Advertisement

ಕುವೆಂಪು ವಿವಿ ವೆಬ್‌ಸೈಟ್‌ ಹ್ಯಾಕ್‌!

06:30 AM May 29, 2018 | Team Udayavani |

ಶಿವಮೊಗ್ಗ: ವೆಬ್‌ಸೈಟ್‌ ಹ್ಯಾಕರ್‌ಗಳ ಕಣ್ಣು ಇದೀಗ ಮಲೆನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದೆನಿಸಿಕೊಂಡಿರುವ ಕುವೆಂಪು ವಿವಿ ವೆಬ್‌ಸೈಟ್‌ ಮೇಲೆ ಬಿದ್ದಿದೆ. ವಿವಿಯ ವೆಬ್‌ಸೈಟ್‌ನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಲ್ಲದೆ,
ಮುಖಪುಟದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಬರೆದಿರುವುದು ಸೋಮವಾರ ಬೆಳಕಿಗೆ ಬಂದಿದೆ.

Advertisement

ವೆಬ್‌ಸೈಟ್‌ನ ಮುಖಪುಟದಲ್ಲೇ “ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಬರೆಯಲಾಗಿದೆ. ವಿವಿಯ ಅಧಿಕೃತ ವೆಬ್‌
ಸೈಟ್‌ನ್ನು ಭಾನುವಾರ ರಾತ್ರಿ ಹ್ಯಾಕ್‌ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಬೆಳಗ್ಗೆ ವೆಬ್‌ಸೈಟ್‌ ಬಳಕೆಗೆ ಮುಂದಾದ ವಿದ್ಯಾರ್ಥಿಗಳು, ಸಿಬ್ಬಂದಿಗೆ ಶಾಕ್‌ ಆಯಿತು. ಪ್ರತಿನಿತ್ಯ ತೆರೆದುಕೊಳ್ಳುತ್ತಿದ್ದ ವೆಬ್‌ಸೈಟ್‌ನ ಮುಖಪುಟ ಹ್ಯಾಕ್‌ ಆಗಿರುವುದು ಗಮನಕ್ಕೆ ಬಂತು. ತಕ್ಷಣ ಕುಲಪತಿ ಗಮನಕ್ಕೆ ತಂದರು. ಮಧ್ಯಾಹ್ನದ ಬಳಿಕ ವಿವಿ ತಾಂತ್ರಿಕ ಸಿಬ್ಬಂದಿ ವೆಬ್‌ಸೈಟ್‌ ಸರಿಪಡಿಸಿದ್ದು, ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಕುರಿತು ವಿವಿ ಕುಲಪತಿ ಪ್ರೊ|
ಜೋಗನ್‌ ಶಂಕರ್‌, ವಿವಿ ವೆಬ್‌ಸೈಟ್‌ ಹ್ಯಾಕ್‌ ಆಗಿತ್ತು. ಭಾನುವಾರ ರಾತ್ರಿ ಚೆನ್ನಾಗಿತ್ತು. ಸೋಮವಾರ ಬೆಳಗ್ಗೆ ಹ್ಯಾಕ್‌
ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ನಮ್ಮ ತಾಂತ್ರಿಕ ಪರಿಣತರ ತಂಡ ವೆಬ್‌ಸೈಟ್‌ನ್ನು ರೀಸ್ಟೋರ್‌ ಮಾಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸೈಬರ್‌ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next