Advertisement

ಕುವೈಟ್‌ ಕನ್ನಡಿಗರ ಕೈ ಬಿಟ್ಟ ಸರಕಾರ !

08:10 AM Jun 15, 2020 | mahesh |

ಮಂಗಳೂರು: ಕೋವಿಡ್ ಲಾಕ್‌ಡೌನ್‌ ಕಾರಣದಿಂದ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಶ್ರಮಪಡುತ್ತಿದ್ದರೂ, ಕುವೈಟ್‌ನಲ್ಲಿರುವ ಕನ್ನಡಿಗರನ್ನು ಕರೆತರುವಲ್ಲಿ ನಿರಾಸಕ್ತಿ ತೋರಿದೆ. ಕುವೈಟ್‌ನಿಂದ ಕೇರಳದ ವಿವಿಧ ಏರ್‌ಪೋರ್ಟ್‌ಗಳಿಗೆ ಸುಮಾರು 10 ವಿಮಾನ ಆಗಮಿಸಿವೆ. ಉಳಿದಂತೆ ಆಂಧ್ರ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಸಹಿತ ವಿವಿಧ ರಾಜ್ಯಗಳಿಗೆ ಕುವೈಟ್‌ನಲ್ಲಿರುವ ಭಾರತೀಯರನ್ನು ಕರೆತರುವಲ್ಲಿ ಆಯಾ ರಾಜ್ಯ ಸರಕಾರ ಶ್ರಮಿಸಿದ್ದವು. ಆದರೆ, ಕುವೈಟ್‌ನಿಂದ ಕನ್ನಡಿಗರನ್ನು ಕರೆ ತರಲು ಇಲ್ಲಿಯವರೆಗೆ ಒಂದು ವಿಮಾನ ಕೂಡ ನಿಗದಿಯಾಗಿಲ್ಲ. ಜೂ.16ಕ್ಕೆ ಮಂಗಳೂರಿಗೆ ಕುವೈಟ್‌ ವಿಮಾನ ಆಗಮಿಸುವ ಬಗ್ಗೆ ನಿರ್ಧಾರವಾಗಿ ದ್ದರೂ ಅದು ಕೂಡ ಸದ್ಯ ರದ್ದುಗೊಂಡಿದೆ.

Advertisement

ವಿವಿಧ ದೇಶದಲ್ಲಿರುವ ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಎನ್‌ಆರ್‌ಐ ಮಾಜಿ ಅಧ್ಯಕ್ಷೆ ಡಾ| ಆರತಿ ಕೃಷ್ಣ ಅವರು ಉದಯವಾಣಿ ಜತೆಗೆ ಮಾತನಾಡಿ, “ಕುವೈಟ್‌ನಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂಬ ಕಾರಣವನ್ನು ಅಲ್ಲಿನ ರಾಯಭಾರ ಕಚೇರಿ ವರದಿ ನೀಡಿತ್ತು. ಹೀಗಾಗಿ ವಿಮಾನ ಸೇವೆ ದೊರಕಲಿಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿ ಕುವೈಟ್‌-ಬಹ್ರೈನ್‌ ಮೂಲಕ ವಿಮಾನಕ್ಕೆ ಆಸಕ್ತಿ ತೋರಬೇಕು’ ಎಂದರು. ಕುವೈಟ್‌ನಲ್ಲಿರುವ ಮೋಹನ್‌ದಾಸ್‌ ಕಾಮತ್‌ ಉದಯವಾಣಿ ಜತೆಗೆ ಮಾತನಾಡಿ, ದೇಶದ ಎಲ್ಲ ರಾಜ್ಯಗಳಿಗೂ ವಿಮಾನ ಸೇವೆ ಇದೆ. ಆದರೆ ಕರ್ನಾಟಕಕ್ಕೆ ಒಂದೂ ಕೂಡ ಇಲ್ಲ. ಹೀಗಾಗಿ ತುರ್ತಾಗಿ ಹೋಗುವವರಿಗೆ ವಿಮಾನ ವ್ಯವಸ್ಥೆ ಮಾಡುವಂತೆ ಕೇಂದ್ರ-ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next