Advertisement

ಗಡ್ಡಪ್ಪ,ರಾಮ್‌ ರೆಡ್ಡಿಗೆ ಕೆ.ವಿಶ್ವನಾಥ್‌ ಪ್ರಶಸ್ತಿ

12:07 PM Jun 15, 2017 | |

“ತಿಥಿ’ ಚಿತ್ರಕ್ಕೆ ಅದೆಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಕ್ಕೆ ನಿರ್ದೇಶಕ ರಾಮ್‌ ರೆಡ್ಡಿ ಲೆಕ್ಕ ಇಟ್ಟಿದ್ದಾರೋ, ಇಲ್ಲವೋ ಗೊತ್ತಿಲ್ಲ. ಅಷ್ಟೊಂದು ಸಂಖ್ಯೆಯ ಪ್ರಶಸ್ತಿಗಳು ರಾಮ್‌ ಮತ್ತು “ತಿಥಿ’ ಚಿತ್ರತಂಡಕ್ಕೆ ಸಿಕ್ಕಿದೆ. ಈಗ ಆ ಸಾಲಿಗೆ ಇನ್ನೂ ಒಂದು ಹೊಸ ಪ್ರಶಸ್ತಿ ಸೇರಿಕೊಂಡಿದೆ. 

Advertisement

ಮುಂದಿನ ಮಂಗಳವಾರ (ಜೂನ್‌ 20)ಕ್ಕೆ ಹೈದರಾಬಾದ್‌ನ ಶಿಲ್ಪ ಕಲಾ ವೇದಿಕಾದಲ್ಲಿ ನಡೆಯಲಿರುವ ಡಾ.ಕೆ. ವಿಶ್ವನಾಥ್‌ ಸಿನಿಮಾ ಪ್ರಶಸ್ತಿ ಸಮಾರಂಭದಲ್ಲಿ “ತಿಥಿ’ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ರಾಮ್‌ ರೆಡ್ಡಿಗೆ ಮತ್ತು ನಟನೆಗೆ ಗಡ್ಡಪ್ಪ ಅವರಿಗೆ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯನ್ನು ಸ್ಥಾಪಿಸಿರುವುದು ಹಿರಿಯ ನಟಿ ತುಳಸಿ ಶಿವಮಣಿ. ಕೆ. ವಿಶ್ವನಾಥ್‌ ನಿರ್ದೇಶನದ “ಶಂಕರಾಭರಣಂ’ ಚಿತ್ರದ ಮೂಲಕ ತುಳಸಿ ಅವರು ಚಿತ್ರರಂಗಕ್ಕೆ ಬಾಲನಟಿಯಾಗಿ ಎಂಟ್ರಿ ಕೊಟ್ಟವರು. ಅಲ್ಲಿಂದ ಇಲ್ಲಿಯವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 

ಚಿತ್ರರಂಗಕ್ಕೆ ಪರಿಚಯಿಸಿದ ಗುರುಗಳಿಗೆ ವಂದನೆ ಸಲ್ಲಿಸುವುದಕ್ಕೆ ಅವರು ಕೆ. ವಿಶ್ವನಾಥ್‌ ಸಿನಿಮಾ ಪ್ರಶಸ್ತಿ ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದಂತೆ. ಹಾಗಾಗಿ ಕನ್ನಡವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೂ ಅಂದು ಪ್ರಶಸ್ತಿ ಸಿಗಲಿದೆ. ಈ ಕಾರ್ಯಕ್ರಮವನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲರಾದ ಇ.ಎಸ್‌.ಎಲ್‌. ನರಸಿಂಹನ್‌ ಉದ್ಘಾಟಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next