Advertisement

ಹಾಟ್‌ ಆಗ್ತಿದೆ ಕುವೈತ್‌: ಜೀವಿಸಲು ಯೋಗ್ಯವಲ್ಲದ ದೇಶವಾಗುವತ್ತ ದಾಪುಗಾಲು

08:06 PM Jan 17, 2022 | Team Udayavani |

ಕುವೈತ್‌: ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಒಂದು ಎನಿಸಿಕೊಂಡಿರುವ ಕುವೈತ್‌ ಇದೀಗ ವಾಸಿಸಲು ಯೋಗ್ಯವಲ್ಲದ ರಾಷ್ಟ್ರ ಎನ್ನುವ ಪಟ್ಟದತ್ತ ತಿರುಗುತ್ತಿದೆ. ಅಲ್ಲಿನ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ, ಜನರಿಗೆ ಮನೆಯಿಂದ ಹೊರಗೆ ಬರುವುದೇ ದೊಡ್ಡ ಸಮಸ್ಯೆಯಾಗಿದೆ.

Advertisement

2016ರಲ್ಲಿ ಕುವೈತ್‌ ನಗರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿಕೊಂಡಿದ್ದು. 76 ವರ್ಷಗಳಲ್ಲಿ ಭೂಮಿಯ ಮೇಲೆ ವರದಿಯಾದ ಅತ್ಯಧಿಕ ಉಷ್ಣಾಂಶ ಅದಾಗಿತ್ತು. ಕಳೆದ ವರ್ಷವೂ ಕುವೈತ್‌ನ ತಾಪಮಾನ 50 ಡಿಗ್ರಿ ಸೆಲ್ಸಿಯೆಸ್‌ ತಲುಪಿದೆ. 2071-2100ರ ವೇಳೆಗೆ ಉಷ್ಣಾಂಶದಲ್ಲಿ ಇನ್ನೂ 4.5 ಡಿಗ್ರಿ ಸೆಲ್ಸಿಯೆಸ್‌ ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿಯಾದ ದನದ ಕೊಟ್ಟಿಗೆ: ಸಾವಿರಾರು ರೂ. ಒಣ ಹುಲ್ಲು ಭಸ್ಮ

ಎಲ್ಲ ಇದ್ದರೂ ನಿಯಂತ್ರಣವಿಲ್ಲ:
ಕುವೈತ್‌ ಹಿಂದುಳಿದ ರಾಷ್ಟ್ರವಲ್ಲ. ಕಚ್ಚಾ ಇಂಧನ ತಯಾರಿಕೆಯನ್ನೇ ಮುಖ್ಯ ಉದ್ಯಮವನ್ನಾಗಿಸಿಕೊಂಡಿರುವ ಈ ರಾಷ್ಟ್ರದಲ್ಲಿ ಜನಸಂಖ್ಯೆಯೂ ಕಡಿಮೆಯೇ. ಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ರೀತಿಯ ಸೌಲಭ್ಯವಿದ್ದರೂ ರಾಷ್ಟ್ರಕ್ಕೆ ಮಾಲಿನ್ಯ ನಿಯಂತ್ರಣ ಸಾಧ್ಯವಾಗುತ್ತಿಲ್ಲ. 2035ರೊಳಗೆ ಹಸಿರುಮನೆ ಹೊರಸೂಸುವಿಕೆಯನ್ನು ಶೇ.7.4ರಷ್ಟು ಕಡಿಮೆಗೊಳಿಸುವುದಾಗಿ ಇತ್ತೀಚೆಗೆ ಮುಕ್ತಾಯವಾದ ತಾಪಮಾನ ಶೃಂಗಸಭೆಯಲ್ಲಿ ಕುವೈತ್‌ ಪ್ರತಿಜ್ಞೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next