Advertisement

Kuwait Emir : ಕುವೈತ್‌ ರಾಜಕುಮಾರ ಶೇಖ್ ನವಾಫ್ ಅಲ್ ಅಹ್ಮದ್ ಅಲ್ ಸಬಾಹ್ ವಿಧಿವಶ

05:38 PM Dec 16, 2023 | sudhir |

ಕುವೈತ್: ತೈಲ ಸಮೃದ್ಧ ಕುವೈತ್‌ನ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಅವರು ಶನಿವಾರ ನಿಧನರಾದರು ಎಂದು ರಾಯಲ್ ಕೋರ್ಟ್ ಹೇಳಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

Advertisement

ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ ಅವರ ನಿಧನದ ಸುದ್ದಿಯನ್ನು ರಾಜಮನೆತನ ಹೊರಡಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ನವೆಂಬರ್ 29 ರಂದು, ತುರ್ತು ಆರೋಗ್ಯ ಸಮಸ್ಯೆಯ ನಂತರ ನವಾಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಇಂದು (ಡಿ.16) ರಂದು ನಿಧನರಾದರು.

ಶೇಖ್ ನವಾಫ್ ಅವರ ಸಹೋದರನ ನಿಧನದ ನಂತರ ಕಳೆದ 2020ರಂದು ಅಧಿಕಾರ ವಹಿಸಿಕೊಂಡಿದ್ದರು.

ಶೇಖ್ ನವಾಫ್ ಅವರ ಸಹೋದರ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅವರು 2020 ರಲ್ಲಿ ಮರಣ ಹೊಂದಿದ ನಂತರ ಅವರ ಸ್ಥಾನವನ್ನು ಶೇಖ್ ನವಾಫ್ ಪಡೆದುಕೊಂಡಿದ್ದರು. ರಾಜತಾಂತ್ರಿಕತೆ ಮತ್ತು ಶಾಂತಿ ಸ್ಥಾಪನೆಗೆ ಹೆಸರುವಾಸಿಯಾದ ಶೇಖ್ ಸಬಾಹ್ ಅವರ ಅಗಲುವಿಕೆ ದೇಶದಾದ್ಯಂತ ಸುದ್ದಿಯಾಗಿತ್ತು.

Advertisement

ಇದನ್ನೂ ಓದಿ: Sagara: ಆ್ಯಂಬುಲೆನ್ಸ್‌ ಸೇವೆಯ ಕೊರತೆ; ಕರೂರು ಭಾಗದಲ್ಲಿ ರೋಗಿಗಳಿಗೆ ಖಾಸಗಿ ವಾಹನವೇ ಗತಿ!

Advertisement

Udayavani is now on Telegram. Click here to join our channel and stay updated with the latest news.

Next