಳಿ

01:19 PM Mar 05, 2017 | Team Udayavani |

ನವಲಗುಂದ: ವಿದ್ಯಾರ್ಥಿಗಳು ಪಾಠ ಪ್ರವಚನದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸದೃಢ ದೇಹ ಹೊಂದಬಹುದು ಎಂದು ನ.ತಾ.ಶಿ.ಸ. ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ| ಬಿ.ಸಿ. ಪೂಜಾರ ಹೇಳಿದರು. 

Advertisement

ಇಲ್ಲಿನ ಶಂಕರ ಕಲಾ ಹಾಗೂವಾಣಿಜ್ಯ ವಿದ್ಯಾಲಯ ಆಯೋಜಿಸಿದ್ದ ಕವಿವಿ ಎರಡನೆ ವಲಯ ಮಟ್ಟದ ಅಂತರ್‌ ಮಹಾವಿದ್ಯಾಲಯಗಳ ಪುರುಷರ ವಾಲಿಬಾಲ್‌ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಗೆ ಸಾಕಷ್ಟು ಪ್ರೊàತ್ಸಾಹವಿದ್ದರೂ ಯುವಕರು ಉತ್ತಮ ಸಾಧನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ.

ಯುವಕರು ಕ್ರೀಡೆಯಲ್ಲಿ ಅಭಿರುಚಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್‌.ಬಿ.  ಯಳ್ಳೂರ ಮಾತನಾಡಿ,ಪಂದ್ಯಾವಳಿಯಲ್ಲಿ 14 ಕಾಲೇಜಿನ ತಂಡಗಳು ಪಾಲ್ಗೊಂಡಿವೆ. ಭಾಗವಹಿಸಿದ ಎಲ್ಲ ಆಟಗಾರರು ಸೋಲು-ಗೆಲುವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ ಕ್ರೀಡೆಗೆ ಗೌರವ ತರಬೇಕೆಂದರು. 

ಆಡಳಿತ ಮಂಡಳಿಯ ನಿರ್ದೇಶಕ ಬಸಣ್ಣ ಹಳ್ಳದ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಪಿ.ಜಿ. ಹಿರೇಮಠ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ| ಎಸ್‌.ವಿ. ಬಡಿಗೇರ, ಪ್ರೊ| ಎಸ್‌.ಎಸ್‌. ಕಾಡಮ್ಮನವರ, ಪ್ರೊ| ಎಂ.ವೈ. ಬುಳಗಣ್ಣವರ, ಪ್ರೊ| ಎಸ್‌.ಬಿ. ಬದಾಮಿ, ಡಾ| ಕಸ್ತೂರಿ ಬಿಕ್ಕಣ್ಣವರ, ಡಾ|  ಶೀಲಾ ತುಬಚಿ, ಪ್ರೊ| ರಮೇಶ ಚವ್ಹಾಣ, ವಾಲಿಬಾಲ್‌ ವಿಭಾಗದ ಕಾರ್ಯಾಧ್ಯಕ್ಷ ಮಹೇಶ ಕುರ್ತಕೋಟಿ ಇದ್ದರು. ಪ್ರೊ| ಎ.ಜಿ.ಜಕ್ಕನಗೌಡರ ಸ್ವಾಗತಿಸಿದರು. ಪ್ರೊ| ಬಿ.ಎಚ್‌.ಹೂಗಾರ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next