Advertisement
ತೃಪ್ತಿ, ಮಾನವೀಯ ಗುಣ ಅಗತ್ಯ: ಹೆಗ್ಡೆಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಇಂದು ಸಾಂವಿಧಾನಿಕ ಅಂಗಗಳು ಮತ್ತು ಮಾಧ್ಯಮ ಸಂ¤ಭ ದುರ್ಬಲವಾಗಿವೆ. ಸಮಾಜ ಬದಲಾವಣೆ ಕ್ರಾಂತಿಯಿಂದಲ್ಲ, ಶಾಂತಿ ಮಾರ್ಗದ ಮೂಲಕ ನಡೆಯಬೇಕು. ಕ್ರಾಂತಿಯಿಂದ ಮದ್ಯಮ ವರ್ಗಕ್ಕೆ ಹೊಡೆತ ಬೀಳುವುದು. ಅದಕ್ಕಾಗಿ ಯುವಜನತೆಯಲ್ಲಿ ತೃಪ್ತಿ ಮತ್ತು ಮಾನವೀಯ ಗುಣವನ್ನು ಬೆಳೆಸಬೇಕಾಗಿದೆ ಎಂದರು. ಪ್ರಾಮಾಣಿಕರ ಬಗ್ಗೆ ನಂಬಿಕೆ ಇಲ್ಲವಾಗಿದೆ. ಓದು, ಶ್ರೀಮಂತ ಎಂಬ ಹಲವಾರು ಬಯಕೆಗಳು ತಪ್ಪಲ್ಲ. ಶ್ರೀಮಂತಿಕೆಯೂ ಕಾನೂನು ಚೌಕಟ್ಟಿನೊಳಗಿರಬೇಕು. ಅನ್ಯರ ಹೊಟ್ಟೆ, ಜೇಬಿಗೆ ಕೈಹಾಕಿ ಕಿತ್ತುಕೊಳ್ಳುವುದು ನಿಜವಾದ ಸಂಪತ್ತಲ್ಲ ಎಂದರು.
ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಮಾತನಾಡಿ, ದುರ್ಜನರ ಸಕ್ರಿಯತೆ ಮತ್ತು ಸಜ್ಜನರ ನಿಷ್ಕ್ರಿಯತೆ ಸಮಾಜಕ್ಕೆ ಎರಡೂ ಅಪಾಯಕಾರಿ. ಸಜ್ಜನರು ಸಕ್ರಿಯರಾಗಿ ಕಾರ್ಯಪ್ರವೃತ್ತರಾದಾಗ ಡಾ| ಕುರುಂಜಿ ಅವರಂತಹ ಸಾಧನೆ ಸಾಧ್ಯವಿದೆ. ಕುರುಂಜಿ ಅವರಿಗೆ ಸಮಾಜಮುಖಿ ಚಿಂತನೆ ಇದ್ದುದರಿಂದಲೇ ಬೃಹತ್ ಮಟ್ಟ ದಲ್ಲಿ ಅಭಿವೃದ್ಧಿಯ ಸಾಧನೆಗಳಾದವು. ಅವರು ಸುಳ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರಲ್ಲಿ ಸಮಾಜದ ಎಲ್ಲರನ್ನೂ ಪ್ರೋತ್ಸಾಹಿಸಿ ಬೆಳೆಸುವ ಗುಣವಿತ್ತು ಎಂದರು.